ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2003ರಲ್ಲಿನ ತಂಡಕ್ಕಿಂತ ಉತ್ತಮ

Last Updated 18 ಫೆಬ್ರುವರಿ 2011, 17:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): 2003 ರಲ್ಲಿ ಇದ್ದಂಥ ತಂಡವೇ ಈಗಲೂ ಇದೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿರುವ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ‘2003ರಲ್ಲಿನ ತಂಡಕ್ಕಿಂತ ಉತ್ತಮ’ವಾಗಿದೆ ಎಂದಿದ್ದಾರೆ.

ಸೌರವ್ ಗಂಗೂಲಿ ನಾಯಕತ್ವದಲ್ಲಿ ವಿಶ್ವಕಪ್‌ನಲ್ಲಿ ಆಡಿದ್ದ ತಂಡಕ್ಕೆ ಹೋಲಿಸಿದಲ್ಲಿ ಮಹೇಂದ್ರ ಸಿಂಗ್ ದೋನಿ ನೇತೃತ್ವದಲ್ಲಿ ಈ ಬಾರಿ ಹೋರಾಟಕ್ಕೆ ಸಜ್ಜಾಗಿರುವ ಭಾರ ತದ ಕ್ರಿಕೆಟ್ ಪಡೆಯ ಬಲ ಹೆಚ್ಚು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಕುಂಬ್ಳೆ ಸ್ಪಷ್ಟವಾಗಿ ನುಡಿದಿದ್ದಾರೆ.

2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅನಿಲ್ ಅವರು ಆಸ್ಟ್ರೇಲಿಯಾ ಹಾಗೂ ಪಾಕಿ ಸ್ತಾನ ವಿರುದ್ಧದ ಗುಂಪು ಹಂತದ ಲೀಗ್ ಪಂದ್ಯಗಳಲ್ಲಿ ಮಾತ್ರ ಆಡಿ ದ್ದರು. ಆ ಟೂರ್ನಿಯಲ್ಲಿ ಭಾರತವು ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ನಿರಾಸೆ ಹೊಂದಿತ್ತು.

‘ದೋನಿ ನಾಯಕತ್ವದಲ್ಲಿ ರಚಿಸ ಲಾಗಿರುವ ತಂಡವು ಎಲ್ಲ ಹಂತದಲ್ಲಿ ಸಮತೋಲನ ಹೊಂದಿದೆ. ಪಂದ್ಯ ಗಳ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಹೊಂದಾಣಿಕೆ ಮಾಡಿಕೊಳ್ಳಲು ಅಗತ್ಯವಿರುವ ಪರಿಣತ ಆಟಗಾರರೂ ಇದ್ದಾರೆ’ ಎಂದು ಖಾಸಗಿ ಚಾನಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಕಳೆದ ಒಂದೂವರೆ ವರ್ಷದಲ್ಲಿ ಈ ತಂಡವು ನೀಡಿರುವ ಪ್ರದರ್ಶನ ವನ್ನು ವಿಶ್ಲೇಷಣೆ ಮಾಡಿದಾಗ ಇದು ಎಷ್ಟೊಂದು ಪ್ರಭಾವಿಯಾದ ತಂಡ ವೆನ್ನುವುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ಸ್ವದೇಶದಲ್ಲಿ ಹಾಗೂ ಏಷ್ಯಾದ ದೇಶಗಳ ಅಂಗಳಗಳಲ್ಲಿ ಆಡುವಾಗಲೂ ಉನ್ನತ ಮಟ್ಟದ ಪ್ರದರ್ಶನ ನೀಡಿದ ಪಡೆಯಿದು.
ಏಕದಿನ ಪಂದ್ಯಗಳಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆಯುವಂಥ ಸತ್ವ ವನ್ನೂ ಹೊಂದಿದೆ’ ಎಂದು ಅವರ ಹೇಳಿದ್ದಾರೆ.

‘ಜಹೀರ್ ಖಾನ್ ಹಾಗೂ ಆಶಿಶ್ ನೆಹ್ರಾ ಅವರೂ 2003ರಲ್ಲಿ ಆಡಿ ದ್ದರು. ಆದರೆ ಆಗ ಅವರು ಅತಿಯಾದ ಉತ್ಸಾಹ ಹಾಗೂ ಆತುರದಲ್ಲಿ ಬೌಲಿಂಗ್ ಮಾಡುವಂಥ ಯುವಕರಾಗಿದ್ದರು. ಈಗ ಅನುಭವದಿಂದ ಪಕ್ವಗೊಂಡಿದ್ದಾರೆ. ಪರಿಸ್ಥಿತಿಯನ್ನು ಅರಿತು ವೇಗದ ಮೇಲೆ ಉತ್ತಮ ಹಿಡಿತ ಸಾಧಿಸಿ ದಾಳಿ ನಡೆಸಬಲ್ಲರು.
ಮುನಾಫ್ ಪಟೇಲ್ ಕೂಡ ಪಂದ್ಯ ಗೆಲ್ಲಿಸಿಕೊಡುವಂಥ ಬೌಲರ್ ಆಗಿ ರೂಪ ಗೊಂಡಿದ್ದಾರೆ. ಒಂದು ತಂಡವಾಗಿ ಆಡುವಲ್ಲಿ ಯಶಸ್ವಿಯಾಗಿದೆ ದೋನಿ ಬಳಗ. ಅದಕ್ಕೆ ಒಂದೂವರೆ ವರ್ಷದಲ್ಲಿನ ಪ್ರದರ್ಶನವೇ ಸಾಕ್ಷಿಯಾಗಿದೆ’ ಎಂದು ವಿವರಿಸಿದ್ದಾರೆ ಕುಂಬ್ಳೆ.

ಒಂದು ವಿಶ್ವಕಪ್‌ನಲ್ಲಿ ಆಡಿದ ಹದಿನೈದು ಆಟಗಾರರು ಮತ್ತೊಂದು ವಿಶ್ವಕಪ್‌ನಲ್ಲಿಯೂ ಆಡುತ್ತಾರೆಂದು ಹೇಳಲು ಸಾಧ್ಯವೇ ಇಲ್ಲ. ಆದ್ದರಿಂದ ತಂಡದಲ್ಲಿರುವ ಪ್ರತಿಯೊಬ್ಬ ಕ್ರಿಕೆಟಿಗನೂ ತನಗೆ ಸಿಕ್ಕಿರುವ ಏಕಮಾತ್ರ ಅವಕಾಶ ಇದೆಂದು ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನ ಮಾಡಬೇಕು ಎಂದು ಅನಿಲ್ ಭಾರತ ತಂಡದ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT