ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.50 ಲಕ್ಷ ಪೌಂಡ್ ವಿಸ್ಕಿ!

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್(ಪಿಟಿಐ): `ಮದ್ಯ ಹಳೆಯದಾದಷ್ಟು ರುಚಿ, ಕಿಕ್ ಹೆಚ್ಚು...! ಹಾಗೇ, ದಶಕಗಳಷ್ಟು ಹಳೆಯದಾದರೆ ರುಚಿ, ಕಿಕ್ ಜೊತೆಗೆ ಬೆಲೆಯೂ ಹೆಚ್ಚು..!ಬುಧವಾರ ಎಡಿನ್‌ಬರೊದ ಬೋನ್‌ಹಾಮ್ಸನಲ್ಲಿ ಹರಾಜಾಗುವ 55 ವರ್ಷದಷ್ಟು ಹಳೆಯದಾದ ಬೌಮೋರ್ ಕಂಪೆನಿಯ ವಿಸ್ಕಿಯ ಬೆಲೆ ಒಂದೂವರೆ ಲಕ್ಷ ಪೌಂಡ್‌ಗೆ ಏರಲಿದೆ. ಅಂದಹಾಗೆ ಈ ದುಬಾರಿ ವಿಸ್ಕಿ ತಯಾರಾಗಿದ್ದು 1957ರಲ್ಲಿ.

`ಬೊನ್‌ಹಾಮ್ಸನ ಹರಾಜು ಕೇಂದ್ರದಲ್ಲಿರುವ ಹಳೆಯ ಹನ್ನೆರಡು ವಿಸ್ಕಿ ಶೀಷೆಗಳಲ್ಲಿರುವ ಅತ್ಯಂತ ಹಳೆಯದಾದ ವಿಸ್ಕಿ ಇದು. 54 ವರ್ಷಗಳಷ್ಟು ಹಳೆಯ ಈ ವಿಸ್ಕಿಯನ್ನು ಇದನ್ನು ಇಲ್ಲಿಯವರೆವಿಗೂ ಬಿಡುಗಡೆ ಮಾಡಿಲ್ಲ~ ಎಂದು ಡೇಲಿ ಮೇಲ್ ವರದಿ ಮಾಡಿದೆ.ಹರಾಜುದಾರರು ಈ ವಿಸ್ಕಿ ಒಂದು ಲಕ್ಷ ಪೌಂಡ್‌ನಿಂದ ಒಂದೂವರೆ ಲಕ್ಷ ಪೌಂಡ್ ಬೆಲೆಗೆ ಹರಾಜಾಗಬಹುದು ಎಂದು ನಿರೀಕ್ಷಿಸಿದ್ದಾರೆ.

`ದುಬಾರಿ ವಿಸ್ಕಿಯಲ್ಲಿ ಬ್ಲೂಬೆರಿ, ಒಣ ಕಪ್ಪು ದ್ರಾಕ್ಷಿಯ ಪಾಕ, ಅಂಜೂರ, ಉಪ್ಪು ಮತ್ತು ನೀಲಗಿರಿಯ ಪರಿಮಳವಿದೆ. ಈ ಮದ್ಯ ಸೇವಿಸಿದವರಿಗೆ ಚಾಕೊಲೇಟ್ ಮತ್ತು ದ್ರಾಕ್ಷಿಯನ್ನು ಸೇವಿಸಿದ ಅನುಭವವಾಗುತ್ತದೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ. ಇಷ್ಟೇ ಹಳೆಯ ಬೌಮೋರ್ ವಿಸ್ಕಿಯನ್ನು ನ್ಯೂಯಾರ್ಕ್‌ನ ಬೋನ್‌ಹಾಮ್ಸನಲ್ಲಿ ಹರಾಜು ಕೇಂದ್ರದಲ್ಲಿ 28ರಂದು ಹರಾಜು ಹಾಕಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT