ಅಮೆರಿಕದಲ್ಲಿ ಹುಟ್ಟಿ ಬೆಳೆದ ರೂಪದರ್ಶಿ, ನಟಿ ನರ್ಗಿಸ್ ಫಕ್ರಿ ಈಗ ಬಾಲಿವುಡ್ನಲ್ಲಿ ಗಟ್ಟಿಯಾಗಿ ನೆಲೆಯೂರುವತ್ತ ಗಮನ ಹರಿಸುತ್ತಿದ್ದಾರೆ. ಅದಕ್ಕಾಗಿ ಆಕೆ ಬಣ್ಣದ ಜಗತ್ತಿನ ಒಳಸುಳಿಗಳನ್ನು ಅರಿಯುವ ಪ್ರಯತ್ನದಲ್ಲಿದ್ದಾರೆ. ‘ರಾಕ್ಸ್ಟಾರ್’ ಚಿತ್ರದ ಮೂಲಕ ಬಣ್ಣದ ಜಗತ್ತು ಪ್ರವೇಶಿಸಿದ ಫಕ್ರಿ ಈಗ ಬಾಲಿವುಡ್ನಲ್ಲಿ ಮೂರು ವರ್ಷ ಕಳೆದಿದ್ದಾರೆ. ಆದರೂ ಆಕೆಗೆ ಬಣ್ಣದ ಜಗತ್ತಿನ ಸ್ಪಷ್ಟ ಚಿತ್ರಣ ಸಿಕ್ಕಿಲ್ಲವಂತೆ.

ಮುಂಬೈ ಮನರಂಜನಾ ಉದ್ಯಮವನ್ನು ಮತ್ತಷ್ಟು, ಮಗದಷ್ಟು ತಿಳಿದುಕೊಳ್ಳಬೇಕು ಎಂಬ ಉತ್ಸಾಹದಲ್ಲಿರುವ ಆಕೆಗೆ ಕೆಲವೊಂದು ಸತ್ಯಗಳೂ ಗೋಚರಿಸಿವೆಯಂತೆ. ಸಿನಿಮಾ ಮಾಡುವಾಗ ‘ಬೆಸ್ಟ್ ಫ್ರೆಂಡ್ಸ್’ಗಳಂತೆ ಇರುವ ಸಹನಟ, ನಟಿಯರು ಸಿನಿಮಾ ಮುಗಿದ ಮೇಲೆ ಅಪರಿಚಿತರಂತೆ ಏಕೆ ವರ್ತಿಸುತ್ತಾರೆ ಎಂಬ ಬಗ್ಗೆ ಆಕೆಗೆ ಇನ್ನೂ ಉತ್ತರ ತಿಳಿದಿಲ್ಲವಂತೆ. ‘ಮದ್ರಾಸ್ ಕೆಫೆ’ ಚಿತ್ರದಲ್ಲಿ ಫಕ್ರಿ ನಿರ್ವಹಿಸಿದ ಪಾತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಈಗ ಅವರು ‘ಮೇ ತೇರಾ ಹೀರೊ’ ಚಿತ್ರ ಮುಗಿಸಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ ಫಕ್ರಿ ಕೆಲವೊಂದು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

*ನರ್ಗಿಸ್, ‘ಮದ್ರಾಸ್ ಕೆಫೆ’ ಚಿತ್ರದಲ್ಲಿ ನೀವು ನಿರ್ವಹಿಸಿದ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಈ ಗೌರವ ನಿಮಗೆ ಉತ್ತಮ ಪಾತ್ರ ಅಥವಾ ಅವಕಾಶಗಳನ್ನು ತಂದುಕೊಟ್ಟಿತಾ?
ಹೌದು. ‘ಮದ್ರಾಸ್ ಕೆಫೆ’ ಚಿತ್ರದಲ್ಲಿನ ನನ್ನ ಅಭಿನಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಆ ಸಮಯದಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. ಆದರೆ, ನಾನು ಒಪ್ಪಿಕೊಂಡಿದ್ದು ಮಾತ್ರ ‘ಮೇ ತೇರಾ ಹೀರೊ’ ಚಿತ್ರವನ್ನು. ಇದನ್ನು ಹೊರತುಪಡಿಸಿ ‘ಶೌಕೀನ್’ ಚಿತ್ರದಲ್ಲಿ ನಟಿಸುತ್ತಿದ್ದೇನೆ.

