ಯಾದಗಿರಿ: ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದ ಕವಿ ಸರ್ವಜ್ಞನ ವಚನಗಳು ಇಂದಿನ ಯುವಜನಾಂಗ ಹಾಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಕಲಬುರ್ಗಿ ಕಾಡಾ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ಹೇಳಿದರು. ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕವಿ ಸರ್ವಜ್ಞನ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರ ಆದರ್ಶ, ಜೀವನ ಶೈಲಿಯನ್ನು ಇಂದಿನ ಸಮಾಜಕ್ಕೆ ಪರಿಚಯಿಸುವ ಮತ್ತು ಅವರ ಆದರ್ಶ ಗುಣಗಳ ಮೂಲಕ ಆದರ್ಶ ಮತ್ತು ಜಾತ್ಯತೀತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಶರಣರ ಜಯಂತಿಗಳ ಆಚರಣೆಗೆ ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಕವಿ ಸರ್ವಜ್ಞನ ವಚನಗಳು ಸಾಮಾಜಿಕ ಸುಧಾರಣೆ, ಜಾತ್ಯತೀತ, ಮಾನವೀಯ ಮೌಲ್ಯ ಹಾಗೂ ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತವೆ. ಸರಳ, ಸಜ್ಜನಿಕೆ ಹಾಗೂ ಆದರ್ಶ ಗುಣಗಳನ್ನು ಹೊಂದಿದ್ದ ಸರ್ವಜ್ಞ, ಸುಂದರ ಹಾಗೂ ಆದರ್ಶ ಸಮಾಜವನ್ನು ನಿರ್ಮಿಸಲು ನಿರಂತರ ಶ್ರಮಿಸಿದರು. ಸರ್ವಜ್ಞನ ಅತ್ಯಮೂಲ್ಯ ವಚನಗಳನ್ನು ಮಕ್ಕಳು, ಯುವಜನಾಂಗ ಅರ್ಥ ಮಾಡಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ಕವಿ ಸರ್ವಜ್ಞನ ಮೂರ್ತಿ ಪ್ರತಿಷ್ಠಾಪಿಸುವ ಬಗ್ಗೆ ಮನವಿ ಬಂದಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಜೊತೆ ಚರ್ಚಿಸಿ, ಮೂರ್ತಿ ಪ್ರತಿಷ್ಠಾಪನೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಉಪನ್ಯಾಸ ನೀಡಿದ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಷಚಂದ್ರ ಕೌಲಗಿ, ಕವಿ ಸರ್ವಜ್ಞ ಸೌಜನ್ಯಶೀಲ, ವಿಧೇಯಕ, ಗೌರವಯುತವಾಗಿ ಬಾಳಿ, ಬದುಕಿ ಸಮಾಜ ತಿದ್ದುವ ಕೆಲಸ ಮಾಡಿದರು. ಹಳ್ಳಿಯ ಜಾನಪದ ಭಾಷಾ ಶೈಲಿಯಲ್ಲಿ, ಸಾಮಾನ್ಯ ಜನರಿಗೆ ಮನವರಿ ಕೆಯಾಗುವಂತಹ ವಚನಗಳನ್ನು ರಚಿಸಿದರು.

ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ರಚಿಸದ ವಿಷಯವೇ ಇಲ್ಲ ಎಂಬಂತೆ ಸಮಾಜಕ್ಕೆ ಅನುಕೂಲ ವಾಗುವ ಪ್ರತಿಯೊಂದು ವಿಷಯಗಳ, ಸಮಸ್ಯೆಗಳ ಮೇಲೆ ಬೆಳಕು ಚಲ್ಲುವಂತಹ ಕಾರ್ಯವನ್ನು ಸರ್ವಜ್ಞ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಸುಮಾರು 7ಸಾವಿರ ತ್ರಿಪದಿಗಳ ಬಗ್ಗೆ ಅಧ್ಯಯನ ನಡೆಸಿ, ವಿದ್ಯಾರ್ಥಿಗಳೂ ತಮ್ಮ ಮುಂದಿನ ಜೀವನವನ್ನು ಹಸನಾಗಿಸಿಕೊಳ್ಳುವಂತೆ ತಿಳಿಸಿದರು.

ನಗರಸಭೆ ಅಧ್ಯಕ್ಷ ಸುರೇಶ ಕೋಟಿಮನಿ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ದುರ್ಗೇಶ ರುದ್ರಾಕ್ಷಿ, ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರ ಲಕ್ಕಮ್, ತಹಶೀಲ್ದಾರ ಸಿದ್ದಲಿಂಗಪ್ಪ ನಾಯಕ, ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಸಮಾಜದ ಮುಖಂಡ ಶೇಖರಪ್ಪ ಅರ್ಜುಣಗಿ ವೇದಿಕೆಯಲ್ಲಿದ್ದರು.

ಕವಿ ಸರ್ವಜ್ಞ 7 ಸಾವಿರ ತ್ರಿಪದಿಗಳನ್ನು ರಚಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಿದ್ದಾರೆ.
-ಶ್ರೀನಿವಾಸರಡ್ಡಿ ಕಂದಕೂರ, ಕಲಬುರ್ಗಿ ಕಾಡಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.