1 ರೂಪಾಯಿ ಅಕ್ಕಿ ಯೋಜನೆ 10ರಿಂದ ಜಾರಿ

7

1 ರೂಪಾಯಿ ಅಕ್ಕಿ ಯೋಜನೆ 10ರಿಂದ ಜಾರಿ

Published:
Updated:
1 ರೂಪಾಯಿ ಅಕ್ಕಿ ಯೋಜನೆ 10ರಿಂದ ಜಾರಿ

ಬೆಂಗಳೂರು (ಪಿಟಿಐ): ಬಿಪಿಎಲ್ ಕುಟುಂಬಗಳಿಗೆ ಒಂದು ರೂಪಾಯಿಗೆ 1ಕೆ.ಜಿ ಅಕ್ಕಿ ಕೊಡುವ ಯೋಜನೆ ಇದೇ 10 ರಂದು ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ತಿಳಿಸಿದರು.ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರ ಪ್ರತಿ ತಿಂಗಳು ರಾಜ್ಯಕ್ಕೆ 1,78.000 ಟನ್ ಅಕ್ಕಿ ನಿಡುತ್ತಿದೆ. ಈ ಯೋಜನೆ ಜಾರಿಯಿಂದ ಹೆಚ್ಚುವರಿ 1.07.000ಟನ್ ಅಕ್ಕಿಯ ಅವಶ್ಯಕತೆ ಇದೆ ಎಂದರು. ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಇದರಿಂದ ರಾಜ್ಯಕ್ಕೆ ಸುಮಾರು 4.300 ಕೋಟಿ ರೂಪಾಯಿಯ ಹೊರೆ ಬೀಳಲಿದೆ ಎಂದು ದಿನೇಶ್ ಗುಂಡೂರಾವ್ ವಿವರ ನೀಡಿದರು.ಈ ಯೋಜನೆ ವ್ಯಾಪ್ತಿಗೆ ಸುಮಾರು ಒಂದು ಕೋಟಿ ಕುಟುಂಬಗಳು ಒಳಪಡಲಿವೆ. ಒಬ್ಬ ಸದಸ್ಯರಿರುವ ಕುಟುಂಬಕ್ಕೆ  10 ಕೆ.ಜಿ., ಇಬ್ಬರು ಸದಸ್ಯರಿರುವ ಕುಟುಂಬಕ್ಕೆ 20 ಕೆ.ಜಿ. ಮತ್ತು ಇಬ್ಬರಿಗಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ಗರಿಷ್ಠ 30 ಕೆ.ಜಿ. ಅಕ್ಕಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry