ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ರಿಂದ ಇಂಗ್ಲೆಂಡ್‌ನಲ್ಲಿ ಟೂರ್ನಿವಿಶ್ವ ಬಿಲಿಯರ್ಡ್ಸ್‌ಗೆ ಪಂಕಜ್

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಪಂಕಜ್ ಅಡ್ವಾಣಿ ಅವರು ಅಂತರರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನ ಬದಲು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

ಇವೆರಡು ಟೂರ್ನಿಗಳು ಒಂದೇ ಅವಧಿಯಲ್ಲಿ ನಡೆಯಲಿರುವ ಕಾರಣ ಪಂಕಜ್ ಇಕ್ಕಟ್ಟಿಗೆ ಸಿಲುಕಿದ್ದರು. ಕೊನೆಗೆ ಸ್ನೂಕರ್ ಬದಲು    ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಡುವ ತೀರ್ಮಾನ ಕೈಗೊಂಡರು. ಇತ್ತೀಚೆಗಷ್ಟೇ ವೃತ್ತಿಪರ ಸ್ನೂಕರ್ ಆಟಗಾರರಾಗಿ ಬದಲಾಗಿದ್ದ ಪಂಕಜ್ ಅಕ್ಟೋಬರ್ 28ರಿಂದ ನವೆಂಬರ್ 4ರ ವರೆಗೆ ಚೀನಾದ ಚೆಂಗ್ಡುವಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದರು.

ಅಂದಾಜು ಐದು ಕೋಟಿ ರೂ. ಬಹುಮಾನ ಮೊತ್ತದ ಈ ಟೂರ್ನಿ ವಿಶ್ವದ `ಅತ್ಯಂತ ಶ್ರೀಮಂತ ಸ್ನೂಕರ್ ಟೂರ್ನಿ~ ಎನಿಸಿದೆ. ಆದರೆ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಅಕ್ಟೋಬರ್ 18 ರಿಂದ 28ರ ವರೆಗೆ ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ನಡೆಯಲಿದೆ. ಈ ಕಾರಣ ಅವರು ಸ್ನೂಕರ್ ಬದಲು,   ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT