ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಅಡಿ ಶಿವ ಮೂರ್ತಿ ಪ್ರತಿಷ್ಠಾಪನೆ

Last Updated 22 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಬಾಲಕಿಯರ ಆಟದ ಮೈದಾನಲ್ಲಿ ಮಹಾಶಿವರಾತ್ರಿ ಅಂಗವಾಗಿ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ 12 ಅಡಿ ಎತ್ತರದ ಶಿವ ಮೂರ್ತಿಯ ವಿಗ್ರಹ ವನ್ನು ಪ್ರತಿಷ್ಠಾಪಿಸಲಾಗಿದೆ.

ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ಸಾರಿಯೂ ಶಿವರಾತ್ರಿ ಆಚರಣೆ ವಿಶೇಷವಾಗಿ ನಡೆಯಿತು.
ಅದರಂತೆ ಈ ಬಾರಿ 12 ಅಡಿ ಎತ್ತರದ ಶಿವನ ಮೂರ್ತಿಯನ್ನು ಕೈಲಾಸ ಪರ್ವತದ ಪ್ರತಿರೂಪ ನಿರ್ಮಾಣ ಮಾಡಲಾಗಿದೆ. ಮಧ್ಯ ಭಾಗದಲ್ಲಿ ದ್ವಾದಶ ಜ್ಯೋರ್ತಿ ಲಿಂಗಗಳನ್ನು ನಿರ್ಮಿಸಲಾಗಿದೆ.

ಶಿವನ ವಿಗ್ರಹದ ಸುತ್ತಲೂ ನೀರಿನ ಚಿಲುಮೆಗಳು, ಸುಂದರ ಹೂಗಳು, ಬಣ್ಣ- ಬಣ್ಣದ ಹೂಗಿಡಗಳ ಅಲಂ ಕಾರ ಎಲ್ಲವೂ ಇಲ್ಲಿ ರೂಪ ಪಡೆದು ಕೊಂಡಿದೆ. ಇದೊಂದು ಸುಂದರ ಕಲಾಕೃತಿಯಾಗಿ ಮೂಡಿಬಂದಿರುವುದು ಕಣ್ಸೆಳೆಯುತ್ತಿದೆ.

ಉದ್ಯಮಿ ಪಿ.ಎಲ್.ವೆಂಕಟರಾಮ ರೆಡ್ಡಿ ಉದ್ಘಾಟಿಸಿ, ` ಶಿವನ ಆರಾ ಧನೆಯಿಂದ ಕಷ್ಟಗಳು ಮಾಯವಾಗುತ್ತದೆ.  ಉಪವಾಸ, ಜಾಗರಣೆಯಿಂದ ಮನುಷ್ಯನ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ಶಿವನ ವಿಗ್ರಹದ ದರ್ಶನ ಇದೇ 22ರ ಸಂಜೆ ನಡೆಯಲಿದೆ.

ಈ ಸಂದರ್ಭದಲ್ಲಿ ಚಿಂತಾಮಣಿ ಈಶ್ವರೀಯ ವಿಶ್ವವಿದ್ಯಾನಿಲಯದ ಜಿ.ಕೆ.ಶ್ಯಾಮಾಲಾ ಅಧ್ಯಕ್ಷತೆ ವಹಿ ಸುವರು.
ಉದ್ಯಮಿ ಎಸ್.ಎನ್.ಸುಬ್ಬಾರೆಡ್ಡಿ, ಯುವಮುಖಂಡ ಜಿ.ಎಸ್.ಚೌಡರೆಡ್ಡಿ, ಬಿ.ವಿ.ವೆಂಕಟರವಣ, ಗಣೇಶ್‌ಭಟ್ ಪಾಲ್ಗೊಳ್ಳುವರು. ಸಂಜೆ 8ಕ್ಕೆ ಬೆಂಗ ಳೂರು ಕನ್ನಡ ಮತ್ತು ಸಾಂಸ್ಕೃತಿಕಕ ನಿದೇರ್ಶನಾಲಯದ ಪ್ರಾಯೋಜತ ಕತ್ವದಲ್ಲಿ ಕೆ.ಆರ್.ಪುರಂ ನೃತ್ಯರೂಪಕ ಪುಷ್ಪಾಂಜಲಿ ಹಾಗೂ ಡಾ.ಸುವರ್ಣ ಸಾಯಿವೆಂಕಟೇಶ್ ಹಾಗೂ ತಂಡದ ವರಿಂದ ಕಥಕ್ ನೃತ್ಯ ಹಾಗೂ ಕೆಜಿಎಫ್ ಶ್ರೀರಕ್ಷಾ ನಾಟ್ಯ ಕಲಾ ಅಕಾಡೆಮಿ ತಂಡ ದವರಿಂದ ಜಾನಪದ ನೃತ್ಯ ಕಾರ್ಯ ಕ್ರಮ ಪ್ರಸ್ತುತ ಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT