ಮಂಗಳವಾರ, ಮಾರ್ಚ್ 2, 2021
30 °C

130 ವರ್ಷಗಳ ಬಳಿಕ ಮರಳಿದ ದೇವರ ತಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

130 ವರ್ಷಗಳ ಬಳಿಕ ಮರಳಿದ ದೇವರ ತಲೆ!

ನಾಂಪೆನ್‌ (ಎಪಿ): ಹರಿ–ಹರರ ವಿಗ್ರಹದ ರುಂಡ ಬರೋಬ್ಬರಿ 130 ವರ್ಷಗಳ ಬಳಿಕ ಮುಂಡದೊಂದಿಗೆ ಸೇರ್ಪಡೆಗೊಂಡಿದೆ! ಕಾಂಬೋಡಿಯಾದಿಂದ 130 ವರ್ಷಗಳ ಹಿಂದೆ ಫ್ರಾನ್ಸ್‌ಗೆ ತೆಗೆದುಕೊಂಡು ಹೋಗಿದ್ದ ಹರಿ–ಹರರ ವಿಗ್ರಹದ ತಲೆಯನ್ನು ಫ್ರಾನ್ಸ್‌ ಗುರುವಾರ ಮರಳಿಸಿದೆ.‘ಹರಿಹರ’ ವಿಗ್ರಹದ ರುಂಡವನ್ನು 1882 ಅಥವಾ 1883ರ ಸುಮಾರಿಗೆ ಕಾಂಬೋಡಿಯಾದ ನೋಮ್ ದಾ ದೇವಸ್ಥಾನದಿಂದ ಫ್ರಾನ್ಸ್ ಸಂಶೋಧಕರು ಒಯ್ದಿದ್ದರಂತೆ. 130 ವರ್ಷಗಳ ಕಾಲ ಆ ರುಂಡವನ್ನು, ಮುಂಡವಿಲ್ಲದೇ ಫ್ರಾನ್ಸ್‌ನ ಗ್ಯುಮೆಟ್‌ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿತ್ತಂತೆ.ರಾಯಭಾರಿಗಳು ಸೇರಿಸುಮಾರು 200 ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಹರಿಹರನ ರುಂಡವನ್ನು ವಿದ್ಯುಕ್ತವಾಗಿ ಮುಂಡದೊಂದಿಗೆ ಸೇರಿಸಿದ ಫ್ರಾನ್ಸ್‌, ವಿಗ್ರಹವನ್ನು ಕಾಂಬೋಡಿಯಾಕ್ಕೆ ನೀಡಿದೆ. ದೇವರ ರುಂಡ ಮರಳಿ ಬಂದದ್ದಕ್ಕೆ ಕಾಂಬೋಡಿಯಾ ಹರ್ಷ ವ್ಯಕ್ತಪಡಿಸಿದೆ.  ಈ ಹಿಂದೆ ಕಾಂಬೋಡಿಯಾದಲ್ಲಿ ಹಿಂದೂ ರಾಜರ ಆಳ್ವಿಕೆ ಇತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.