ಶುಕ್ರವಾರ, ಜೂನ್ 18, 2021
28 °C

21ರಂದು ಕೃಷಿ ಯುಗಾದಿ

ಪ್ರಜಾವಾಣಿ ವಾರ್ತೆ: Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕೃಷಿ ವಿಶ್ವವಿದ್ಯಾಲಯವು ಇದೇ 21ರ ಬುಧವಾರ  ಬೆಂಗಳೂರು ಉತ್ತರ ಜಿಲ್ಲೆಯ ಜಾಲಾ ಹೋಬಳಿ ಬಾಗಲೂರು ಗ್ರಾಮದಲ್ಲಿ ರೈತ ಮತ್ತು ರೈತ ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮ `ಕೃಷಿ ಯುಗಾದಿ~ ಮೇಳ ಮತ್ತು ಕೃಷಿ ವಸ್ತುಪ್ರದರ್ಶನ ಹಮ್ಮಿಕೊಂಡಿದೆ.ದಕ್ಷಿಣ ಕರ್ನಾಟಕದ 17 ಜಿಲ್ಲೆಗಳ ಆಯ್ದ ಗ್ರಾಮಗಳಲ್ಲಿ ಸಮಗೃ ಕೃಷಿ ಪದ್ದತಿಗಳ ಮೂಲಕ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ರೈತರ ಅಭಿವೃದ್ಧಿಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಮೇಳದಲ್ಲಿ ಅರಣ್ಯ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಜಲಾನಯನ ಅಭಿವೃದ್ಧಿ , ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೆಂಗು ಮಂಡಳಿ, ಹೆಸರಘಟ್ಟದ ತೋಟಗಾರಿಕಾ ಸಂಶೋಧನ ಕೇಂದ್ರ, ಎಂ.ಪಿ.ಸಿ.ಎಸ್, ಸ್ಥಳೀಯ ಗ್ರಾಮ ಪಂಚಾಯತಿಗಳು, ರಾಷ್ಟ್ರೀಕೃತ ಬ್ಯಾಂಕಗಳು ಮತ್ತು ಖಾಸಗಿ ಸಂಸ್ಥೆಗಳ ಕೃಷಿ ತಜ್ಞರಿಂದ ಮಾಹಿತಿ ತಿಳಿಯಬಹುದಾಗಿದೆ.ಮೇಳದಲ್ಲಿ ಸುಮಾರು ಹತ್ತು ಸಾವಿರ ಜನ ವಸ್ತು ಪ್ರರ್ದಶನವನ್ನು ವೀಕ್ಷಿಸಲಿದ್ದು, ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು, ಲೋಕಸಭಾ ಮತ್ತು ವಿಧಾನಸಭಾ ಸದಸ್ಯರು, ಕುಲಪತಿಗಳು, ವಿಜ್ಞಾನಿಗಳು ಮತ್ತು ಅಧಿಕಾರಿಗಳು ಭಾಗವಹಿಸುವರು. ಮೇಳದಲ್ಲಿ ಬೆಳಿಗ್ಗೆ  8 ಗಂಟೆಗೆ ಪಶುಚಿಕಿತ್ಸಾ ಶಿಬಿರ, ಬೆಳಿಗ್ಗೆ 10 ಗಂಟೆಗೆ ರೈತರೊಡನೆ ಸಂವಾದ, ಕೃಷಿ ವಸ್ತು ಪ್ರದರ್ಶನ, ಬೆಳಿಗ್ಗೆ 11 ಗಂಟೆಗೆ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ  ಮಧ್ಯಾಹ್ನ 2 ಗಂಟೆಗೆ ರೈತರ ಸಮಾವೇಶ ಎಸ್.ಸಿ ಮತ್ತು ಎಸ್.ಟಿ ರೈತ ಫಲಾನುಭವಿಗಳಿಗೆ ಪರಿಕರ ವಿತರಣೆ ವಿವಿಧ ವಿಷಯಗಳಲ್ಲಿ ತರಬೇತಿ,  ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿ ಸಂಸ್ಥೆಗಳಿಗೆ ಮಳಿಗೆ ತೆರೆಯಲು ಅವಕಾಶವನ್ನು ಕಲ್ಪಿಸಲಾಗುವುದು. ಆಸಕ್ತ ರೈತರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೇಳದ ಪ್ರಯೋಜನ ಪಡೆದುಕೊಳ್ಳಬಹುದು.ಸಮ್ಮೇಳನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾ.ಕೆ.ಜಗದೀಶ್ವರ್ 98449 98799 ಅಥವಾ ಡಾ.ಕೆ.ನಾರಾಯಣ ಗೌಡ 98440 55836 ಸಂಪರ್ಕಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.