ಬೆಂಗಳೂರು: ಹನ್ನೆರಡನೇ ಶತಮಾನದ ಸಮಾಜದಲ್ಲಿದ್ದ ಅಸಮಾನತೆಯನ್ನು ಪೋಷಿಸುವ ಚಿಂತನೆಯನ್ನು ನಿರಾಕರಿಸಿ, ಪರ್ಯಾಯ ಸಂಸ್ಕೃತಿ ನಿರ್ಮಿಸಬೇಕೆಂಬ ವಚನಕಾರರ ಮೂಲ ಆಶಯವನ್ನು ಬಿಂಬಿಸುವ ವಚನಗಳನ್ನು ಒಳಗೊಂಡ ‘ಪರ್ಯಾಯ ಸಂಸ್ಕೃತಿ ವಚನ ಸಂಪುಟ’ ಡಿ. 25 ರ ಬುಧವಾರ ಧಾರವಾಡದಲ್ಲಿ ಬಿಡುಗಡೆಯಾಗಲಿದೆ.

ಸಾಹಿತಿ ಡಾ. ಸಿ. ವೀರಣ್ಣ ಅವರು ಸಂಪಾದಕರಾಗಿ ರೂಪಿಸಿರುವ ಈ ಸಂಪುಟವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.

ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯ ಲಿರುವ ಸಮಾರಂಭದಲ್ಲಿ ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರು ಸಂಪುಟ ವನ್ನು ಬಿಡುಗಡೆ ಮಾಡುವರು.

ರಂಜಾನ್ ದರ್ಗಾ ಕೃತಿ ಕುರಿತು ಮಾತನಾಡಲಿದ್ದು ಗೊ.ರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು ಎಂದು ಶರಣ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.