25ರಿಂದ ಚಲನಚಿತ್ರೋತ್ಸವ-11

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

25ರಿಂದ ಚಲನಚಿತ್ರೋತ್ಸವ-11

Published:
Updated:

ಸಿದ್ದಾಪುರ:  ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ಚಲನಚಿತ್ರಗಳ ಪ್ರದರ್ಶನದ `ಚಲನಚಿತ್ರೋತ್ಸವ- 2011~ ಕಾರ್ಯಕ್ರಮವು ಸ್ಥಳೀಯ ಶಂಕರಮಠದಲ್ಲಿ ಇದೇ 25ರಿಂದ ಅ.1ರವರೆಗೆ ನಡೆಯಲಿದೆ ಎಂದು ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ತಿಳಿಸಿದರು.ಸೋಮವಾರ ಪಟ್ಟಣದ ಶಂಕರಮಠದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಂಕರಮಠದಲ್ಲಿ ನಡೆಯುವ ಶರನ್ನವರಾತ್ರಿಯ ಅಂಗವಾಗಿ ಈ ಚಲನಚಿತ್ರೋತ್ಸವ ನಡೆಯಲಿದೆ ಎಂದರು.ಪಟ್ಟಣದ ಶೃಂಗೇರಿ ಶಂಕರಮಠವು ನವರಾತ್ರಿಯ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ನಡೆಸುತ್ತಿದೆ. ಕಳೆದ ವರ್ಷ ರಾಜ್ಯಮಟ್ಟದ ಸಂಗೀತ ಮಹೋತ್ಸವ ಮತ್ತು ನಾಟಕೋತ್ಸವವನ್ನು ಆಯೋಜಿಸಲಾಗಿತ್ತು.ಈ ಸಾರಿ ಇದಕ್ಕಿಂತ ಭಿನ್ನವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದೇವೆ ಎಂದರು. ಈ ಚಲನಚಿತ್ರೋತ್ಸವದ ಸಂದರ್ಭದಲ್ಲಿ ನಿತ್ಯ ಸಂಜೆ 7ಕ್ಕೆ ಸಿನಿಮಾ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತವಾಗಿರುತ್ತದೆ. ಸೆ. 25ರಿಂದ ಕ್ರಮವಾಗಿ ದ್ವೀಪ. ತಾಯಿ ಸಾಹೇಬ, ಘಟಶ್ರಾದ್ಧ, ಗುಲಾಬಿ ಟಾಕೀಸ್, ನಾಯಿನೆರಳು, ಕನಸೊಂದು ಕುದುರೆಯೇರಿ,ತಬರನ ಕಥೆ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರದರ್ಶನಕ್ಕೆ ಮೊದಲು ಕಾಫಿಬೈಟ್ ತಂಡದವರಿಂದ ತುಣುಕು ಚಿತ್ರಗಳ ಪ್ರದರ್ಶನವಿದೆ ಎಂದರು. ಉದ್ಘಾಟನೆ, ಸಂವಾದ: ಇದೇ 25ರಂದು ಸಂಜೆ 6ಕ್ಕೆ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಯತಿಕುಮಾರ್ ಚಲನಚಿತ್ರೋತ್ಸವವನ್ನು ಉದ್ಘಾಟಿಸುವರು. ಸಾಹಿತಿ ನಾ.ಡಿಸೋಜ ಉಪಸ್ಥಿತರಿರುವರು. ಅ. 1ರಂದು ಸಂಜೆ 4ಕ್ಕೆ ಸಂವಾದ ಕಾರ್ಯಕ್ರಮವಿದ್ದು, ಗಿರೀಶ್ ಕಾಸರವಳ್ಳಿ, ಪ್ರೊ .ಎಂ.ಎನ್. ನಾಗರಾಜರಾವ್ ಮತ್ತು ಶ್ರೀಧರ ಬಳಗಾರ ಉಪಸ್ಥಿತರಿರುವರು.

 

ಗಿರೀಶ್ ಕಾಸರವಳ್ಳಿ ಅವರೊಡನೆ ಅವರ ಚಿತ್ರಗಳ ಕುರಿತು ಆಸಕ್ತರು ಈ ಸಂದರ್ಭದಲ್ಲಿ ಸಂವಾದ ನಡೆಸಬಹುದಾಗಿದೆ ಎಂದರು.ಶೃಂಗೇರಿ ಶಂಕರಮಠದ ಸಂಸ್ಕೃತಿ ಸಂಪದದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ, ತಾಲ್ಲೂಕಿನ ರಂಗ ಸೌಗಂಧ ಮತ್ತು ಒಡ್ಡೋಲಗ ಸಂಸ್ಥೆಗಳು ಸಹಕಾರ ನೀಡಲಿವೆ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry