ಇಳಕಲ್: ‘ಸಿಂಡಿಕೇಟ್ ಬ್ಯಾಂಕ್ನಲ್ಲಿ ಸಿಂಡ್ ಡಾಕ್ಟರ್ ಯೋಜನೆಯಡಿ ನೋಂದಣೆ ಮಾಡಿಕೊಂಡ ವೈದ್ಯರಿಗೆ ಸಾಲ ಸೌಲಭ್ಯ ಆರಂಭಿಸಲಾಗುತ್ತಿದ್ದು, ವೈದ್ಯರು ಪ್ರಯೋಜನ ಪಡೆದು ಕೊಳ್ಳ ಬೇಕು ಎಂದು ವಿಜಾಪುರ ಸಿಂಡಿಕೇಟ್ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಗುರುರಾಜ ಹೊಸೂರ ಹೇಳಿದರು.

ನಗರದ ವಿಜಯ ಮಹಾಂತೇಶ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಭಾಭವನದಲ್ಲಿ ಸಿಂಡಿಕೇಟ್ ಬ್ಯಾಂಕ್ ಹಾಗೂ ಭಾರತೀಯ ವೈದ್ಯಕೀಯ ಸಂಸ್ಥೆಯ ನಗರ ಘಟಕದ ಸಹಯೋಗ ದಲ್ಲಿ ಆಯೋಜಿಸಿದ ವೈದ್ಯರ ಸಮಾವೇಶ ದಲ್ಲಿ ಅವರು ಮಾತನಾಡಿದರು. ವೈದ್ಯರು ಇಂದು ವೃತ್ತಿ ಆರಂಭಿಸಲು ಅತ್ಯಾಧುನಿಕ ಸೌಲಭ್ಯಗಳು ಹಾಗೂ ಉಪಕರಣಗಳ ಅಗತ್ಯ ಇದೆ. ಇದಕ್ಕೆ ಸಾಕಷ್ಟು ಹಣ ಖರ್ಚು ಮಾಡಬೇಕಾಗು ತ್ತದೆ.

ವೈದ್ಯರ ಆರ್ಥಿಕ ಅಗತ್ಯವನ್ನು ಪೂರೈಸಲು ಸಿಂಡಿಕೇಟ್ ಬ್ಯಾಂಕ್ ಸಿದ್ದವಿದೆ. ಆಸ್ಪತ್ರೆ, ಪ್ರಯೋಗಾಲಯ, ವೈದ್ಯಕೀಯ ಉಪಕರಣಗಳ ಖರೀದಿ ಸಲು ₨ 1 ಕೋಟಿಯಿಂದ ₨ 5 ಕೋಟಿ ವರೆಗೆ ಹಣಕಾಸಿನ ನೆರವು ನೀಡಲಾಗು ವುದು. ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೂ ಕೂಡ ವೈದ್ಯಕೀಯ ಶಿಕ್ಷಣಕ್ಕಾಗಿ ₨ 20 ಲಕ್ಷದವರೆಗೂ ಸಾಲ ನೀಡಲಾಗುತ್ತದೆ ಎಂದು ಹೇಳಿದರು.

ಡಾ. ನಾರಾಯಣ ವನಕಿ ಮಾತನಾಡಿ ಇಂದು ವೈದ್ಯಕೀಯ ಕ್ಷೇತ್ರ ಅತ್ಯಂತ ದುಬಾರಿಯಾಗಿದೆ. ರೋಗಿಗಳು ಸುಸಜ್ಜಿತ ಆಸ್ಪತ್ರೆಯತ್ತ ಆಕರ್ಷಿತರಾಗು ತ್ತಿದ್ದಾರೆ. ಆದರೆ ಎಲ್ಲಾ ವೈದ್ಯರಿಗೂ ಇಂತಹ ಆಸ್ಪತ್ರೆಗಳನ್ನು ಕಟ್ಟಿಸುವುದು ಅಸಾಧ್ಯ. ಸಿಂಡಿಕೇಟ್ ಬ್ಯಾಂಕ್ ವೈದ್ಯರ ಕನಸುಗಳನ್ನು ನನಸು ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಉಪ ಮಹಾಪ್ರಭಂದಕ ಮುರಳಿ ನಾಥ ಗುಪ್ತ ವೈದ್ಯರೊಂದಿಗೆ ಸಂವಾದ ನಡೆಸಿದರು. ಡಾ. ಜಗದೀಶ ಭೈರಗೊಂಡನವರ, ಪ್ರಾಚಾರ್ಯ ಡಾ.ಕೆ.ಸಿ. ದಾಸ್ ಉಪಸ್ಥಿತರಿದ್ದರು. ಡಾ. ಸುಭಾಷ ಕಾಖಂಡಕಿ ಪ್ರಾರ್ಥಿಸಿದರು. ನಗರದ ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ಎಂ. ಸಿದ್ದರಾಜು ಸ್ವಾಗತಿಸಿದರು. ಧರ್ಮಣ್ಣ ಪೂಲಪಾಟ್ಲಿ ವಂದಿಸಿದರು. ಟಿ. ಕುಮಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.