*ರಾಕ್ಸ್ಟಾರ್’ ಚಿತ್ರದಿಂದ ‘ಮೇ ತೇರಾ ಹೀರೊ’ ಸಿನಿಮಾವರೆಗಿನ ನಿಮ್ಮ ಬಾಲಿವುಡ್ ಪಯಣ ಹೇಗಿತ್ತು?
ಈ ಸಮಯದಲ್ಲಿ ನಾನು ಮುಂಬೈನ ಮನರಂಜನಾ ಉದ್ಯಮದ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಆದರೂ, ನನಗೆ ಬಾಲಿವುಡ್ನ ಆಳದ ಅರಿವು ತಿಳಿಯಲಿಲ್ಲ. ಇಲ್ಲಿನ ಒಳಸುಳಿಗಳ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ಸಾಕಷ್ಟಿದೆ. ಒಂದು ಸಿನಿಮಾ ಒಪ್ಪಿಕೊಂಡಾಗ ನಮ್ಮ ಜತೆ ಅಭಿನಯಿಸುವ ಸಹ ನಟ/ನಟಿಯರು ಚಿತ್ರೀಕರಣ ಮುಗಿಯುವವರೆಗೆ ಮಾತ್ರ ನಮ್ಮ ಜತೆ ತುಂಬ ಚೆನ್ನಾಗಿರುತ್ತಾರೆ. ಒಳ್ಳೆ ಸ್ನೇಹಿತರಂತೆ ವರ್ತಿಸುತ್ತಾರೆ. ಸಿನಿಮಾ ಮುಗಿಸಿದ ನಂತರ ಅದುವರೆಗೂ ತೋರಿದ ಸ್ನೇಹ–ವಿಶ್ವಾಸವನ್ನು ಕಡಿದುಕೊಳ್ಳುತ್ತಾರೆ. ಇದು ನನಗೆ ತುಂಬ ನೋವು ಉಂಟು ಮಾಡಿದ ಸಂಗತಿ. ಪರಿಶುದ್ಧ ಸ್ನೇಹ ಕೊನೆಯವರೆಗೂ ಉಳಿಯುತ್ತದೆ ಎಂಬ ಮಾತಿಗೆ ಇಲ್ಲಿ ಕವಡೆ ಕಿಮ್ಮತ್ತಿಲ್ಲ.

*ಬಾಲಿವುಡ್ನಲ್ಲಿ ಮೂರು ವರ್ಷ ಕಳೆದಿದ್ದೀರಾ. ಹೇಗನ್ನಿಸುತ್ತಿದೆ?
ಬಣ್ಣದ ಜಗತ್ತಿನೊಂದಿನ ನನ್ನ ನಂಟಿಗೆ ಈಗ ಮೂರು ವರ್ಷ ತುಂಬಿದೆ. ನಿಜ ಹೇಳಬೇಕು ಅಂದರೆ, ಬಾಲಿವುಡ್ನಲ್ಲಿ ಈಗಲೂ ನಾನು ನೀರಿನಿಂದ ಹೊರಬಿದ್ದ ಮೀನಿನಂತಿದ್ದೇನೆ. ಬಾಲಿವುಡ್ ಇಂದಿಗೂ ನನಗೆ ಗೋಜಲಾಗಿಯೇ ಉಳಿದಿದೆ. ಬಣ್ಣದ ಜಗತ್ತಿನ ರಾಜಕೀಯ ಸ್ವಲ್ಪವೂ ಅರ್ಥವಾಗುತ್ತಿಲ್ಲ. ನನ್ನ ಸುತ್ತಲೂ ಏನು ನಡೆಯುತ್ತಿದೆ, ಇಲ್ಲಿ ನನ್ನ ದಾರಿ ಯಾವುದು ಎಂದು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಇಲ್ಲಿ ಒಂದಂತೂ ಸ್ಪಷ್ಟ. ಬಾಲಿವುಡ್ನಲ್ಲಿ ಉಳಿಯಬೇಕು ಅಂದರೆ, ನಿತ್ಯವೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕು. ಸಿಕ್ಕಾಪಟ್ಟೆ ಸೌಂದರ್ಯ ಸಾಧನಗಳನ್ನು ಬಳಸಬೇಕು. ತಿದ್ದಿ ತೀಡಿದಂತೆ ಮೇಕಪ್ ಮಾಡಿಕೊಳ್ಳಬೇಕು. ಆದರೆ, ನನ್ನದು ಇದಕ್ಕೆ ತದ್ವಿರುದ್ಧ ಸ್ವಭಾವ. ಗ್ಲಾಮರ್ ಆಗಿ ಕಾಣಿಸಿಕೊಂಡರು ಸೌಂದರ್ಯ ಪರಿಕರಗಳನ್ನು ಬಳಸುವುದು ಕಮ್ಮಿ.

