ಗುರುವಾರ , ಮೇ 13, 2021
24 °C

17 ಗ್ರಾ.ಪಂ. ಕ್ಷೇತ್ರದಲ್ಲಿ ನಾಳೆ ಉಪಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ 6 ತಾಲ್ಲೂಕುಗಳ 17 ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ಇದೇ 25ರಂದು ಉಪಚುನಾವಣೆ ನಡೆಯಲಿದೆ.ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ಮತ ಚಲಾಯಿಸುವುದು ಮೂಲಭೂತ ಹಕ್ಕು ಹಾಗೂ ಕರ್ತವ್ಯ. ಚಿಕ್ಕ ಮಗಳೂರು ತಾಲ್ಲೂಕಿನ ದೇವದಾನ, ಬ್ಯಾರವಳ್ಳಿ, ಕೂದುವಳ್ಳಿ, ಅಲ್ಲಂಪುರ, ತರೀಕೆರೆ ತಾಲ್ಲೂಕಿನ ಗೋಪಾಲ, ಮಳಲಿ ಚನ್ನೇನಹಳ್ಳಿ, ಕೊರಟೆಗೆರೆ, ಗೌರಾಪುರ,  ಶೃಂಗೇರಿ ತಾಲ್ಲೂಕಿನ ಮರ್ಕಲ್, ಕಡೂರು ತಾಲ್ಲೂಕಿನ ಆಸಂದಿ, ಹಿರೇನಲ್ಲೂರು, ವಕ್ಕಲಗೆರೆ, ಸಿಂಗಟಗೆರೆ, ಕೊಪ್ಪ ತಾಲ್ಲೂಕಿನ ನಿಲುವಾಗಿಲು, ಜಯಪುರ, ಮೂಡಿಗೆರೆ ತಾಲ್ಲೂಕಿನ ಕಳಸ, ಹೊರನಾಡು ಗ್ರಾಮ ಪಂಚಾಯತಿ  ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ.ಎಲ್ಲಾ ವಾಣಿಜ್ಯ ಹಾಗೂ ಕೈಗಾರಿಕ ವಹಿವಾಟು ಸಂಸ್ಥೆ, ಅಂಗಡಿ ಮುಂಗಟ್ಟು ಮತ್ತು ವೇತನ, ಸಂಬಳ ಅಥವಾ ಇತರೆ ರೀತಿಯ ಭತ್ಯೆ ಇತ್ಯಾದಿಗಳ ಆಧಾರವಾಗಿ ನೇಮಕಗೊಂಡಿರುವ ಎಲ್ಲಾ ವಹಿವಾಟುದಾರರು, ಮುಖ್ಯಸ್ಥರು ನೇಮಿಸಿಕೊಂಡಿರುವ ತಮ್ಮ ಮತದಾರ ನೌಕರರು, ಸಿಬ್ಬಂದಿ, ಕೆಲಸಗಾರರಿಗೆ ಸೂಕ್ತನು ಸಾರ ವೇತನ ಭತ್ಯೆ ಸಂಬಳ ಸಹಿತ ಅಂದು ರಜೆ ನೀಡಬೇಕು. ಮತದಾನಕ್ಕೆ ಸಮಯವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ಆದೇಶ ಹೊರಡಿಸಿದ್ದಾರೆ.ಉಪ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಮಗ ಳೂರು ತಾಲ್ಲೂಕಿನ ದೇವದಾನ ಗ್ರಾಮದ ಕಡಬಗೆರೆ, ಕೊಪ್ಪ ತಾಲ್ಲೂಕಿನ ಜಯಪುರ ಹಾಗೂ ಮೂಡಿಗೆರೆ ತಾಲ್ಲೂಕಿನ ಕಳಸದಲ್ಲಿ ಅಂದು ಸಂತೆಗಳನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಮದ್ಯ ಮಾರಾಟ ನಿಷೇಧ: ಗ್ರಾಮ ಪಂಚಾ ಯಿತಿ  ಉಪಚುನಾವಣೆಯ ಮತದಾನ ಹಾಗೂ ಮತ ಎಣಿಕೆ ನಡೆಯುವ ಹಿನ್ನೆಲೆಯಲ್ಲಿ ಸಾರ್ವ ಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉಪ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.