ಗುರುವಾರ , ಏಪ್ರಿಲ್ 15, 2021
28 °C

1998... ಹಲವು ವಿಶೇಷಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ಸತ್ಯ ಕತೆಗಳನ್ನು ನೈಜವಾಗಿಯೇ ಚಿತ್ರೀಕರಣ ಮಾಡಿ ನಿರ್ದೇಶಕ ತನ್ನ ಕೌಶಲ್ಯವನ್ನು ಹೊರ ಹಾಕುತ್ತಾನೆ. ಈಗ ಅಂತಹ ನಿಜ ಜೀವನದಲ್ಲಿ ನಡೆದ ಕಥೆಯನ್ನು ಕೈಗೆತ್ತಿಕೊಳ್ಳಲು ನಿರ್ದೇಶಕ ರಾಘವ ಲೋಕಿ ಸಿದ್ಧವಾಗುತ್ತಿದ್ದಾರೆ.

 

ಯೋಗೀಶ್ ಕಥಾನಾಯಕ. ವಿ.ಮಂಜುನಾಥ್ ಹಾಗೂ ರಾಘವ್ ಲೋಕಿ ಸ್ನೇಹಿತರು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.1998ರಲ್ಲಿ ನಡೆದ ಘಟನೆ ದೇಶದಲ್ಲಿ ಸುದ್ದಿಯಾಗಿ ಹಲವಾರು ಚರ್ಚೆಗೆ ಗುರಿಯಾಗಿದ್ದು ಚಿತ್ರಕ್ಕೆ ಬಹಳ ಬೇಕಾದ ವಸ್ತು ಎಂಬುದು ಲೋಕಿ ಅವರ ಅಭಿಪ್ರಾಯ. ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದ ಶೇ 80ರಷ್ಟು ಭಾಗವನ್ನು ರಾತ್ರಿ ಹೊತ್ತಿನಲ್ಲೇ ಚಿತ್ರೀಕರಿಸುತ್ತಿರುವುದು ವಿಶೇಷ.

 

ಗುರುಕಿರಣ್ ಅವರ ಸಂಗೀತ, ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣ ಹೊಂದಿರುವ ಈ ಚಿತ್ರ ನಟ ಯೋಗೀಶರ `ಯಾರೇ ಕೂಗಾಡಲಿ~ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ನಂತರ ಪ್ರಾರಂಭವಾಗಲಿದೆ. ಮೈಸೂರಿನ ರಂಗಭೂಮಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.