*ಹಾಗಾದರೆ, ಬಾಲಿವುಡ್ನ ಇತರೆ ನಟಿಯರಂತೆ ನರ್ಗಿಸ್ ಫಕ್ರಿಗೆ ಇರಲು ಸಾಧ್ಯವಾಗುತ್ತಿಲ್ಲವೇ?
ಯಾರಿಗೆ ಆಗಲಿ ಇಷ್ಟವಿಲ್ಲದಿರುವುದನ್ನು ಮಾಡುವುದು ತುಂಬ ಕಷ್ಟ. ಜನರ ನಿರೀಕ್ಷೆಗೆ ತಕ್ಕಂತೆ ಮತ್ತು ನನಗೆ ಕಂಫರ್ಟ್ ಎನಿಸುವಂತೆ ಇರುವುದು, ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ತುಂಬ ಕಷ್ಟ. ಬಾಲಿವುಡ್ನಲ್ಲಿ ನಾನು ಉಳಿಯಬೇಕು ಅಂದರೆ, ಇಲ್ಲಿನ ರೀತಿ–ರಿವಾಜು ಹಾಗೂ ಇತರೆ ನಟಿಯರು ಮಾಡುವ ತಂತ್ರಗಳನ್ನು ಅನುಸರಿಸಲೇಬೇಕು.

ಅದರಂತೆ ನಾನೂ ನಡೆಯಲು ಪ್ರಯತ್ನಿಸುತ್ತಿದ್ದೇನೆ. ಆದರೂ, ನನಗೆ ಬಣ್ಣದ ಜಗತ್ತಿನ ನಡೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ‘ನೀನು ಸುಶಿಕ್ಷಿತೆ, ಮೂರ್ಖಳಲ್ಲ. ನಿನ್ನನ್ನು ಕಡೆಗಣಿಸುವ ಜನರ ಬಗ್ಗೆ ನೀನು ಮರುಕಪಡಬೇಕು. ಅದು ಬಿಟ್ಟು ಕೊರಗುತ್ತಾ ಕೂರಬಾರದು. ಇಲ್ಲಿ ಎಷ್ಟೇ ಕೆಟ್ಟ ಅನುಭವಗಳಾದರೂ ಅದರಿಂದ ಪಾಠ ಕಲಿತುಕೊಳ್ಳಬೇಕೇ ಹೊರತು, ಆ ಬಗ್ಗೆ ಚಿಂತಿಸಬಾರದು’ ಅಂತ ನನ್ನ ಸ್ನೇಹಿತರೊಬ್ಬರು ತಿಳಿಹೇಳಿದರು.

*ನರ್ಗಿಸ್ ನೀವೀಗ ಮುಂಬೈ ನಿವಾಸಿ. ನಿಮ್ಮ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತ ಅನಿಸುತ್ತಿದೆಯೇ?
ನಾನಿಲ್ಲಿಗೆ ಬಂದು ಮೂರು ವರ್ಷಗಳಾಯ್ತು. ಜನವರಿ ತಿಂಗಳಿನಲ್ಲಿ ನಮ್ಮಮ್ಮ ನನ್ನನ್ನು ಭೇಟಿ ಮಾಡುವ ಸಲುವಾಗಿ ಮುಂಬೈಗೆ ಮೊದಲ ಬಾರಿಗೆ ಬಂದಿದ್ದರು. ಆಕೆ ನನ್ನೊಂದಿಗೆ ಇದ್ದಷ್ಟು ದಿನವೂ ನಾನು ತುಂಬ ಖುಷಿಯಾಗಿದ್ದೆ. ಅವರು ಬಂದ ಸಮಯದಲ್ಲೇ ನಾನು ಹೊಸ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕಾಯ್ತು. ಹಾಗಾಗಿ, ಆಕೆಯೊಂದಿಗೆ ಸ್ವಲ್ಪೇ ಸ್ವಲ್ಪ ದಿನವನ್ನು ಕಳೆಯುವಂತಾಯಿತು.

