ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

111 ಕೋಟಿ ಒಡತಿ ಹೇಮಾಮಾಲಿನಿ

Last Updated 21 ಫೆಬ್ರುವರಿ 2011, 17:05 IST
ಅಕ್ಷರ ಗಾತ್ರ

ಬೆಂಗಳೂರು:   ಮುಂದಿನ ತಿಂಗಳ ಮೂರರಂದು ನಡೆಯುವ ರಾಜ್ಯಸಭೆಯ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಚಿತ್ರನಟಿ ಹೇಮಾಮಾಲಿನಿ ಅವರು ಸುಮಾರು 111 ಕೋಟಿಗೂ ಅಧಿಕ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದಾರೆ.

ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನೀಡಿರುವ ಆಸ್ತಿ ವಿವರಗಳು ಲಭ್ಯವಾಗಿದ್ದು, ರೂ 80,30,00,000 ಸ್ಥಿರ ಮತ್ತು ರೂ 31,41,05,732 ಚರ ಆಸ್ತಿ ಸೇರಿದಂತೆ ಒಟ್ಟು ರೂ 111,71,05,732 ಆಸ್ತಿ ಹೊಂದಿದ್ದು, ಇದರಲ್ಲಿ ಪತಿ ಡಿಯೋಲ್ ಧರ್ಮೇಂದ್ರ ಹೆಸರಿನಲ್ಲಿ ಇರುವ ಆಸ್ತಿಯೂ ಸೇರಿದೆ. ಐಡಿಬಿಐ, ಐಸಿಐಸಿಐ ಬ್ಯಾಂಕ್‌ಗಳಲ್ಲಿ ರೂ 16,83,60,070 ಸಾಲ ಇದೆ.

ಮರುಳಸಿದ್ದಪ್ಪ ಆಸ್ತಿ ವಿವರ: ಕಾಂಗ್ರೆಸ್- ಜೆಡಿಎಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸಾಹಿತಿ ಕೆ.ಮರುಳಸಿದ್ದಪ್ಪ ಅವರು ವಿವಿಧ ಬ್ಯಾಂಕುಗಳಲ್ಲಿ ಒಟ್ಟು ರೂ 14,87,847 ನಗದು ಮತ್ತು ಬೆಂಗಳೂರಿನ ಜೆ.ಪಿ.ನಗರದಲ್ಲಿ 1.25 ಕೋಟಿ ರೂಪಾಯಿ ಬೆಲೆ ಬಾಳುವ 25 ಚದರ ವಿಸ್ತೀರ್ಣದ ಮನೆ ಹೊಂದಿದ್ದಾರೆ. ಇದನ್ನು ಬಿಟ್ಟರೆ ಇವರ ಹಾಗೂ ಪತ್ನಿ ಹೆಸರಿನಲ್ಲಿ ಬೇರೆ ಯಾವುದೇ ಆಸ್ತಿ ಇಲ್ಲ.

ಹೇಮಾ ಹೇಳಿದ್ದು ಏನು
 ‘ನನ್ನನ್ನು ರಾಜ್ಯಸಭೆಯ ಚುನಾವಣಾ ಕಣಕ್ಕೆ ಇಳಿಸಿದ ರಾಜ್ಯ ಬಿಜೆಪಿಗೆ ಅನಂತ ಧನ್ಯವಾದಗಳು. ಈ ವಿಷಯದಲ್ಲಿ ನನಗೆ ತುಂಬಾ ಸಂತೋಷವಾ    ಗಿದೆ’- ಹೀಗೆ ಪ್ರತಿಕ್ರಿಯೆ ನೀಡಿದ್ದು ನಟಿ ಹೇಮಾಮಾಲಿನಿ.ನಾಮಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ರಾಜ್ಯಸಭೆಯಲ್ಲಿ ಕರ್ನಾಟಕದ ವಿಷಯ ಚರ್ಚೆಗೆ ಬಂದಾಗ ನಾನೂ ಕೂಡ ಅದರ ಧ್ವನಿಯಾಗುತ್ತೇನೆ. ರಾಜ್ಯದಲ್ಲಿ ಯಾವ ಸಮಸ್ಯೆಗಳಿವೆ ಎನ್ನುವುದು ಗೊತ್ತಿಲ್ಲ. ತಿಳಿದುಕೊಂಡು ಆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಸುವೆ’ ಎಂದು ಹೇಳಿದರು.ನಿಮ್ಮ ಆಯ್ಕೆಗೆ ಅಪಸ್ವರ ಇದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ‘ಎಲ್ಲಿ ಸಂತೋಷ ಇರುತ್ತದೊ ಅಲ್ಲಿ ಸಹಜವಾಗಿಯೇ ದುಃಖ, ಅಸಮಾಧಾನವೂ ಇರುತ್ತದೆ. ಅಪಸ್ವರ, ಅಸಮಾಧಾನಗಳ ಬಗ್ಗೆ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ’ ಎಂದರು.

ರಾಜ್ಯದ ಸಮಸ್ಯೆಗಳಿಗೆ ತನ್ನದೇ ರೀತಿಯಲ್ಲಿ ಸ್ಪಂದಿಸುವುದಾಗಿ ಹೇಳಿದ ಅವರು ‘ಶೋಲೆ’ ಚಿತ್ರದ ಚಿತ್ರೀಕರಣ ಇಲ್ಲಿನ ರಾಮನಗರದ ರಾಮದೇವರ ಬೆಟ್ಟದಲ್ಲಿ ನಡೆಯಿತು. ಆಗಿನ ನನ್ನ ನೆನಪುಗಳು ಇನ್ನೂ ಮಾಸಿಲ್ಲ’ ಎಂದು ಹೇಳಿದರು. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಒಮ್ಮತದ ನಿರ್ಧಾರದಿಂದಲೇ ಹೇಮಾಮಾಲಿನಿ ಆಯ್ಕೆ ನಡೆದಿದೆ. ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಇಲ್ಲ’ ಎಂದು ನುಡಿದರು.

‘ನಿಜ, ಧನಂಜಯಕುಮಾರ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬೇಕೆನ್ನುವ ವಿಚಾರ ಇತ್ತು. ಆದರೆ, ಅದೇ ಅಂತಿಮವಾಗಿರಲಿಲ್ಲ. ಧನಂಜಯ ಅವರಿಗೂ ಈಗ ಸ್ಥಾನಮಾನ ನೀಡಲಾಗಿದೆ. ಮುಂದೆ ಅವಕಾಶ ಸಿಕ್ಕಾಗ ಬೇರೆ ಸ್ಥಾನಮಾನಗಳನ್ನು ನೀಡಲಾಗುವುದು’ ಎಂದರು.

ಆಸ್ತಿ ವಿವರ
ಬ್ಯಾಂಕ್ ಖಾತೆಗಳಲ್ಲಿ ಠೇವಣಿ  ರೂ 83,74,872
ಬಾಂಡ್, ಷೇರುಗಳ ರೂಪದಲ್ಲಿ ರೂ 1,98,46,360
ಅಂಚೆ ಕಚೇರಿ, ಎನ್‌ಎಸ್‌ಸಿ, ಎಲ್‌ಐಸಿ ಪಾಲಿಸಿ ರೂಪದಲ್ಲಿ ನಾಲ್ಕು ಲಕ್ಷ
ಮರ್ಸಿಡಿಸ್ ಬೆಂಜ್, ಟೊಯೊಟಾಇನೊವಾ, ಹುಂಡೈ ಸ್ಯಾಂಟ್ರೊ, ಮಾರುತಿ ಕಾರಿನ ಮೌಲ್ಯ ರೂ 37,19,994
22 ಕ್ಯಾರೆಟ್‌ನ 3779 ಗ್ರಾಂ ಹಾಗೂ 18
ಕ್ಯಾರೆಟ್‌ನ 969.86 ಗ್ರಾಂ ಚಿನ್ನ,
116.860 ಕ್ಯಾರೆಟ್ ಡೈಮಂಡ್ ಹೊಂದಿದ್ದು,
ಅವುಗಳ ಒಟ್ಟು ಮೌಲ್ಯ  ರೂ 1,39,173,20
ಇತರೆ ಆಸ್ತಿಗಳ ಮೌಲ್ಯ  ರೂ 23,14,71,663
ಚೆನ್ನೈನ ಅಪಾರ್ಟ್‌ಮೆಂಟ್, ಮನೆ ಮೌಲ್ಯ  ರೂ 4,00,00,000
ಮುಂಬೈನ ಅಪಾರ್ಟ್‌ಮೆಂಟ್, ಮನೆ ಮೌಲ್ಯ  ರೂ 1,30,00,000
ಮುಂಬೈನ ವಿವಿಧೆಡೆ ಇರುವ
ಅಪಾರ್ಟ್‌ಮೆಂಟ್‌ಗಳ ಮೌಲ್ಯ  ರೂ 30,50,00,000

ಪತಿ ಡಿಯೋಲ್ ಧರ್ಮೇಂದ್ರ ಆಸ್ತಿ
ಬ್ಯಾಂಕ್ ಖಾತೆಗಳಲ್ಲಿನ ಠೇವಣಿ  ರೂ 2,24,24,208
ಬಾಂಡ್, ಷೇರುಗಳ ರೂಪದಲ್ಲಿ ರೂ 28,71,325
ಎನ್‌ಎಸ್‌ಸಿ, ಎಐಸಿ ಪಾಲಿಸಿ ರೂಪದಲ್ಲಿ  ರೂ 1,40,000
ರಾಂಗೆ ರೊವರ್, ಮಾರುತಿ- 800
ಮತ್ತಿತರ ವಾಹನಗಳ ಬೆಲೆ ರೂ 4,06,378
500 ಗ್ರಾಂ ಚಿನ್ನ, ಐದು ಕೆ.ಜಿ. ಬೆಳ್ಳಿ ಮೌಲ್ಯ ರೂ 30,00,000
ಇತರೆ ಆಸ್ತಿಗಳ ಮೌಲ್ಯ  ರೂ 65,52,221
ಲೋನಾವಾಲದಲ್ಲಿನ ಆಸ್ತಿ ಮೌಲ್ಯ  ರೂ 5,00,00,000
ಮುಂಬೈನ ಯಶೋಧಮ್ ಫ್ಲ್ಯಾಟ್ ಮೌಲ್ಯ  ರೂ 7,50,00,000
ಮುಂಬೈನ ನ್ಯೂ ಇಂಡಿಯಾ ಫ್ಲ್ಯಾಟ್
ಮತ್ತಿತರ ಆಸ್ತಿ ಮೌಲ್ಯ  ರೂ 32,00,00,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT