ಹುಬ್ಬಳ್ಳಿ: ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜು ಆಶ್ರಯದಲ್ಲಿ ‘ಹುಬ್ಬಳ್ಳಿ ಮ್ಯಾರಥಾನ್–2014’ ಇದೇ 23ರಂದು ನಡೆಯಲಿದೆ.
‘ನಾಲ್ಕನೇ ಬಾರಿ ಕಾಲೇಜು ಈ ಮ್ಯಾರಥಾನ್ ಆಯೋಜಿಸುತ್ತಿದೆ. ಅಂದು ಬೆಳಿಗ್ಗೆ 6.15ಕ್ಕೆ ವಿದ್ಯಾನಗರದಲ್ಲಿರುವ ಕಾಲೇಜು ಆವರಣದಿಂದ ಓಟ ಆರಂಭಗೊಳ್ಳಲಿದ್ದು, ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಜಿ. ದೇಶಪಾಂಡೆ ಚಾಲನೆ ನೀಡಲಿದ್ದಾರೆ. ಈ ಬಾರಿ ಐದು ಸಾವಿರ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಕಾಲೇಜಿನ ಪ್ರಾಚಾರ್ಯ ಅಶೋಕ ಶೆಟ್ಟರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಂದು ನಿರ್ದಿಷ್ಟ ಧ್ಯೇಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ. ಈ ಹಿಂದೆ ಭಯೋತ್ಪಾದನೆ ನಿಗ್ರಹ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಹಿಳಾ ಸಬಲೀಕರಣ ಉದ್ದೇಶ ಇಟ್ಟುಕೊಂಡು ಮ್ಯಾರಥಾನ್ ಆಯೋಜಿಸಲಾಗಿತ್ತು. ಸದ್ಯದಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ‘ನಿಮ್ಮ ಮತ, ನಿಮ್ಮ ಧ್ವನಿ’ ಎಂಬ ಸಂದೇಶ ಹೊತ್ತು ಈ ಬಾರಿ ಸ್ಪರ್ಧಿಗಳು ಹೆಜ್ಜೆ ಹಾಕಲಿದ್ದಾರೆ’ ಎಂದು ಅವರು ವಿವರಿಸಿದರು.

‘ಕಾಲೇಜು ಆವರಣದಿಂದ ಕಿಮ್ಸ್, ಹೊಸೂರು ವೃತ್ತ, ದೇಸಾಯಿ ಕ್ರಾಸ್, ಕೇಶ್ವಾಪುರ ವೃತ್ತ, ಸ್ಟೇಷನ್ ರಸ್ತೆ, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ರವಿನಗರ ಪೆಟ್ರೋಲ್ ಬಂಕ್, ಚೇತನಾ ಕಾಲೇಜು ರಸ್ತೆ, ಶಿರೂರ ಪಾರ್ಕ್ ಮಾರ್ಗವಾಗಿ ಓಟ ಸಾಗಲಿದೆ. 12 ಚೆಕ್ ಪಾಯಿಂಟ್ಗಳು ಇದ್ದು, ಒಟ್ಟು 14 ಕಿ,ಮೀ. ದೂರವನ್ನು ಸ್ಪರ್ಧಿಗಳು ಕ್ರಮಿಸಬೇಕಾಗುತ್ತದೆ. ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಮಹಿಳಾ ಹಾಗೂ ಪುರುಷ ವಿಭಾಗಗಳ ಮೊದಲ ಮೂರು ಸ್ಥಾನ ಪಡೆವ ವಿಜೇತರು ಕ್ರಮವಾಗಿ ₨10,000, 5,000 ಹಾಗೂ 3,000 ನಗದು ಬಹುಮಾನ ಪಡೆಯಲಿದ್ದಾರೆ. 14 ವರ್ಷ ಒಳಗಿನ ಮಕ್ಕಳು ಹಾಗೂ ಅಂಗವಿಕಲರಿಗೆ ಪ್ರತ್ಯೇಕವಾಗಿ ₨10,000 ವಿಶೇಷ ಬಹುಮಾನ ದೊರೆಯಲಿದೆ. ಮಕ್ಕಳಿಗೆ ಬಿವಿಬಿಯಿಂದ ಚನ್ನಮ್ಮ ವೃತ್ತ ಹಾಗೂ ವಾಪಸ್ ಬಿವಿಬಿಗೆ ಬರುವ ಮಾರ್ಗ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.

‘ಸಾರ್ವಜನಿಕರಿಗೆ ₨50 ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ₨25 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಬಿವಿಬಿ ಕಾಲೇಜು, ಅರ್ಬನ್ ಓಯಸಿಸ್ ಮಾಲ್, ಯು ಮಾಲ್, ಲಕ್ಷ್ಮಿ ಪ್ರೈಡ್ ಸಿನೆಮಾ, ಧಾರವಾಡದ ಕವಿವಿ ಹಾಗೂ ಜೆಎಸ್ಎಸ್ ಕಾಲೇಜುಗಲ್ಲಿನ ಕೌಂಟರ್ಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆ ದಿನದಂದು ಬೆಳಿಗ್ಗೆ 5.30ರಿಂದ ಸ್ಪರ್ಧಿಗಳಿಗೆ ಟೀ–ಶರ್ಟ್, ಕ್ಯಾಪ್ ವಿತರಿಸಲಾಗುವುದು. ಅಲ್ಲದೆ ಗೋಲ್ಡನ್ ಜಿಮ್ನಲ್ಲಿ ಒಂದು ದಿನದ ಮಟ್ಟಿಗೆ ಅಭ್ಯಾಸ ಮಾಡುವ ಅವಕಾಶವುಳ್ಳ ಕೂಪನ್ ಸಹ ವಿತರಿಸಲಾಗುವುದು. ಧಾರವಾಡದಿಂದ ಆಗಮಿಸುವವರಿಗಾಗಿ ಬೆಳಿಗ್ಗೆ 5ರಿಂದ ಕೋರ್ಟ್ ವೃತ್ತ, ಜೆಎಸ್ಎಸ್ ಕಾಲೇಜು ಮುಂಭಾಗದಿಂದ ಬಸ್ ವ್ಯವಸ್ಥೆ ಸಹ ಇದೆ’ ಎಂದರು.

ಉಪಪ್ರಾಚಾರ್ಯ ಬಿ.ಎಲ್. ದೇಸಾಯಿ, ಡಾ. ಸಂಜಯ್ ಕೊಟಬಾಗಿ,ಎಂ.ಆರ್. ಪಾಟೀಲ, ಪ್ರೊ. ವಿ.ಎ. ಸನಗೌಡರ, ವೀರೇಶ್
ಅಂಗಡಿ, ವಿದ್ಯಾರ್ಥಿ ಪ್ರತಿನಿಧಿಗಳು ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.