ಬುಧವಾರ, ಜೂನ್ 23, 2021
29 °C

‘ಸ್ವಯಂ ರಕ್ಷಣೆಗೆ ಕರಾಟೆ ಕಲಿಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸಮೂರ್ತಿ ಸಲಹೆ ಮಾಡಿದರು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕರಾಟೆ ತರಬೇತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯರ ಕಲಿಕೆಯ ಗುಣಮಟ್ಟವನು್ನ ವೀಕ್ಷಿಸಿ ಅವರು ಮಾತನಾಡಿದರು.ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಉಚಿತ ಸೈಕಲ್‌, ಸಮವಸ್ತ್ರ ವಿತರಣೆ ಅಲ್ಲದೇ ಸ್ವಯಂ ರಕ್ಷಣೆಗೆ ಕರಾಟೆ ತರಬೇತಿ­ಯನು್ನ ನೀಡುತ್ತಿದೆ ಎಂದರು. ಶಿಕ್ಷಣದ ಜೊತೆಗೆ ಆತ್ಮ ರಕ್ಷಣೆಗಾಗಿ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿ­ನಿಯರಿಗೆ ಪ್ರತಿ ವಾರ ಒಂದು ಗಂಟೆ ಕರಾಟೆ ತರಬೇತಿ ನೀಡಲಾಗುವುದು ಎಂದು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ದೊಡ್ಡನಗೌಡ ತಿಳಿಸಿದರು.ಕಾರ್ಯಾಗಾರದಲ್ಲಿ ತಾಲ್ಲೂಕಿನ 18 ಪ್ರೌಢಶಾ­ಲೆಗಳ ವಿದ್ಯಾರ್ಥಿನಿಯರು ತಾವು ಕಲಿತ ಕರಾಟೆ ವಿದೆ್ಯಯನು್ನ ಪ್ರದರ್ಶಿಸಿದರು. ಪರಶುರಾಮ್‌, ರಂಗಾರೆಡ್ಡಿ, ಕರಾಟೆ ಶಿಕ್ಷಕ ಮಲ್ಲಿಕಾರ್ಜುನ ಹಿರೇಮಠ ಉಪಸಿ್ಥತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.