ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರಿಂದ ಅಂತರರಾಷ್ಟ್ರೀಯ ಚಿತ್ರೋತ್ಸವ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: `ಅಂಟೊನಿಯೋನಿ, ಅಕಿರಾ ಕುರೋಸಾವಾ, ಹೆನ್ರಿ ಕ್ಲೌಝೋಟ್‌ರವರ ಚಿತ್ರಗಳು. ಸಮ ಕಾಲೀನ ಚಿತ್ರ ನಿರ್ದೇಶಕರಾದ ಅಕಿ ಕೌರಿಸ್ಮಕಿ, ಮೈಕೇಲ್ ಹೆನ್ನೆಕೆ, ಅಬ್ಬಾಸ್ ಕಿರಾಸ್ಟೊಮಿ, ಲಾರ್ಸ್‌ ವನ್ ಟ್ರೈಯರ್, ಕಿಮ್ ಕಿ ಡಕ್, ವೊಲ್ಕರ್ ಶ್ಲಾಂಡಾರ್ಫ್ ಮತ್ತಿತರ ಚಲನ ಚಿತ್ರಗಳು ಪ್ರದರ್ಶನಗೊಳ್ಳುವುದು ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಪ್ರಮುಖ ಆಕರ್ಷಣೆ ಯಾಗಿದೆ' ಎಂದು ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕುರಿತು ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, `ಚಲನಚಿತ್ರೋತ್ಸವವು ಡಿ.20 ರಿಂದ 27 ರವರೆಗೆ ನಡೆಯಲಿದೆ. ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯ ಲಿರುವ ಉದ್ಘಾಟನಾ ಕಾರ್ಯಕ್ರಮ ವನ್ನು  ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಉದ್ಘಾಟಿಸಲಿದ್ದಾರೆ. ಜಪಾನಿ ನಿರ್ದೇಶಕ ಮಸಹಿರೊ ಕೊಬ್ಯಾಷಿ ಅತಿಥಿಯಾಗಿ ಆಗಮಿಸಲಿದ್ದಾರೆ. ಅವರ ಹೊಸ ಚಿತ್ರ `ಜಪಾನ್ಸ್ ಟ್ರಾಜೆಡಿ' ಉತ್ಸವದ ಏಷ್ಯಾ ವಿಭಾಗದಲ್ಲಿ ಪ್ರದರ್ಶಿತವಾಗಲಿದೆ' ಎಂದರು.

`ಭಾರತೀಯ ಚಲನಚಿತ್ರ ರಂಗದ ನೂರು ವರ್ಷಗಳ ಸಂಭ್ರಮಾಚರಣೆಯ ಕಾರ್ಯಕ್ರಮವು ಡಿ.21 ರಂದು ವಾರ್ತಾಭವನದಲ್ಲಿ ನಡೆಯಲಿದೆ. ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸ ಲಿದ್ದಾರೆ' ಎಂದರು.

`ಕಾನ್ಸ್, ವೆನಿಸ್, ಬರ್ಲಿನ್, ಕರ್ಲೊವಿ, ವೇರಿ ಮತ್ತು ಇತರ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳೂ ಪ್ರದರ್ಶನ ಗೊಳ್ಳಲಿವೆ. ಭಾರತೀಯ ಸ್ಪರ್ಧೆಯಲ್ಲಿ ಎಂಟು ಭಾರತೀಯ ಭಾಷೆಗಳ ಹನ್ನೊಂದು ಸಮಕಾಲೀನ ಚಲನಚಿತ್ರ ಗಳು ಭಾಗವಹಿಸಲಿರುವುದು ಉತ್ಸವದ ವಿಶೇಷ ಆಕರ್ಷಣೆಯಾಗಿದೆ.  ಜರ್ಮ ನಿಯ ಚಲನಚಿತ್ರ ಸಂಕಲನಕಾರ ಆಂಡ್ರ್ಯೂ ಬರ್ಡ್ ಅವರಿಂದ `ದಿ ಬಿಗ್ಗರ್ ಪಿಕ್ಚರ್ ಸ್ಟ್ರಕ್ಚರಿಂಗ್ ರಿಯಾಲಿಟಿ ಇನ್ ಫೀಚರ್ ಫಿಲ್ಮ್ ಎಡಿಟಿಂಗ್' ಎಂಬ ಮಾಸ್ಟರ್ ಕ್ಲಾಸ್ ಕೂಡ ನಡೆಯಲಿದೆ' ಎಂದರು.

`ಉತ್ಸವದ ಸಮಾರೋಪ ಸಮಾ ರಂಭವು ಡಿ.27 ರಂದು ನಡೆಯಲಿದೆ. ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಪ್ರಶಸ್ತಿ ಪುರಸ್ಕೃತ ಚಿತ್ರಗಳಿಗೆ ಪ್ರಶಸ್ತಿ ನೀಡಲಿದ್ದಾರೆ. ಸೆಲ್ಟನ್ ಮೆಲ್ಲೊ ನಿರ್ದೇಶನದ ಬ್ರೆಜಿಲ್ ಚಿತ್ರ `ದಿ ಕ್ಲೌನ್' ನೊಂದಿಗೆ ಚಲನಚಿತ್ರೋತ್ಸವವು ಮುಕ್ತಾಯಗೊಳ್ಳಲಿದೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT