ನಗು ಮೊಗದವರ ನವೋಲ್ಲಾಸ ಸಂಸ್ಥೆ ಹಾಸ್ಯಲೋಕ 18ನೇ ವರ್ಷಕ್ಕೆ ಕಾಲಿರಿಸಿದೆ. ಎಂಥ ಬೇಸರದ್ಲ್ಲಲೂ ನಗುವಿನ ಸಿಂಚನ ಎರೆಯುವ ಹಾಸ್ಯಲೋಕ ನಿಜಕ್ಕೂ ಅಕ್ಷಯ ಪಾತ್ರೆ ಇದ್ದಂತೆ. ಹಾಸ್ಯವನ್ನೇ ಪ್ರಧಾನವಾಗಿಸಿಕೊಂಡಿರುವ ಹಾಸ್ಯಲೋಕ ಸಂಸ್ಥೆ ಹುಟ್ಟಿದ್ದು 1995 ಜೂನ್ 9ರಂದು. 2013 ಜೂನ್ 23ರಂದು ಹಾಸ್ಯಲೋಕ ಸಂಸ್ಥೆ ತನ್ನ 18 ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದು ನಡೆದು ಬಂದ ದಾರಿಯ ಒಂದು ಇಣುಕುನೋಟ ಇಲ್ಲಿದೆ.

ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಹಾಸ್ಯಲೋಕ ಸಂಸ್ಥೆ ತುಮಕೂರಿನ ಜನತೆಗೆ ನಗೆಯೂಟ ಬಡಿಸುತ್ತಿದೆ. ಆರಂಭದಲ್ಲಿ ಪ್ರತಿ ತಿಂಗಳಿಗೆ ನೂರು ಕಾರ್ಯಕ್ರಮ ನೀಡುತ್ತಾ ಎಲ್ಲರ ಮನ ಗೆದ್ದಿತು. ಕಿರುತೆರೆ, ಬೆಳ್ಳಿತೆರೆಯ ಹಾಸ್ಯ ಕಲಾವಿದರಾದಿಯಾಗಿ ಹಲವರು ಹಾಸ್ಯಲೋಕದ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದಾರೆ. ಪ್ರಸ್ತುತ, ಹಾಸ್ಯಲೋಕ ನಿಯಮಿತವಾಗಿ ತಿಂಗಳಿಗೆ ಎರಡು ಕಾರ್ಯಕ್ರಮ ಏರ್ಪಡಿಸುತ್ತಿದೆ.

`ಮರಳುಗಾಡಾಗಿರುವ ಹಾಸ್ಯ ಜಗತ್ತಿನಲ್ಲಿ ತುಮಕೂರಿನ ಹಾಸ್ಯಲೋಕ ಮರೀಚಿಕೆಯಂತೆ ಹುಟ್ಟಿದೆ. `ತುಮ್ಕೂರ್ ತುಮ್ಕೋ ಹೈ, ಹಮ್ಕೋ ಸ್ಮಶಾನ್ ಹೈ' ಅಂತ ಕೈಲಾಸಂ ಅವರಿಂದ ಜೋಕ್ ಮಾಡಿಸಿಕೊಂಡಿರುವ ತುಮಕೂರು ಜನರಿಗೆ ಹಾಸ್ಯವೇ ಪ್ರಧಾನವುಳ್ಳ ಕಾರ್ಯಕ್ರಮ ನಡೆಸಲು ಮುಂದಾಗಿರುವುದು ತುಂಬಾ ಸಂತೋಷಕರ. ನಿಜವಾದ ಹಾಸ್ಯ ಹಳಿ ತಪ್ಪುತ್ತಿರುವುದರಿಂದ ಇದು ಉಳಿಯುತ್ತದೆಯೋ ಎಂದು ಅನ್ನಿಸಿದ ಸಂದರ್ಭ ಭರವಸೆ ಮೂಡಿಸಿರುವವರು ನೀವು' ಎಂದು ಹಾಸ್ಯಲೋಕ ಸಂಸ್ಥೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿನೋದ ವಿದ್ಯಾ ಸಾಗರ ಹಾಗೂ ಹಾಸ್ಯ ಕಲಾವಿದ ಎಸ್.ಶಿವರಾಮ್ ಶ್ಲಾಘಿಸಿದ್ದರು.