*ನಿಮ್ಮ ತಾಯಿ ನಿಮ್ಮನ್ನು ಮೊದಲ ಸಲ ನೋಡಲು ಬಂದಾಗಿನ ಅನುಭವ?
ನಮ್ಮಮ್ಮ ನನ್ನನ್ನು ನೋಡಲು ಬರುವುದಕ್ಕೂ ಕೆಲವೇ ದಿನಗಳ ಮುಂಚೆ ಇಲ್ಲಿನ ಕೆಲವು ಪತ್ರಿಕೆಗಳು ನಾನೀಗ ಶಾಹಿದ್ ಕಪೂರ್ ಜತೆ ವಾಸ ಮಾಡುತ್ತಿದ್ದೇನೆ ಅಂತ ಬರೆದಿದ್ದವು.

*ನರ್ಗಿಸ್, ನಿಮ್ಮಮ್ಮ ಮುಂಬೈಗೆ ಬಂದಾಗ ನಿಮ್ಮ ಬಾಯ್ಫ್ರೆಂಡ್ ಬಗ್ಗೆ ಹೇಳಿಕೊಳ್ಳದೇ ಇರುವುದು ಮತ್ತು ಮನೆಯಲ್ಲಿರುವ ಬಿಯರ್ ಬಾಟೆಲ್ಗಳನ್ನು ಬಚ್ಚಿಡುವುದು ಮಾಡಿದಿರಾ?
ನಾನು ಯಾವತ್ತೂ ಹಾಗೆ ಮಾಡುವವಳಲ್ಲ. ಅಮ್ಮನ ಬಳಿ ನಾನು ಎಲ್ಲವನ್ನು ಹೇಳಿಕೊಳ್ಳುತ್ತೇನೆ. ಅವಳನ್ನು ನಾನು ತುಂಬ ಪ್ರೀತಿಸುತ್ತೇನೆ. ನಾನು ಆಕೆಗೆ ಆರ್ಥಿಕವಾಗಿ ಹೇಗೆ ಹೆಗಲು ಕೊಟ್ಟಿದ್ದೇನೋ ಹಾಗೆಯೇ, ಭಾವನಾತ್ಮಕವಾಗಿಯೂ ಹತ್ತಿರವಾಗಿದ್ದೇನೆ. ಆಕೆ ನನ್ನ ನಿಜವಾದ ಸ್ನೇಹಿತೆ. ನನ್ನ ಬಾಯ್ಫ್ರೆಂಡ್, ಬಿಯರ್ ಕುಡಿಯುವುದರ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೇ ಹೇಳಿಕೊಳ್ಳುತ್ತೇನೆ. ಕುಡಿತ, ಸೆಕ್ಸ್ ಹೀಗೆ ಯಾವುದೇ ವಿಷಯವಾದರೂ ಸರಿ ನಾವಿಬ್ಬರೂ ಮುಕ್ತವಾಗಿ ಮಾತನಾಡಿಕೊಳ್ಳುತ್ತೇವೆ.

*‘ಮೇ ತೇರಾ ಹೀರೊ’ ಚಿತ್ರದ ಅನುಭವ ಹೇಗಿತ್ತು?
ತುಂಬ ಚೆನ್ನಾಗಿತ್ತು. ಈ ಚಿತ್ರದ ಚಿತ್ರೀಕರಣದುದ್ದಕ್ಕೂ ನಾನು ಖುಷಿಯಿಂದ ಇದ್ದೆ. ಎಲ್ಲರೂ ಒಂದೇ ಕುಟುಂಬದವರು ಎಂಬ ಭಾವ ಮೂಡಿತ್ತು. ನಟಿ ಇಲಿಯಾನ ಮತ್ತು ನಟ ವರುಣ್ ಧವನ್ ಸ್ನೇಹಜೀವಿಗಳು. ಚಿತ್ರೀಕರಣದ ವೇಳೆ ಇವರಿಬ್ಬರು ನನಗೆ ತುಂಬ ಸಹಾಯ ಮಾಡಿದರು. ನಾನು ಸಿನಿಮಾ ಮಾಡುವ ಸಂದರ್ಭದಲ್ಲೆಲ್ಲಾ ಇಂತಹ ವ್ಯಕ್ತಿಗಳೇ ನನಗೆ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೆ. ನನ್ನ ಮತ್ತು ಇಲಿಯಾನ ನಡುವೆ ತುಂಬ ಸಾಮ್ಯತೆಗಳಿವೆ. ನಾನು ಯೋಚಿಸುವ ರೀತಿಯಲ್ಲೇ ಅವಳೂ ಚಿಂತಿಸುತ್ತಾಳೆ. ಆದರೆ, ನಾನು ಆಕೆಗಿಂತಲೂ ಹೆಚ್ಚು ಉತ್ಸಾಹಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.