ಶನಿವಾರ, ಜನವರಿ 18, 2020
21 °C

16 ರಂದು ಮರುಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ಈಗಾಗಲೇ ಪ್ರಕಟಿಸಿರುವಂತೆ ಜನವರಿ 16ರಂದು ಮರುಪರೀಕ್ಷೆ ನಡೆಯಲಿದೆ.ದಾವಣಗೆರೆ, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಮತ್ತು ಬೆಂಗಳೂರು ಅಧ್ಯಯನ ಕೇಂದ್ರಗಳ ಮರುಪರೀಕ್ಷೆಗೆ ಸಿ.ಸಿ.ಟಿ.ವಿ ಅಳವಡಿಸಿದರೆ ಆ ಕೇಂದ್ರಗಳಲ್ಲೇ ಮರುಪರೀಕ್ಷೆ ನಡೆಸಲಾಗುವುದು ಎಂಬುದಾಗಿ ಈ ಹಿಂದೆ ತಿಳಿಸಲಾಗಿತ್ತು. ಇದೀಗ ಬೆಂಗಳೂರು ಅಧ್ಯಯನ ಕೇಂದ್ರವು ಸಿ.ಸಿ.ಟಿ.ವಿ ಅಳವಡಿಸಲು ಮುಂದಾಗಿರುವುದರಿಂದ ಮರುಪರೀಕ್ಷೆಯನ್ನು ಆ ಕೇಂದ್ರದಲ್ಲಿಯೇ ನಡೆಸಲಾಗುವುದು. ಉಳಿದ ನಾಲ್ಕು ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಚಾಮರಾಜಪೇಟೆಯ 5ನೇ ಮುಖ್ಯ ರಸ್ತೆಯಲ್ಲಿರುವ ಆಸ್ಟಿನ್ ಕಾಲೇಜಿನಲ್ಲಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಈಗಾಗಲೇ ಅಧ್ಯಯನ ಕೇಂದ್ರಗಳಿಗೆ ಕಳುಹಿಸಲಾಗಿದೆ. ವಿವಿ ವೆಬ್‌ಸೈಟ್ ಹಾಗೂ ನಿರ್ದೇಶನಾಲಯದ ಸೂಚನಾ ಫಲಕದಲ್ಲೂ ಪ್ರಕಟಿಸಲಾಗಿದೆ.2011ರ ಆಗಸ್ಟ್/ಸೆಪ್ಟೆಂಬರ್‌ನಲ್ಲಿ ನಡೆದ ಪರೀಕ್ಷೆಗೆ ನೀಡಲಾಗಿದ್ದ ಪ್ರವೇಶ ಪತ್ರವನ್ನೇ ವಿದ್ಯಾರ್ಥಿಗಳು ಬಳಸಬಹುದು ಎಂದು ಹೇಳಿದೆ.

ಪ್ರತಿಕ್ರಿಯಿಸಿ (+)