ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.90 ಕೋಟಿ ಮೌಲ್ಯದ ಆಭರಣ ವಶ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೂರ್ವ ವಿಭಾಗದ ಪೊಲೀಸರು 106 ಪ್ರಕರಣಗಳನ್ನು ಭೇದಿಸಿ 64 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.90 ಕೋಟಿ ರೂಪಾಯಿ ಮೌಲ್ಯದ ಆಭರಣ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಲಸೂರು ಪೊಲೀಸ್ ಠಾಣೆ ಸಮೀಪವೇ ಇರುವ ಪೂಜಾ ಚಿನ್ನಾಭರಣ ಅಂಗಡಿಗೆ ಕನ್ನ ಹಾಕಿ ನಾಲ್ಕು ಕೆ.ಜಿ. ಆಭರಣ ಮತ್ತು ಹದಿನೈದು ಕೆ.ಜಿ. ಬೆಳ್ಳಿ ವಸ್ತುಗಳನ್ನು ದೋಚಿದ್ದ ರಾಜಸ್ತಾನದ ಪಾರಸ್‌ರಾಮ್ (28) ಮತ್ತು ನಾಥೂರಾಮ್ (25) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಮೂರೂ ಕೆ.ಜಿ ನಾನೂರು ಗ್ರಾಂ ಆಭರಣ ಮತ್ತು ಹದಿನೈದು ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂಗಡಿ ಮಾಲೀಕ ಜಯಚಂದ್ ಅವರು ಈ ಬಗ್ಗೆ ದೂರು ನೀಡಿದ್ದರು. ಜಯಚಂದ್ ಅವರ ಸಂಬಂಧಿಯೊಬ್ಬರ ಚಿನ್ನಾಭರಣ ಅಂಗಡಿಯಲ್ಲಿ ಪಾರಸ್‌ರಾಮ್ ಕೆಲಸ ಮಾಡುತ್ತಿದ್ದ. ಆಗಾಗ್ಗೆ ಆತ ಜಯಚಂದ್ ಅವರ ಅಂಗಡಿಗೂ ಬಂದು ಹೋಗುತ್ತಿದ್ದ. ಆದ್ದರಿಂದ ಕಳವು ಮಾಡಲು ಸಂಚು ರೂಪಿಸಿದ ಆತ ನಾಥೂರಾಮ್ ಜತೆ ಸೇರಿ ಜೂನ್ 23ರಂದು ಕೃತ್ಯ ಎಸಗಿದ್ದ. ಇಬ್ಬರೂ ಆರೋಪಿಗಳು ರಾಜಸ್ತಾನಕ್ಕೆ ಓಡಿ ಹೋಗಿದ್ದರು. ನಾಥೂರಾಮ್ ಮೇಲೆ ಕಾಟನ್‌ಪೇಟೆ, ಜಗಜೀವನ್‌ರಾಂನಗರ ಪೊಲೀಸ್ ಠಾಣೆಗಳಲ್ಲಿ ದರೋಡೆ ಪ್ರಕರಣಗಳಿವೆ ಎಂದು ಅವರು ಮಾಹಿತಿ ನೀಡಿದರು.

ರಾಮಮೂರ್ತಿನಗರದ ಶಾಂತಿ ಲೇಔಟ್‌ನ ನಿವಾಸಿ ಭೂಪತಿ (28) ಎಂಬಾತನನ್ನು ಬಂಧಿಸಿರುವ ಕೆ.ಆರ್. ಪುರ ಪೊಲೀಸರು ಇಪ್ಪತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಆಭರಣ ವಶಪಡಿಸಿಕೊಂಡಿದ್ದಾರೆ. ಈತನ ಬಂಧನದಿಂದ ಒಟ್ಟು ಹದಿಮೂರು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದರು.

ಡಿಸಿಪಿ ಚಂದ್ರಶೇಖರ್, ಎಸಿಪಿಗಳಾದ ಡಾ. ಡಿ.ನಾರಾಯಣಸ್ವಾಮಿ, ನರಸಿಂಹಯ್ಯ, ಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ವಿ.ಕೆ. ವಾಸುದೇವ, ಎಚ್.ಕೆ. ಮಹಾನಂದ, ಡಿ. ಕುಮಾರ್, ಡಿ. ಅಶೋಕ್, ಕಿಶೋರ್ ಭರಣಿ, ಕೆ.ಎಸ್. ನಾಗರಾಜ್, ಎನ್. ಮಹೇಶ್, ಜಿ. ಪ್ರಭಾಕರ್, ಪ್ರಮೋದ್ ಕುಮಾರ್, ಸುದರ್ಶನ್, ವೆಂಕಟೇಶ್ ನಾಯ್ಡು ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ವೇಶ್ಯಾವಾಟಿಕೆ: ಬಂಧನ
ಚಲನಚಿತ್ರಗಳಲ್ಲಿ ಅವಕಾಶ ಕೊಡಿವುದಾಗಿ ಹೇಳಿ ಹುಡುಗಿಯರನ್ನು ಕರೆದುಕೊಂಡು ಅಕ್ರಮ ಬಂಧನದಲ್ಲಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ಮೂರನೇ ಹಂತದ ಶಶಿಕಲಾ (40) ಮತ್ತು ಮಲ್ಲೇಶ್ವರ ಹದಿನಾಲ್ಕನೇ ತಿರುವಿನ ನಿವಾಸಿ ರೂಬಿ (55) ಬಂಧಿತರು. ಅವರಿಂದ ಹನ್ನೆರಡು ಸಾವಿರ ರೂಪಾಯಿ, ಎರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT