ಭಾನುವಾರ, ಆಗಸ್ಟ್ 9, 2020
21 °C

21ರಂದು ಚಾಮರಾಜೇಶ್ವರಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

21ರಂದು ಚಾಮರಾಜೇಶ್ವರಸ್ವಾಮಿ ರಥೋತ್ಸವ

ಚಾಮರಾಜನಗರ: ನಗರದ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ ಜುಲೈ 21ರಂದು ವಿಜೃಂಭಣೆಯಿಂದ ನಡೆಯಲಿದೆ.

ಅಂದು ಪೂರ್ವಾಷಾಢ ನಕ್ಷತ್ರದಲ್ಲಿ ಪ್ರಾತಃಕಾಲ 10.55ರಿಂದ 11.45ರ ಕನ್ಯಾ ಲಗ್ನದಲ್ಲಿ ಶ್ರೀ ಮನ್ನಹಾರಥಾರೋಹಣ ಅನಂತರ ಹಂಸಾರೋಹಣಾನಂತರ ನಟೇಶೋತ್ಸವ ನಡೆಯಲಿದೆ.ರಥೋತ್ಸವದ ಅಂಗವಾಗಿ ಜುಲೈ 14ರಿಂದ 25ರವರೆಗೆ ದೇವಾಲಯದಲ್ಲಿ ವಿಶೇಷ ಪೂಜಾ, ಸೇವಾ ಉತ್ಸವಾದಿ ಕೈಂಕರ್ಯ ನಡೆಯಲಿದೆ.ಜುಲೈ 14ರಂದು ಅಂಕುರಾರ್ಪಣ ಪೂರ್ವಕ ವೃಷಭಾದಿವಾಸ, ಜುಲೈ 15ರಂದು ಮಧ್ಯಾಹ್ನ 12ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಧ್ವಜಾರೋಹಣಪೂರ್ವಕ ಭೇರಿ ತಾಡನಾ ನಂತರ ಶಿಬಿಕಾರೋಹಣೋತ್ಸವ, ಜುಲೈ 16ರಂದು ಚಂದ್ರ ಮಂಡಲಾರೋಹಣೋತ್ಸವ, ಜುಲೈ 17ರಂದು ಅನಂತ ಪೀಠಾರೋಹಣೋತ್ಸವ, ಜುಲೈ 18ರಂದು ಪುಷ್ಪ ಮಂಟಪಾರೋಹಣೋತ್ಸವ, ಜುಲೈ 19ರಂದು ವೃಷಭಾರೋಹಣೋತ್ಸವ, ಜುಲೈ 20ರಂದು ವಸಂತೋತ್ಸವ ಪೂರ್ವಕ ನಡೆಯಲಿದೆ.ಜುಲೈ 22ರಂದು ಮಗಯಾತ್ರಾ ಪೂರ್ವಕ ಅಶ್ವರೋಹಣಾನಂತರ ಮಹಾಭೂತಾರೋಹಣ, ಜುಲೈ 23ರಂದು ಹಗಲು ಚೂಣೋತ್ಸವ ಪೂರ್ವಕ ಅವಭತ ತೀರ್ಥಸ್ನಾನ, ರಾತ್ರಿ ಧ್ವಜಾರೋಹಣ, ಮೌನಬಲಿ ನಡೆಯಲಿದೆ. ಜುಲೈ 24ರಂದು ಪುಷ್ಪಯಾಗ ಪೂರ್ವಕ ಕೈಲಾಸಯಾನಾ ರೋಹಣೋತ್ಸವ, 25ರಂದು ಮಹಾಸಂಪ್ರೋಕ್ಷಣ ಪೂರ್ವಕ ನಂದಿವಾಹನೋತ್ಸವ ನಡೆಯಲಿದೆ ಎಂದು ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.