ಸೋಮವಾರ, ಮೇ 10, 2021
21 °C

2050ರಲ್ಲಿ ಭಾರತ ಜಗತ್ತಿನ ದೊಡ್ಡ ಆರ್ಥಿಕ ಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2050ರ ವೇಳೆಗೆ  ಭಾರತವು, ಚೀನಾ  ಹಿಂದಿಕ್ಕಿ  ಪ್ರಪಂಚದಲ್ಲಿಯೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ ನೈಟ್ ಫ್ರಾಂಕ್ ಅಂಡ್ ಸಿಟಿ ಪ್ರೈವೇಟ್ ಬ್ಯಾಂಕ್ ನಡೆಸಿದ ಸಮೀಕ್ಷೆ ತಿಳಿಸಿದೆ.ಮುಂದಿನ 40 ವರ್ಷಗಳಲ್ಲಿ ದೇಶದ ಆರ್ಥಿಕತೆಯು ರೂ43 ಲಕ್ಷ ಕೋಟಿಗಳಿಗೆ ಏರಿಕೆಯಾಗಲಿದೆ. ಆ ವೇಳೆಗೆ ಚೀನಾದ ಆರ್ಥಿಕತೆಯುರೂ40 ಲಕ್ಷ    ಕೋಟಿಳಷ್ಟು ಇರಲಿದೆ ಎಂದು ಈ ಅಧ್ಯಯನ ಹೇಳಿದೆ. 

ಸದ್ಯಕ್ಕೆ ಅಮೆರಿಕವು ಪ್ರಪಂಚದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಆದರೆ, ಚೀನಾ ಅಮೆರಿಕವನ್ನು 2020ರ ವೇಳೆಗೆ ಹಿಂದಿಕ್ಕಲಿದೆ ಎಂದೂ ಈ ಸಮೀಕ್ಷೆ ತಿಳಿಸಿದೆ. ಭಾರತ, ಚೀನಾ, ಅಮೆರಿಕವನ್ನು ಹೊರತುಪಡಿಸಿದರೆ 2050ರ ಹೊತ್ತಿಗೆ 10 ಅಗ್ರ ಆರ್ಥಿಕ ಶಕ್ತಿಗಳ ಸಾಲಿನಲ್ಲಿ ಇಂಡೋನೇಷ್ಯಾ, ಬ್ರೆಜಿಲ್, ನೈಜೀರಿಯಾ, ರಷ್ಯಾ, ಮೆಕ್ಸಿಕೊ, ಜಪಾನ್ ಮತ್ತು ಈಜಿಪ್ಟ್ ಕೂಡ ಇರಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.