ಗುರುವಾರ , ಜನವರಿ 30, 2020
22 °C

16ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಮನಗೂಳಿ-–ದೇವಾಪೂರ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭಿಸು ವುದು ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಉಪವಾಸ ಸತ್ಯಾಗ್ರಹವು ಬುಧವಾರಕ್ಕೆ 16 ದಿನಕ್ಕೆ ಕಾಲಿಟ್ಟಿದೆ.ಬುಧವಾರ ಪಟ್ಟಣದ ಮಹಾತ್ಮಾ ಗಾಂಧಿ ಟಂಟಂ ವಾಹನಗಳ ಮಾಲೀಕರ ಸಂಘದವರು ಬೆಂಬಲ ಸೂಚಿಸಿ ಧರಣಿಯನ್ನು ಕೈಕೊಂಡರು.

ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಆದಮ್‌ ಅತ್ತಾರ,  ಉತ್ತಮ ರಸ್ತೆಗಳು ಇಲ್ಲದ್ದರಿಂದ ವಾಹನಗಳು, ಬಿಡಿಭಾಗ ಗಳನ್ನು ಕಳಚಿಕೊಂಡು ಬೀಳುವಂತಾ ಗಿದೆ. ಸರಕು ಸಾಗಣೆ ದುಸ್ತರವಾಗಿ ಪರಿಣಮಿಸಿದೆ. ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಶೀಘ್ರ ಅಭಿವೃದ್ಧಿ ಕಾರ್ಯ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ಪುರಸಭೆ ಸದಸ್ಯ ಇಬ್ರಾಹಿಂ ಮನ್ಸೂರ ಮಾತನಾಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಧಶರಥಸಿಂಗ್ ಮನಗೂಳಿ, ಸಂಚಾಲಕರಾದ ವೀರೇಶ ಕೋರಿ,  ರಾಮನಗೌಡ ಬಾಗೇವಾಡಿ, ಮುತ್ತು ದೇಸಾಯಿ, ಉಪಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಕಾರ್ಯದರ್ಶಿ ಕಾಶಿನಾಥ ಮುರಾಳ, ಕಾಶಿನಾಥ ಮಡ್ಡಿ, ಖಾಲೀದ ಲಾಹೋರಿ, ಲಾಳೇಮಶ್ಯಾಕ ಅತ್ತಾರ, ಅಬ್ದುಲ್‌ರಜಾಕ ಕುಂಟೋಜಿ, ಇಕ್ಬಾಲ್ ಅತ್ತಾರ, ಮಹಿಬೂಬ ಚೌದ್ರಿ, ಮಂಜೂರ ಬೇಪಾರಿ, ಸಲೀಂ ಜಮದಾರ, ರವಿಚಂದ ನೀರಲಗಿ, ಆನಂದ ದಲಾಲ, ಮಾನಸಿಂಗ್ ಕೊಕಟನೂರ,  ಬಾಬು ಬಡಗಣ, ಪ್ರಕಾಶ ಹಜೇರಿ, ಸಂಬಾಜಿ ವಾಡಕರ ಮತ್ತಿತರರು ಇದ್ದರು.ಬೆಂಬಲ:- ಪಟ್ಟಣದಲ್ಲಿ ನಡೆಯು ತ್ತಿರುವ  ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕರವೇ ಘಟಕ  ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ ಮತ್ತು ಮುದ್ದೇಬಿಹಾಳ ಘಟಕದ ಅಧ್ಯಕ್ಷರು ಬೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.  ಅಶೋಕ ಹಾರಿವಾಳ, ಸಿದ್ದು ಮೇಟಿ, ಅರುಣ ಪಾಟೀಲ ಇದ್ದರು.ಅರುಣ ಶಹಾಪುರ ಬೆಂಬಲ

ತಾಳಿಕೋಟೆ:
ಕಳೆದ ಮೂರು ದಿನ ಗಳಿಂದ ನಡೆಸಿದ್ದ ಆಮರಣಾಂತ ಉಪ ವಾಸವನ್ನು ಈಚೆಗೆ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ನೀಡಿದ ಭರವಸೆ ಹಿನ್ನೆಲೆಯಲ್ಲಿ ನಿನ್ನೆ ಕೈಬಿಟ್ಟಿದ್ದರೂ ಕೂಡ ಜಿಲ್ಲಾ ಉಸ್ತು ವಾರಿ ಸಚಿವರು, ಸಂಬಂಧಿಸಿದ ನಾಲ್ಕು ಜನ ಶಾಸಕರು ಬಂದು ಭರವಸೆ ನೀಡು ವವರೆಗೂ ಸರಣಿ ಉಪವಾಸ ಸತ್ಯಾ ಗ್ರಹ ಮುಂದುವರೆಯುತ್ತದೆ ಎಂದು ಸಮಿತಿ ತಿಳಿಸಿದೆ.ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಬೆಂಬಲ ವ್ಯಕ್ತಪಡಿಸಿ ಮಾತ ನಾಡಿ, ಕಾಂಗ್ರೆಸ್ ಸರ್ಕಾರ         ಕೊಡುತ್ತಿರುವ  ಅನ್ನಭಾಗ್ಯ, ಶಾದಿಭಾಗ್ಯ ಮತ್ತು ಕ್ಷೀರಭಾಗ್ಯ ಬದಲಿಗೆ ರಸ್ತೆಭಾಗ್ಯ ನೀಡಿದರೆ ಸಾಕು, ಲೋಕಸಭೆ ಚುನಾ ವಣೆ ಚುನಾವಣೆಗೋಸ್ಕರ ಲೋಕ ಭಾಗ್ಯಕ್ಕಾಗಿ ಈ ಎಲ್ಲ ಭಾಗ್ಯಗಳನ್ನು ನೀಡುತ್ತಿರುವ ಕಾಂಗ್ರೆಸ್ಸಿಗೆ ಜನರ ಮೇಲೆ ಕಿಂಚಿತ್ತಾದರೂ ಕರುಣೆ ಇದ್ದರೆ ಮನಗುಳಿ–-ದೇವಾಪುರ ರಾಜ್ಯ ಹೆದ್ದಾರಿ ನಿರ್ಮಾಣ ಮಾಡಲಿ. ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲು ವಿಳಂಬ ಮಾಡಿದ್ದಲ್ಲಿ ನಾನೂ ಕೂಡಾ ಜನರೊಂದಿಗೆ ರಸ್ತೆ ಗಿಳಿದು ಹೋರಾಟ ಮಾಡಬೇಕಾ ಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)