ಬೀಜಿಂಗ್( ಐಎಎನ್ಎಸ್): ಕೋಳಿ ಮಾಂಸ ಸಂಸ್ಕರಣಾ ಘಟಕದಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಕನಿಷ್ಠ 119 ಜನ ಮೃತಪಟ್ಟು 54 ಮಂದಿ ಗಾಯಗೊಂಡ ಘಟನೆ ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಸೋಮವಾರ ನಡೆದಿದೆ.

ದೆಹುಯಿ ನಗರದ ಮಿಶಾಜಿ ಪಟ್ಟಣದಲ್ಲಿರುವ ಈ ಘಟಕದಲ್ಲಿ ಬೆಳಿಗ್ಗೆ 6ಗಂಟೆಗೆ ಬೆಂಕಿ ಆಕಸ್ಮಿಕ ಸಂಭವಿಸಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. `ಭಾರಿ ಶಬ್ದ ಕೇಳಿತು. ದ್ರವರೂಪದ ಅಮೋನಿಯಾ ಸೋರಿಕೆಯಾದ ಶಂಕೆ ಇದೆ' ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

`ಏಕಾಏಕಿ ಭಾರಿ ಸದ್ದು ಕೇಳಿಸಿ, ದಟ್ಟ ಹೊಗೆ ಆವರಿಸಿತು' ಎಂದು ಘಟನೆಯಲ್ಲಿ ಬದುಕುಳಿದ ಕಾರ್ಮಿಕರೊಬ್ಬರು ಹೇಳಿದ್ದಾರೆ. ದುರಂತ ನಡೆದಾಗ ಇಲ್ಲಿ 300 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ಪೈಕಿ 100 ಮಂದಿ ಅಪಾಯದಿಂದ ಪಾರಾಗಿದ್ದಾರೆ.

`ನಾನು ಮುಂಜಾನೆ 6 ಗಂಟೆಗೆ ಕೆಲಸ ಮಾಡಲು ಪ್ರಾರಂಭಿಸಿದ್ದೆ. ನನ್ನ ಹಾಗೆಯೇ ಇತರ 100 ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು' ಎಂದು ಬೆಂಕಿಯಿಂದ ತಪ್ಪಿಸಿಕೊಳ್ಳುವ ವೇಳೆ ಗಾಯಗೊಂಡ ವಾಂಗ್ ಫೆಂಗ್ಯಾ ಎಂಬುವರು ಹೇಳಿದ್ದಾರೆ.
`ಬೆಂಕಿ ಕಾಣಿಸಿಕೊಂಡ ತಕ್ಷಣವೇ ಓಡಿ ಓಡಿ ಎಂದು ಕೆಲವರು ಕೂಗಲಾರಂಭಿಸಿದರು. ಇದೇ ವೇಳೆ ವಿದ್ಯುತ್ ಸ್ಥಗಿತಗೊಂಡು ಇಡೀ ಘಟಕವೇ ಕತ್ತಲೆಯಲ್ಲಿ ಮುಳುಗಿತು' ಎಂದೂ ಅವರು ವಿವರಿಸಿದ್ದಾರೆ.

2009ರಲ್ಲಿ ಆರಂಭವಾದ ಈ ಘಟಕದಲ್ಲಿ ಒಟ್ಟು 1200 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ 67,000 ಟನ್ ಕೋಳಿ ಮಾಂಸ ಇಲ್ಲಿ ಸಿದ್ಧಗೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.