ಕುಷ್ಟಗಿ: ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ 12ನೇ ಶತಮಾನದಲ್ಲಿನ ಮಹಿಳಾ ವಚನಕಾರನ್ನು ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ಅಧ್ಯಯನಗಳು ನಡೆದು ವಚನಗಾರ್ತಿಯರ ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೆಲಸ ಮುಂದುವರಿಯಬೇಕಿದೆ ಎಂದು ಕೊಪ್ಪಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಗಾಯತ್ರಿ ಭಾವಿಕಟ್ಟಿ ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ‘ವಚನ ಸಾಹಿತ್ಯ-ದಲ್ಲಿ ಅಲಕ್ಷಿತ ವಚನಗಾರ್ತಿಯರು' ಎಂಬ ವಿಷಯ ಕುರಿತು ಮಾತನಾಡಿ, ಪುರುಷರಷ್ಟೇ ಸಮಾನ ಸ್ಥಾನಮಾನದಿಂದಾಗಿ ಸ್ತ್ರೀಯರು ಕಾಯಕದಲ್ಲಿನ ಸ್ವಾನುಭವವನ್ನು ವಚನ ಮಾಧ್ಯಮದ ಮೂಲಗಳ ಅಭಿವ್ಯಕ್ತಿಪಡಿಸುವ ಸ್ವಾತಂತ್ರ್ಯ ದೊರಕಿದ್ದು, ಬಸವಣ್ಣನವರ ಕಾಲದಲ್ಲಿ ಮಾತ್ರ ಎಂದರು.

ಈವರೆಗೆ ತಿಳಿದು ಬಂದಿರುವಂತೆ 12ನೇ ಶತಮಾನದಲ್ಲಿ 35 ವಚನಗಾರ್ತಿಯರು ಸುಮಾರು 1104ಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಶಿಷ್ಟ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು ಸಾಮಾನ್ಯ ಸಂಗತಿ ಅಲ್ಲ ಎಂದರು.

ಕಲ್ಯಾಣದ ವಚನ ಕ್ರಾಂತಿಗೂ ಮೊದಲು ಭಾರತೀಯ ಮಹಿಳೆಯ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ದ್ರಾವಿಡ ಸಂಸ್ಕೃತಿಯಲ್ಲಿ ಮಾತೃ ಪ್ರಧಾನ ಕುಟುಂಬ ಪದ್ಧತಿ ಇತ್ತು. ಆರ್ಯ ಸಂಸ್ಕೃತಿ ಸಂದರ್ಭದಲ್ಲಿ ಪಿತೃ ಪ್ರಧಾನ ಕುಟುಂಬ ಪದ್ಧತಿ ಹೇರಿಕೆಯಿಂದಾಗಿ ಮಹಿಳೆ ಸ್ವಾತಂತ್ರ್ಯ ಕಳೆದುಕೊಂಡಳು. ಆದರೆ ಬಸವಣ್ಣನವರು ಮಹಿಳೆಯರಿಗೆ ಮತ್ತೆ ಸಮಾನ ಸ್ಥಾನ ದೊರಕಿಸಿಕೊಟ್ಟಿದ್ದರಿಂದ ಅಕ್ಕಮಹಾದೇವಿ, ಅಮ್ಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ರೆಮಮ್ಮ, ಸೋಮಮ್ಮ, ಗಂಗಾಂಬಿಕೆ ಅವರಂಥ ಅನೇಕ ವಚನಗಾರ್ತಿಯರು ತಮ್ಮ ವಿಶಿಷ್ಟ ವಚನ ಸಾಹಿತ್ಯ ನೀಡುವಂತಾಯಿತು ಎಂದು ಹೇಳಿದರು.

ಕನ್ನಡ ಉಪನ್ಯಾಸಕ ಮಹಾಂತೇಶ ಗವಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಚ್.ಎಂ.ಭೂತನಾಳ, ಪ್ರಾಧ್ಯಾಪಕರಾದ ಡಾ.ಎಸ್.ವಿ.ಡಾಣಿ, ಬಸವರಾಜ ಕಂಬಳಿ, ವೀರಣ್ಣ, ಶಂಕರ ಕರಪಡಿ, ಅಮರಯ್ಯ, ಪಾಪಣ್ಣ, ಶಿವುಪುತ್ರಪ್ಪ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.