ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2012ಕ್ಕೆ 2500 ಕೋಟಿ ವಹಿವಾಟು

Last Updated 20 ಜನವರಿ 2011, 9:55 IST
ಅಕ್ಷರ ಗಾತ್ರ

ಮಡಿಕೇರಿ: ದೇಶದ ಅತಿದೊಡ್ಡ ನೇರ ಮಾರಾಟ ಕಂಪೆನಿಗಳಲ್ಲೊಂದಾಗ ‘ಆಮ್ ವೇ ಇಂಡಿಯಾ’ 2010ರಲ್ಲಿ ಕರ್ನಾಟಕದಲ್ಲಿ ಶೇ 33ರಷ್ಟು ಬೆಳವಣಿಗೆ ಸಾಧಿಸಿದೆ. ಭಾರತದ ಶೇ 25ರ ಬೆಳವಣಿಗೆಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಂಪೆನಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಕಂಪೆನಿಯ ಪ್ರಾದೇಶಿಕ ವ್ಯವಸ್ಥಾಪಕ ಸುಜೊಯ್ ಬೋಸ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರ ವೇಳೆಗೆ ಕಂಪೆನಿಯು 2500 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಗುರಿ ಹೊಂದಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಕಂಪೆನಿ ಆಕರ್ಷಕ ಲಾಭ ಗಳಿಸಿದೆ ಎಂದು ಹೇಳಿದರು.

2008-09ರಲ್ಲಿ 1128 ಕೋಟಿ ರೂಪಾಯಿಗಳಿಂದ 1407 ಕೋಟಿ ರೂಪಾಯಿ ಪ್ರಗತಿ ಸಾಧಿಸಲಾಗಿದೆ. ಇದುವರೆಗೆ ಕಂಪೆನಿಯು ಭಾರತದಲ್ಲಿ 151 ಕೋಟಿ ರೂಪಾಯಿಗಳಿಂತಲೂ ಹೆಚ್ಚಿನ ಹಣ ಹೂಡಿಕೆ ಮಾಡಿದೆ. ದೇಶದಲ್ಲಿ 130 ಕಚೇರಿ ಹಾಗೂ 55 ಸಿಟಿ ವೇರ್‌ಹೌಸ್‌ಗಳನ್ನು ಹೊಂದಿದೆ. ಹೋಮ್ ಡೆಲಿವರ್ ಸಂಪರ್ಕ ಜಾಲದ ಮೂಲಕ 4000ಕ್ಕೂ ಅಧಿಕ ನಗರಗಳಲ್ಲಿ ವಹಿವಾಟು ನಡೆಸುತ್ತಿದೆ ಎಂದು ವಿವರಿಸಿದರು.

ಭಾರತದಲ್ಲಿ ಮಾರಾಟವಾಗುವ ಶೇ 97ರಷ್ಟು ವಸ್ತುಗಳನ್ನು ಕಂಪೆನಿಯು ಮೂರನೇ ಗುತ್ತಿಗೆ ಉತ್ಪಾದಕರ ಮೂಲಕ ಉತ್ಪಾದಿಸುತ್ತಿದೆ. ಆಮ್‌ವೇ ಭಾರತದಲ್ಲಿ ಉತ್ಪಾದನಾ ಘಟಕ ಹೊಂದಿಲ್ಲ. ಪ್ರಸಕ್ತ 115 ವಸ್ತುಗಳನ್ನು ವೈಯಕ್ತಿಕ ಆರೈಕೆ, ಗೃಹ ಕಾಳಜಿ, ನೂಟ್ರಿಷನ್ ಅಂಡ್ ವೆಲ್‌ನೆಸ್, ಕಾಸ್ಮೆಟಿಕ್ಸ್ ಮತ್ತು ಗಿಫ್ಟ್ ಕ್ಯಾಟಲಾಗ್‌ನಲ್ಲಿ ಒದಗಿಸುತ್ತಿದೆ. ಇತ್ತೀಚೆಗೆ ಹಿಮಾಚಲ ಪ್ರದೇಶದ ಬಡ್ಡಿಯಲ್ಲಿ 55 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಮೊದಲ ಹಂತದಲ್ಲಿ ಈ ಘಟಕಕ್ಕೆ 50 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದ್ದು, ಇದರಿಂದ ಒಟ್ಟು 105 ಕೋಟಿ ರೂಪಾಯಿ ಬಂಡವಾಳ ಹೂಡಿದಂತಾಗಿದೆ ಎಂದರು.

ಕೊಡಗಿನಲ್ಲಿ 750 ವಿತರಕರನ್ನು ಹೊಂದಿರುವ ಆಮ್‌ವೇ, ಪ್ರತಿ ತಿಂಗಳು 20 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಕಂಪೆನಿ ಉತ್ತಮ ವಹಿವಾಟು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಒತ್ತು ನೀಡಲಾಗುವುದು ಎಂದರು.ಕಂಪೆನಿಯ ದಕ್ಷಿಣ ಭಾರತದ ವ್ಯವಸ್ಥಾಪಕ ರಜತ್ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT