ಭಾನುವಾರ, ಮಾರ್ಚ್ 7, 2021
27 °C
ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದಿಂದ ‘ಛಾಯಾಸಂಭ್ರಮ’ಕ್ಕೆ ಚಾಲನೆ

‘ಸಾವಿರ ನುಡಿಗಿಂತ ಚಿತ್ರ ಮೇಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾವಿರ ನುಡಿಗಿಂತ ಚಿತ್ರ ಮೇಲು’

ಬಾಗಲಕೋಟೆ: ಒಂದು ವಿಷಯದ ಬಗ್ಗೆ ಸಾವಿರ ಪದಗಳ ಮೂಲಕ ಹೇಳುವುದಕ್ಕಿಂತ ಒಂದು ಛಾಯಾಚಿತ್ರದ ಮೂಲಕ ಜನರಿಗೆ ಅದರ ಮಹತ್ವ ತಿಳಿಸುವುದು ಸುಲಭ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.



ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದಿಂದ ಏರ್ಪಡಿಸಿದ್ದ ‘ಛಾಯಾ ಸಂಭ್ರಮ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ತಂತ್ರಜ್ಞಾನ ಸಮರ್ಥವಾಗಿ ಬಳಸಿಕೊಂಡು ಛಾಯಾಚಿತ್ರ ಕ್ಷೇತ್ರ ಮುಂದುವರಿದಿದೆ ಎಂದು ತಿಳಿಸಿದರು.



ಭೂಗರ್ಭದಲ್ಲಿರುವ ಮತ್ತು ಮಂಗಳ ಗ್ರಹದಲ್ಲಿರುವ ಚಿತ್ರಣವನ್ನು ಛಾಯಾಚಿತ್ರದಿಂದ ತಿಳಿದುಕೊಳ್ಳಬಹುದಾಗಿದ್ದು, ಅಷ್ಟೊಂದು ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.



ಹಿಂದೆ ಛಾಯಾಚಿತ್ರಗ್ರಾಹಕರಿಗಾಗಿ ಕಾಯುವಂತಹ ಸ್ಥಿತಿ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳಲ್ಲಿ ಛಾಯಾಚಿತ್ರ ತೆಗೆಯುವಂತಹ ಹವ್ಯಾಸ ಎಲ್ಲರಲ್ಲಿಯೂ ಮೂಡಿದೆ ಎಂದರು.



ಛಾಯಾಚಿತ್ರ ಗ್ರಾಹಕರ ಸಂಘದ ಶಿರಸಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ ಮಾತನಾಡಿ, ಕಳೆದ ಎಂಟತ್ತು ವರ್ಷಗಳ ಹಿಂದೆ ಫೋಟೋಗ್ರಾಫರ್‌ಗಳು ಸಾಕಷ್ಟು ತೊಂದರೆಯಲ್ಲಿದ್ದರು. ರಾಜ್ಯದಲ್ಲಿ ಕಳೆದ ಆರು ವರ್ಷಗಳ ಹಿಂದೆ ಪ್ರಾರಂಭವಾದ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಶನ್ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಫೋಟೋಗ್ರಾಫರ್‌ಗಳ ಸಂಘಟನೆ ರಚನೆ ಮಾಡಿ ಸಮಸ್ಯೆಗಳನ್ನು ಎದುರಿಸಲು ಒಗ್ಗೂಡಿಸುವ ಕೆಲಸ ಮಾಡಲಾಗಿದೆ ಎಂದರು. ಕರ್ನಾಟಕ ಪೋಟೋಗ್ರಾಫರ್‌್ಸ ಅಸೋಸಿಯೇಶನ್ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಶಶಿಧರ ಮಾತನಾಡಿದರು.

ಬಿಡುಗಡೆ: ಮಾಜಿ ಶಾಸಕ ವೀರಣ್ಣ ಚರಂತಿಮಠ ಛಾಯಾಚಿತ್ರ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರ. ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಫೋಟೋಗ್ರಾಫರ್ಸ್ ಸಂಘದ ಅಧ್ಯಕ್ಷ ವಿಠ್ಠಲ ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಗವಳಿ, ಕೆಪಿಎ ಕಾರ್ಯದರ್ಶಿ ಎಸ್. ಪರಮೇಶ, ನಿರ್ದೇಶಕ ಉದಯ ಶಂಕರ, ಎಚ್. ಮಹದೇವ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ಎಸ್. ಹಿರೇಮಠ, ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಕಟಗಿ, ಖಜಾಂಚಿ ರವೀಂದ್ರ ಕಲಕೇರಿ, ಸಂಘಟನಾ ಕಾರ್ಯದರ್ಶಿ ಅಶೋಕ ಮುದ್ದೇಬಿಹಾಳ, ನೂರ್‌ ಅಹ್ಮದ್‌ ಪಟ್ಟೇವಾಲ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ ಉಪಸ್ಥಿತರಿದ್ದರು. ವಿವಿಧ ಕಂಪೆನಿಗಳ ಕ್ಯಾಮೆರಾ, ವಿಡಿಯೊ ಕ್ಯಾಮೆರಾ  ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಿತು.



ಛಾಯಾಚಿತ್ರ ಗ್ರಾಹಕರಿಗಾಗಿ ಕಾಯುವ ಕಾಲ ಮುಗಿಯಿದು. ಎಲ್ಲರಲ್ಲೂ ಮೊಬೈಲ್‌ ಇದೆ. ತಾವೇ ಫೋಟೊ ತೆಗೆದುಕೊಂಡ ಸಂಭ್ರಮಿಸುವರು

ಎಸ್.ಆರ್‌. ಪಾಟೀಲ,

ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.