ಶುಕ್ರವಾರ, ಜನವರಿ 24, 2020
28 °C

‘ಸೌಂದರ್ಯ’ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಸರಹಳ್ಳಿ ಹಾವನೂರು ಬಡಾವಣೆಯಲ್ಲಿರುವ ಸೌಂದರ್ಯ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ‘ಸಂಭ್ರಮ’ ವಾರ್ಷಿಕೋತ್ಸವ ಸಮಾರಂಭದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಜಾನಪದ ನೃತ್ಯಗಳ ವಿವಿಧ ಪ್ರಕಾರಗಳನ್ನು ಮೈನವಿರೇಳಿಸುವಂತೆ ವಿದ್ಯಾರ್ಥಿಗಳು ಅಭಿನಯಿಸಿದರು.ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಂದಿಧ್ವಜ, ಭೂತಾರಾಧನೆ, ಕೀಲುಕುದುರೆ, ಕೊಡವ ನೃತ್ಯ, ಸೋಮನಕುಣಿತ, ಪಟ್ಟದ ಕುಣಿತ ಹೀಗೆ ವಿವಿಧ ಪ್ರಕಾರಗಳನ್ನು ಅಭಿನಯಿಸಿದರು. 85 ವಿದ್ಯಾರ್ಥಿಗಳು ಏಕ ಕಾಲದಲ್ಲಿ ಅಭಿನಯಿಸುತ್ತಿರುವಾಗ ನೆರೆದಿದ್ದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಅತಿಥಿಗಳು ಎದ್ದು ನಿಂತು ಚಪ್ಪಾಳೆ ಮಳೆಗರೆದರು. ರಾಜ್‌ಗುರು ಹೊಸಕೋಟೆ ಜನಪದ ಕಲಾ ತಂಡದವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ಪ್ರತಿಕ್ರಿಯಿಸಿ (+)