ಚಿಕ್ಕಮಗಳೂರು: ಕೆಫೆ ಕಾಫಿ ಡೇ ಮತ್ತು ಮೋಟಾರ್್ಸ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಷಿಪ್ನ ಅಂತಿಮ ಸುತ್ತಿನ ಹಾಗೂ ಕ್ಯಾಂಡಿಡೇಟ್ ಏಷಿಯ ಕಪ್ ರ್ಯಾಲಿ ಇದೇ 19ರಿಂದ 21ರವರೆಗೆ ಕಾಫಿ ಕಣಿವೆ ಎನಿಸಿರುವ ಜಿಲ್ಲೆಯ ಮಲೆನಾಡಿನ ಕಾಫಿ ತೋಟಗಳಲ್ಲಿ ನಡೆಯಲಿದೆ.

ಇದು ಐಎನ್ಆರ್ಸಿಯ 5ನೇ ಮತ್ತು ಕೊನೇ ಸುತ್ತಿನ ರ್ಯಾಲಿ ಆಗಿದ್ದು, ಸುಮಾರು 281 ಕಿ.ಮೀ. ಒಳ ಗೊಂಡಿದೆ. ವಿಶೇಷ ಹಂತ 115.50 ಕಿ.ಮೀ. ಇರಲಿದೆ. ಕಾಫಿ ತೋಟಗಳಲ್ಲಿ ನಡೆಯಲಿರುವ ಈ ಬಾರಿಯ ರ್ಯಾಲಿಯಲ್ಲಿ ಸ್ಪರ್ಧಿಗಳು 3 ಹಂತದಲ್ಲಿ ವಾಹನ ಚಾಲನೆ ಮಾಡಬೇಕಾಗುತ್ತದೆ ಎಂದು ಮೋಟಾರ್್ಸ ಸ್ಪೋರ್ಟ್ಸ್ ಕ್ಲಬ್ನ ಉಪಾಧ್ಯಕ್ಷ ಫಾರೂಕ್ ಅಹಮದ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಏಷಿಯಾ ಚಾಂಪಿಯನ್ ಚಾಲಕ ದೆಹಲಿಯ ಗೌರವ್ ಗಿಲ್–ಮೂಸಾ ಷರೀಫ್ ಜೋಡಿ, ಮಲೇಷಿಯಾದ ಕರಣ್ಜಿತ್ ಸಿಂಗ್– ಜಗದೇವ್ ಸಿಂಗ್, ದೆಹಲಿಯ ಸಮೀರ್ ಥಾಪರ್–ಗುರಂದರ್ ಸಿಂಗ್ ಮಾನ್, ಮಂಗಳೂರಿನ ಮಸ್ಕರೇನಸ್–ಷಣ್ಮುಗ, ಪುಣೆಯ ಸಿರಿಶ್ ಚಂದ್ರನ್–ನಿಖಿಲ್ ಪೈ, ವಿಕ್ರಮ್ ಮಥಾಯಿಸ್ –ವಿವೇಕ್ ಸೇರಿದಂತೆ 40 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಡೀಸೆಲ್ ಪೋಲೋ ಕಾರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು.

ಪ್ರೇಕ್ಷಕರಿಗಾಗಿ ನಡೆಯಲಿರುವ ಸೂಪರ್ ಸ್ಪೆಷಲ್ ಸ್ಟೇಜ್ ರ್ಯಾಲಿ ಅಂಬರ್ ವ್ಯಾಲಿ ಶಾಲೆಯ ಕ್ಯಾಂಪಸ್ ನಲ್ಲಿ 19ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮೋಟಾರ್್ಸ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಜಯಂತ್ ಪೈ, ಮಾಚಯ್ಯ, ಅಭಿಜಿತ್ ಪೈ, ಸಮೃದ್ಧ್ ಪೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.