ದೇವರು ವಕ್ರವಾದ ತಲೆಗಳನ್ನು ಕೂದಲಿಂದ ಮುಚ್ಚಿದ್ದು, ಚೆನ್ನಾಗಿರುವ ತಲೆಗಳನ್ನು ಬೋಳಾಗಿಸಿದ್ದಾನೆ ಎನ್ನುತ್ತಾ ತಮ್ಮ ಬೋಳು ತಲೆಯನ್ನು ನೇವರಿಸುತ್ತಾ ನಗೆಗೆ ನಾಂದಿ ಹಾಡಿದ್ದರು. ಅಲ್ಲಿಂದ ಹಾಸ್ಯಲೋಕ ನಿರಂತರವಾಗಿ ನಿರ್ಮಲ ನಗೆಯೂಟ ಬಡಿಸುತ್ತಿದೆ. ಹಾಸ್ಯಲೋಕದ ಕಾರ್ಯಕ್ರಮಗಳಿಗೆ ಹಾಸ್ಯ ಚಕ್ರವರ್ತಿ ಮಾಸ್ಟರ್ ಹಿರಣ್ಣಯ್ಯ, ಹಿರೇಮಗಳೂರು ಕಣ್ಣನ್, ಅ.ರಾ.ಮಿತ್ರ, ಡಾ.ಎಂ.ಎಚ್.ಶ್ರೀಕಂಠಯ್ಯ, ವೈ.ಎಂ.ಎನ್.ಮೂರ್ತಿ, ಪ್ರೊ.ಎಂ.ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ್, ವಿ.ಕೆ.ದೊರೆಸ್ವಾಮಿ ಮುಂತಾದ ಹಿರಿಯ ನಗೆಗಾರರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಬೆಳ್ಳಿತೆರೆಯ ಕಲಾವಿದರಾದ ದ್ವಾರಕೀಶ್, ದೊಡ್ಡಣ್ಣ, ಸಿ.ಆರ್.ಸಿಂಹ, ವಾದಿರಾಜ್, ಉಮೇಶ್, ರಮೇಶ್ಭಟ್, ಡಿಂಗ್ರಿ ನಾಗರಾಜ್, ಎಂ.ಎನ್.ಲಕ್ಷ್ಮೀದೇವಿ, ಆರ್.ಟಿ.ರಮಾ, ಉಮಾಶ್ರೀ, ಕರಿಬಸವಯ್ಯ ಮತ್ತು ದತ್ತಾತ್ರೇಯ ಅವರು ತುಮಕೂರಿನ ಜನತೆಗೆ ನಗೆಯೂಟ ಬಡಿಸಿದ್ದಾರೆ. ಡಾ.ಪಿ.ಎಸ್.ರಾಮಾನುಜಂ, ಎಂ.ಎಸ್.ನರಸಿಂಹಮೂರ್ತಿ, ಲಕ್ಷ್ಮಿನಾರಾಯಣ ಭಟ್ಟ, ಅಸಾದುಲ್ಲಾ ಬೇಗ್, ಡುಂಡಿರಾಜ್, ಸಾ.ಶಿ.ಮರುಳಯ್ಯ ಸೇರಿದಂತೆ ಹಲವಾರು ಹಾಸ್ಯ ಸಾಹಿತಿಗಳೂ ಕಾರ್ಯಕ್ರಮ ನೀಡಿದ್ದಾರೆ.

ಹಾಸ್ಯಲೋಕದ ವೈಶಿಷ್ಟ್ಯ
ಹಾಸ್ಯಲೋಕದಲ್ಲಿ ಮನಸ್ಸನ್ನು ಮುದಗೊಳಿಸಬಲ್ಲ ಶುಭ್ರ ನಗೆ ತುಂಬಿದೆ. ಇಲ್ಲಿ ಅಶ್ಲೀಲತೆ, ಕಹಿಯಾದ ಕೊಂಕು, ಕುಟಿಲೋಕ್ತಿಗಳಿಗೆ ಅವಕಾಶವಿಲ್ಲ. ಅನ್ಯರನ್ನು ಅಣಕಿಸುವ ಅವಕಾಶವೂ ಇಲ್ಲ. ಕೇಳಿದವರ ಕಿವಿ ತುಂಬಬೇಕು. ಮನಸ್ಸು ಮುದಗೊಳ್ಳಬೇಕು ಎಂಬುದು ಹಾಸ್ಯಲೋಕದ ಮೂಲ ಆಶಯ.

ಅಪರಿಚಿತರಾಗಿ ಬರುವ ಪ್ರೇಕ್ಷಕರು ಹಾಗೂ ಅತಿಥಿಗಳು ಕಾರ್ಯಕ್ರಮದ ನಂತರ ಆತ್ಮೀಯರಾಗಿ ಹೋಗುವಂತೆ ಮಾಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳು ಹಾಗೂ ಪ್ರೇಕ್ಷಕರೊಂದಿಗೆ ಸಂಸ್ಥೆ ನಿಕಟ ಸಂಪರ್ಕ ಇರಿಸಿಕೊಂಡಿರುತ್ತದೆ. ಈಗಾಗಲೇ ಸಂಸ್ಥೆಯಲ್ಲಿ 850 ಮಂದಿ ಆಜೀವ ಸದಸ್ಯರಿದ್ದಾರೆ.

ಹಾಸ್ಯಲೋಕ ಕಾರ್ಯಕ್ರಮ ಕೇವಲ ವೇದಿಕೆ ಭಾಷಣ, ನಾಟಕಗಳಿಗೆ ಸೀಮಿತವಾಗಿಲ್ಲ. ವರ್ಷಕ್ಕೆ ಎರಡು-ಮೂರು ಬಾರಿ ಬಳಗದ ಸದಸ್ಯರು ಕುಟುಂಬ ಸಮೇತ ಪ್ರೇಕ್ಷಣೀಯ ಸ್ಥಳಗಳಿಗೆ ವಿಹಾರ ಹೋಗುವುದು ವಾಡಿಕೆಯಾಗಿದೆ.

ಅನುದಾನಕ್ಕೆ ಕೈಚಾಚಿಲ್ಲ
ಸ್ವಾಭಿಮಾನದ ಪ್ರತೀಕವಾದ ಹಾಸ್ಯಲೋಕ ಸಂಸ್ಥೆ ಸರ್ಕಾರದಿಂದ ನೆರವಾಗಲಿ, ಅಕಾಡೆಮಿಗಳಿಂದ ಅನುದಾನಕ್ಕಾಗಲಿ ಕೈ ಚಾಚಿಲ್ಲ. ಸಂಸ್ಥೆಯಲ್ಲಿ 850 ಆಜೀವ ಸದಸ್ಯರಿಂದ ಹಣವನ್ನೇ ಇಡುಗಂಟಾಗಿಸಿ, ಅದರಿಂದ ಬರುವ ಆದಾಯದಿಂದಲೇ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಜೂನ್ 23ರಂದು ಭಾನುವಾರ ಸಂಸ್ಥೆ ತನ್ನ 18ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಇಂತಹ ಸುಸಂಸ್ಕೃತ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಹಾಸ್ಯಲೋಕ ಸಂಸ್ಥೆ ನಿರಂತರ ಸೇವೆ ಸಲ್ಲಿಸಲು ಎಲ್ಲರ ಸಹಕಾರ, ಪ್ರೋತ್ಸಾಹ ಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.