ಚಿಕ್ಕಮಗಳೂರು ತಾಲ್ಲೂಕಿನ ದೇವದಾನ, ಬ್ಯಾರವಳ್ಳಿ, ಕೂದುವಳ್ಳಿ, ಅಲ್ಲಂಪುರ, ತರೀಕೆರೆ ತಾಲ್ಲೂಕಿನ ಗೋಪಾಲ, ಮಳಲಿ ಚನ್ನೇನಹಳ್ಳಿ, ಕೊರಟೆಗೆರೆ, ಗೌರಾಪುರ,  ಶೃಂಗೇರಿ ತಾಲ್ಲೂಕಿನ ಮರ್ಕಲ್, ಕಡೂರು ತಾಲ್ಲೂಕಿನ ಆಸಂದಿ, ಹಿರೇನಲ್ಲೂರು, ವಕ್ಕಲಗೆರೆ, ಸಿಂಗಟಗೆರೆ, ಕೊಪ್ಪ ತಾಲ್ಲೂಕಿನ ನಿಲುವಾಗಿಲು, ಜಯಪುರ,  ಮೂಡಿಗೆರೆ ತಾಲ್ಲೂಕಿನ ಕಳಸ, ಹೊರನಾಡು ಗ್ರಾಮಪಂಚಾಯತಿ  ವ್ಯಾಪ್ತಿಯಲ್ಲಿ  ಇದೇ 23ರ ಮಧ್ಯರಾತ್ರಿಯಿಂದ 26ರ ಬೆಳಿಗ್ಗೆ 7 ರವರೆಗೆ ನಿಷೇಧಿಸಲಾಗಿದೆ.ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ ಕೊಪ್ಪ, ಮೂಡಿಗೆರೆ, ತಾಲ್ಲೂಕು ಕೇಂದ್ರದಿಂದ 2 ಕಿ.ಮೀ ವ್ಯಾಪ್ತಿಯಲ್ಲಿ ಇದೇ 28ರ ಮಧ್ಯರಾತ್ರಿಯಿಂದ 30ರ ಬೆಳಿಗ್ಗೆ 7 ಗಂಟೆವರೆಗೆ ಎಲ್ಲಾ ನಮೂನೆಯ ಮದ್ಯದಂಗಡಿ ಮುಚ್ಚುವಂತೆ, ಮದ್ಯ, ಬಿಯರ್, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಣಿಕೆ, ಶೇಖರಣೆ, ತಯಾರಿಕೆ ಸರಬರಾಜು ಮತ್ತು ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ಆದೇಶ ಹೊರಡಿಸಿದ್ದಾರೆ.`ಬಿಜೆಪಿ ಸರ್ಕಾರ ಕಿತ್ತೊಗೆಯಿರಿ~

ಚಿಕ್ಕಮಗಳೂರು: ಬಿಜೆಪಿ ಸರ್ಕಾರ ಕಿತ್ತೊಗೆ ಯಬೇಕು ಎಂದು ಜೆಡಿಎಸ್ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಡಿ.ಆರ್.ಉಮಾಪತಿ ಕರೆ ನೀಡಿದರು. ಬ್ಯಾರುವಳ್ಳಿ ಗ್ರಾಮ ಪಂಚಾಯಿತಿ ಕೆಳಮಲ್ಲಂದೂರು ಕ್ಷೇತ್ರದ ಉಪಚುನಾವಣೆಗೆ ವಡ್ಡಿಹೊಂಬಳ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳೆಂದು ಬಣ್ಣಿಸಿದರು.ಎಚ್.ಡಿ.ಕುಮಾರಸ್ವಾಮಿ ಅಭಿ ಮಾನಿಗಳ ಸಂಘದ ಅಧ್ಯಕ್ಷ ಹೊಲದಗದ್ದೆ ಗಿರೀಶ್ ಮಾತನಾಡಿ ದರು. ಪಕ್ಷದ ಮುಖಂಡ ರಾಜಣ್ಣ  , ಜಿಲ್ಲಾ ಎಸ್‌ಸಿ, ಎಸ್‌ಟಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರುಗುಂದ ಪ್ರಸನ್ನ, ಎನ್.ಡಿ.ಮಂಜುನಾಥ, ಎಂ.ಎಲ್.ಶಶಿಧರ,  ಲೋಹಿತ್, ಅಭ್ಯರ್ಥಿ ಪ್ರಸನ್ನ, ಸತೀಶ್ ಇ್ದ್ದದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.