ಬುಧವಾರ, ಏಪ್ರಿಲ್ 21, 2021
31 °C

13 ವರ್ಷದೊಳಗಿನವರ ಚೆಸ್ ;ಅಗ್ರಸ್ಥಾನ ಹಂಚಿಕೊಂಡ ಇಬ್ಬರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇಬ್ಬರು ಸ್ಥಳೀಯ ಆಟಗಾರರಾದ- ಅಗ್ರ ಶ್ರೇಯಾಂಕದ ಆರ್.ಯು.ಅನಂತರಾಮು ಮತ್ತು ಐದನೇ ಶ್ರೇಯಾಂಕದ ಅರ್ಜುನ್ ಅಡಪ್ಪ, ರಾಜ್ಯ 13 ವರ್ಷದೊಳಗಿನವರ ಫಿಡೆ ರೇಟೆಡ್ ಓಪನ್ ಚೆಸ್ ಚಾಂಪಿಯನ್‌ಷಿಪ್‌ನ ಐದನೇ ಸುತ್ತಿನ ನಂತರ ತಲಾ ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.ನಗರದ ಬಿಜೈನ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ (ಎಸ್‌ಕೆಡಿಸಿಎ) ಆಶ್ರಯದಲ್ಲಿ  ನಡೆಯುತ್ತಿರುವ ಈ ಟೂರ್ನಿಯಲ್ಲಿ ಪೈಪೋಟಿ ಹೆಚ್ಚುತ್ತಿದೆ. ಭಾನುವಾರದ ಕೊನೆಗೆ ಮಂಗಳೂರಿನ ಇನ್ನೊಬ್ಬ ಆಟಗಾರ- ಎರಡನೇ ಶ್ರೇಯಾಂಕದ ಶರಣ್ ರಾವ್ ಮತ್ತು ಹುಬ್ಬಳ್ಳಿಯ ಆದಿತ್ಯ ಬಿ.ಕಲ್ಯಾಣಿ ತಲಾ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.ಆದಿತ್ಯ ಐದನೇ ಸುತ್ತಿನಲ್ಲಿ ಬಿಳಿ ಕಾಯಿಗಳಲ್ಲಿ ಆಡಿ, ಮೈಸೂರಿನ ಯಶಸ್ಕರ ಜೋಯಿಸ್‌ಗೆ ಮಣಿದರೂ ಎರಡನೇ ದಿನದ ಕೊನೆಗೆ ಅವರ ಎರಡನೇ ಸ್ಥಾನ ಅಬಾಧಿತವಾಗಿ ಉಳಿಯಿತು. ಶರಣ್ ರಾವ್ 39 ನಡೆಗಳಲ್ಲಿ ಬೆಂಗಳೂರಿನ ಸ್ವರ್ಣಾಂಗ್ಶು ಘೋಷ್ ಅವರನ್ನು ಮಣಿಸಿದರು.ಬಿಳಿ ಪಡೆಗಳಲ್ಲಿ ಅರ್ಜುನ ಅಡಪ್ಪ ಅವರು ಎದುರಾಳಿ ಅನಂತರಾಮು ಜತೆ ಪಾಯಿಂಟ್ ಹಂಚಿಕೊಳ್ಳುವುದಕ್ಕೆ ಒಪ್ಪಿಕೊಂಡರು.  ಮಂಗಳೂರಿನ ನಿಖಿಲೇಶ್ ಹೊಳ್ಳ (3.5) ಮತ್ತು ಹುಬ್ಬಳ್ಳಿಯ ಶಾಶ್ವತ್ ಎಸ್.ಮುದೇನಗುಡಿ (3.5) ಕೂಡ ಡ್ರಾ ಮಾಡಿಕೊಂಡರು. ಬೆಂಗಳೂರಿನ ಪ್ರಣವ್ ಎಂ.ಭಟ್ (3), ಹುಬ್ಬಳ್ಳಿಯ ನಾಗಶ್ರವಣ್ ಬಿ.ಹೇಮಾದ್ರಿ (2) ವಿರುದ್ಧ ಗ್ದ್ದೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.