ಸೋಮವಾರ, ಜೂನ್ 14, 2021
27 °C

‘6 ಟಿಎಂಸಿ ನೀರಿಗೆ ಎತ್ತಿನ ಹೊಳೆಯೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ­ಯಿಂದ 6 ಟಿಎಂಸಿ  ನೀರು ಲಭ್ಯವಾಗು­ತ್ತದೆ ಎಂದು ನೀರಾ­ವರಿ ತಜ್ಞರು ವೈಜ್ಞಾನಿಕವಾಗಿ ಸಾರಿ ಸಾರಿ ಹೇಳಿ­ದರೂ ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಮರೆಮಾಚಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸ­ಲಾಗುತ್ತಿದೆ ಎಂದು ನೀರಾವರಿ ಹೋರಾಟ­ಗಾರ  ವೈದ್ಯ ಡಾ.ಮಧು­ಸೀತಪ್ಪ ಆರೋಪಿಸಿದರು.



ನೀರಾವರಿ ತಜ್ಞ ಜಿ.ಎಸ್‌.ಪರಮ­ಶಿವಯ್ಯ ಯೋಜನೆ­ಯಿಂದ 24 ಟಿಎಂಸಿ­ನೀರು ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಇದನ್ನು ಅಲ್ಲಗಳೆದು ಯೋಜನೆ ಜಾರಿಗೊಳಿಸ­ಲಾಗುತ್ತಿದೆ ಎಂದು  ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



ಕ್ಷೇತ್ರದ ಜನರಿಗೆ ಇಲ್ಲಸಲ್ಲದ್ದನ್ನು ಹೇಳಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ವಂಚಿಸುತ್ತಿದ್ದಾರೆ.   ಈಗಲಾದರೂ ಸತ್ಯ ನುಡಿಯ­ಬೇಕು ಎಂದು ವ್ಯಂಗ್ಯವಾಡಿದರು.



ಎತ್ತಿನಹೊಳೆ ಯೋಜನೆ ಕುರಿತು ನಾವು ಸುಳ್ಳು ಹೇಳಿದ್ದೇವೆ ಎಂಬುದು ಸಾಬೀತಾದಾರೆ, ಜೈಲಿಗೆ ಹೋಗಲು ಸಿದ್ಧ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.



ಎತ್ತಿನಹೊಳೆ ಯೋಜನೆಗೆ ಸಂಬಂಧಿ­ಸಿದಂತೆ 2012ರಲ್ಲೇ ಕರೆದಿದ್ದ ಟೆಂಡರ್‌ ಪಕ್ರಿಯೆಗೆ ಪುನರ್‌ ಚಾಲನೆ ನೀಡಲಾ­ಗಿದೆ ಹೊರತು ಹೊಸದೇನೂ ಮಾಡಲಾ­ಗಿಲ್ಲ. ಆಗಿನ ಯೋಜನೆಯ ಮೊತ್ತ 2,300 ಕೋಟಿ ರೂಪಾಯಿ­ಯಾಗಿದ್ದರೆ, ಈಗ ಅದರ ಮೊತ್ತ 12 ಸಾವಿರ ಕೋಟಿ ರೂಪಾಯಿಗೆ ಏರಿಕೆ­ಯಾಗಿದೆ.  ಯೋಜನೆ ಹೆಸರಿನಲ್ಲಿ ಜನರ ಹಣ ವ್ಯರ್ಥ ಮಾಡಲಾ­ಗುತ್ತಿದೆ ಎಂದು ಆರೋಪಿಸಿದರು.



‘ತಮ್ಮನ್ನು ತಾವು ಭಗೀರಥ ಎಂದು ವೀರಪ್ಪ ಮೊಯಿಲಿ ಕರೆಸಿಕೊಳ್ಳುತ್ತಿ­ದ್ದಾರೆ. ಆದರೆ ನಿಜವಾದ ಅರ್ಥದಲ್ಲಿ ನೀರಾವರಿ ತಜ್ಞ ಜಿ.ಎಸ್‌.ಪರಮ­ಶಿವಯ್ಯ ಅವರೇ ಭಗೀರಥರೇ ಹೊರತು ಬೇರೆ ಯಾರೂ ಅಲ್ಲ ಎಂದು ಹೇಳಿದರು.



ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್‌, ಕಲ್ಯಾಣ­ಕುಮಾರ್‌, ಅಜ್ಜವಾರ ಶ್ರೀನಿವಾಸ್, ಮೋಹನ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.