ಮಂಗಳವಾರ, ಮಾರ್ಚ್ 2, 2021
29 °C

274 ಭೂ ಮಾಪಕರಿಗೆ ಬಡ್ತಿ, ಕೌನ್ಸೆಲಿಂಗ್‌ ಮೂಲಕ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

274 ಭೂ ಮಾಪಕರಿಗೆ ಬಡ್ತಿ, ಕೌನ್ಸೆಲಿಂಗ್‌ ಮೂಲಕ ವರ್ಗ

ಬೆಂಗಳೂರು: ಭೂಮಾಪನಾ ಇಲಾಖೆಯು ಹಿರಿತನದ ಆಧಾರದಲ್ಲಿ 274 ಭೂಮಾಪಕರಿಗೆ ಮೇಲ್ವಿಚಾರಕರ ಹುದ್ದೆಗೆ ಬಡ್ತಿ ನೀಡಿ, ಅವರು ಆಯ್ಕೆ ಮಾಡಿದ ಸ್ಥಳಕ್ಕೆ ವರ್ಗಾವಣೆ ಮಾಡಿದೆ.ಬೆಂಗಳೂರಿನಲ್ಲಿ ಶನಿವಾರ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲಾಯಿತು. ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಿದೆ. ವಿಧವೆಯವರು, ಅಂಗವಿಕಲರು, ದೀರ್ಘಾವಧಿ ಅನಾರೋಗ್ಯ ಹೊಂದಿರುವವರು, ಪತಿ –ಪತ್ನಿ ಪ್ರಕರಣಗಳಲ್ಲಿ ಅವರ ಅನುಕೂಲಕ್ಕೆ  ಅನುಗುಣವಾಗಿ ನಿಯೋಜನಾ ಸ್ಥಳ ಆಯ್ಕೆ ಮಾಡುವುದಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಬಡ್ತಿ ಸಿಕ್ಕಿರುವ 274 ಭೂಮಾಪಕರ ಪೈಕಿ 40 ಮಂದಿ ಹೈದರಾಬಾದ್‌ –ಕರ್ನಾಟಕ ಭಾಗದವರಾಗಿದ್ದಾರೆ.ಕೃತಜ್ಞತೆ: ಪಾರದರ್ಶಕವಾಗಿ ಒಂದೇ ದಿನದಲ್ಲಿ ಮುಂಬಡ್ತಿ, ವರ್ಗಾವಣೆ ಪ್ರಕ್ರಿಯೆ ನಡೆಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ  ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ್ಯ ನಿರ್ವಾಹಕರ ನೌಕರರ ಸಂಘ, ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ಇಲಾಖೆ ಆಯುಕ್ತ ಮನೀಶ್‌ ಮೌದ್ಗಿಲ್‌ ಅವರಿಗೆ ಕೃತಜ್ಞತೆ ಸಲ್ಲಿಸಿದೆ.ತಡೆಯುವ ಪ್ರಯತ್ನ?

ಭೂಮಾಪಕರಿಗೆ ಮುಂಬಡ್ತಿ  ನೀಡಿ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಕೊನೆಗಳಿಗೆಯಲ್ಲಿ ತಡೆಯಲು ಯತ್ನಿಸಿದ ಘಟನೆ ನಡೆದಿದೆ. ಶನಿವಾರ ಸಂಜೆ ಕೌನ್ಸೆಲಿಂಗ್‌ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆದೇಶದ ಪ್ರತಿಗೆ ಆಯುಕ್ತರ ಸಹಿ ಬೀಳುವುದಕ್ಕೂ ಮುನ್ನ ಕೆಲವರು ಸಚಿವರಿಗೆ ಹೇಳಿ ಅದನ್ನು ತಡೆಯುವ ಯತ್ನ ನಡೆಸಿದರು.

ಇದನ್ನು ಅರಿತ ನೌಕರರ ಸಂಘದ ಸದಸ್ಯರು, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್‌ ಅವರ ಮನೆಗೆ ತೆರಳಲು ಸಿದ್ಧತೆ ನಡೆಸುತ್ತಿರುವಾಗ, ಆದೇಶಕ್ಕೆ ಸಹಿ ಬಿತ್ತು ಎಂದು ತಿಳಿದು ಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.