ಶನಿವಾರ, ಜೂನ್ 19, 2021
22 °C

‘ಸಾಲ ವಸೂಲಿಗೆ ಹೊಸ ಕಾನೂನು ರೂಪಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬ್ಯಾಂಕ್‌ಗಳಲ್ಲಿ ಅನುತ್ಪಾ­ದಕ ಆಸ್ತಿ (ಎನ್‌ಪಿಎ) ಆಗಿ ಮಾರ್ಪಟ್ಟಿರುವ ಬಾಕಿ ಸಾಲದ ವಸೂಲಿಗೆ ಸೂಕ್ತ ಕಾನೂನು ರೂಪಿಸುವ ಅಗತ್ಯವಿದೆ’ ಎಂದು ಭಾರತೀಯ ಬ್ಯಾಂಕ್‌ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಬಿಸ್ವಾಸ್‌ ಹೇಳಿದರು.ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ­ಗೋಷ್ಠಿ­ಯಲ್ಲಿ ಮಾತನಾಡಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ದೊಡ್ಡ ಉದ್ಯಮಿಗಳಿಂದ ₨1,40,000 ಕೋಟಿಯಷ್ಟು ವಸೂಲಾಗದ ಸಾಲ ಇದೆ. ಇದರಿಂದ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಸಾಲ ವಸೂಲಿಗೆ ಸೂಕ್ತ ಕಾನೂನು ರೂಪಿಸ­ಬೇಕಾದ ಅಗತ್ಯವಿದೆ  ಎಂದರು.ಮಾ. 8 ಮತ್ತು 9ರಂದು ಗಾಂಧಿನಗರದ ತೇರಾ­ಪಂಥ್‌ ಭವನದಲ್ಲಿ 2ನೇ ಅಖಿಲ ಭಾರತ ಬ್ಯಾಂಕ್‌ ಮಹಿಳಾ ನೌಕರರ ಸಮಾವೇಶವವನ್ನು ಆಯೋಜಿಸಲಾಗಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗ­ಮೋಹನ್‌­ದಾಸ್‌ ಅವರು ಸಮಾವೇಶವನ್ನು ಉದ್ಘಾಟಿಸಲಿ­ದ್ದಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.