ಭಾನುವಾರ, ಮೇ 16, 2021
22 °C

25ರಿಂದ ರಾಜ್ಯ ಮಟ್ಟದ ಹಲಸು ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಇದೇ 25 ಮತ್ತು 26ರಂದು ರಾಜ್ಯಮಟ್ಟದ ಹಲಸಿನ ಮೇಳವನ್ನು ಬ್ರಹ್ಮಾವರದ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಸಂಸದ ಜಯಪ್ರಕಾಶ್ ಹೆಗ್ಡೆ ಮೇಳಕ್ಕೆ ಚಾಲನೆ ನೀಡಲಿದ್ದು, ಶಾಸಕ ಪ್ರಮೋದ್ ಮಧ್ವರಾಜ್, ಜಿ.ಪಂ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಜಿಲ್ಲಾಧಿಕಾರಿ ಟಿ.ರೇಜು, ಜಿಲ್ಲಾಕೃಷಿಕ ಸಮಾಜದ ಅಧ್ಯಕ್ಷ  ಅಶೋಕ್ ಕುಮಾರ್ ಕೊಡ್ಗಿ, ತಂಬಾಕು ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ವಲಯ ಕೃಷಿ ಸಂಶೋಧನಾ ಕೇಂದ್ರದ ಡಾ.ಎಂ. ಹನುಮಂತಪ್ಪ, ಮುಖ್ಯ ಕಾರ್ಯಕ್ರಮ ನಿರ್ವಹ ಣಾಧಿಕಾರಿ ಪ್ರಭಾಕರ ಶರ್ಮಾ, ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ಉಪೇಂದ್ರ ನಾಯಕ್ ಉಪಸ್ಥಿತರಿರುವರು.ಹಲಸಿನ ಮೇಳದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಹಲಸಿನ ಬೆಳೆ ಭವಿಷ್ಯ ಮತ್ತು ಅವಕಾಶಗಳು, ಹಲಸಿನ ಬೇಸಾಯ ಕ್ರಮ, ನಿರ್ವಹಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಹಾಗೂ ಹಲಸಿನ ಹಣ್ಣಿನ ಮೌಲ್ಯವರ್ಧನೆ, ಖಾದ್ಯಗಳು ಮತ್ತು ಸಂಘ ರಚನೆ ವಿಷಯಗಳ ಬಗ್ಗೆ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿದೆ.ಮೇಳದಲ್ಲಿ ರಾಜ್ಯದಾದ್ಯಂತ ಇರುವ ಹಲಸು ಬೆಳೆಗಾರರು ಹಾಗೂ ಹಲಸಿನ ಮೌಲ್ಯವರ್ಧಿತ ಉತ್ವನ್ನಗಳ ಮಾರಾಟಗಾರರ ಮಳಿಗೆಗಳಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಹೆಚ್ಚು ಹಲಸಿನ ಉತ್ಪನ್ನಗಳು ಮತ್ತು  ಉತ್ತಮ ಹಣ್ಣುಗಳಿರುವ ಮಳಿಗೆಗಳನ್ನು ಆರಿಸಿ ಬಹುಮಾನ ವಿತರಿಸಲಾಗುವುದು.ಎರಡು ದಿನ ನಡೆಯುವ ಹಲಸಿನ ಮೇಳದಲ್ಲಿ ರಾಜ್ಯದಾದ್ಯಂತ ಇರುವ ಹಲಸು ಬೆಳೆಗಾರರು, ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟಗಾರರು ಹಾಗೂ ಇತರೆ ಜನರು ಭಾಗವಸಿ ರಾಜ್ಯ ಮಟ್ಟದ ಹಲಸು ಮೇಳದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕಾರ್ಯಕ್ರಮ ಸಂಯೋಜಕಿ ಡಾ.ಜಯಲಕ್ಷ್ಮೀ ಎನ್. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 0820-2563923, 9449866939 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.