ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

278 ಸಹಕಾರ ಸಂಘಗಳು ನಷ್ಟದಲ್ಲಿ

Last Updated 7 ಜನವರಿ 2012, 10:00 IST
ಅಕ್ಷರ ಗಾತ್ರ

ಕೊಪ್ಪಳ: ಸರಿಯಾಗಿ ವಸೂಲಾತಿ ಮಾಡದೇ ಇರುವುದು ಹಾಗೂ ವ್ಯವಹಾರ ಕೈಗೊಳ್ಳದಿರುವ ಪರಿಣಾಮ ಜಿಲ್ಲೆಯ ಬಹುತೇಕ ಸಹಕಾರ ಸಂಘಗಳು ನಷ್ಟ ಅನುಭವಿಸುತ್ತಿವೆ.

ಅದರಲ್ಲೂ, ಜಿಲ್ಲೆಯ ನಾಲ್ಕೂ ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು (ಪಿಕಾರ್ಡ್) ಭಾರಿ ನಷ್ಟ ಅನುಭವಿಸುತ್ತಿವೆ.

`ಪ್ರಜಾವಾಣಿ~ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿರುವ 579 ಸಹಕಾರ ಸಂಘಗಳ ಪೈಕಿ 278 ಸಂಘಗಳು ನಷ್ಟದಲ್ಲಿವೆ. 279 ಸಂಘಗಳು ಲಾಭದಲ್ಲಿದ್ದರೆ 22 ಸಂಘಗಳು ಇತ್ತೀಚೆಗೆ ಕಾರ್ಯಾರಂಭ ಮಾಡಿವೆ.

ಲಾಭದಲ್ಲಿರುವ ಸಹಕಾರ ಸಂಘಗಳ ಪೈಕಿ ಬಹುತೇಕ ಸಂಘಗಳು ನೌಕರರ ಪತ್ತಿನ ಸಂಘ, ಹಾಲು ಉತ್ಪಾದಕರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಹಿಂದಿನ ವಿಎಸ್‌ಎಸ್‌ಎನ್) ಸ್ವಲ್ಪ ಮಟ್ಟಿನ ಲಾಭದಲ್ಲಿವೆ. ಈ ಪೈಕಿ ನೌಕರರು ಪಡೆದ ಸಾಲಕ್ಕೆ ಸಂಬಂಧಿಸಿದಂತೆ ವೇತನದಲ್ಲಿಯೇ ಸಾಲದ ಕಂತನ್ನು ಕಡಿತಗೊಳಿಸುತ್ತಿರುವುದರಿಂದ ನೌಕರರ ಪತ್ತಿನ ಸಹಕಾರ ಸಂಘಗಳು ಲಾಭ ತೋರುತ್ತಿವೆ. ಇಲ್ಲದೇ ಹೋದರೆ ಈ ಸಂಘಗಳು ಸಹ ನಷ್ಟ ಅನುಭವಿಸುವುದನ್ನು ಅಲ್ಲಗಳೆಯಲಾಗದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಜಿಲ್ಲೆಯಲ್ಲಿರುವ ಪಿಕಾರ್ಡ್ ಬ್ಯಾಂಕ್‌ಗಳು ಕಳೆದ ಮಾ. 31ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿವೆ. ಕೊಪ್ಪಳ ಪಿಕಾರ್ಡ್ ಬ್ಯಾಂಕ್ 9,05,85,829 ರೂಪಾುಗಳಷ್ಟು ಸಂಚಿತ ನಷ್ಟ ಅನುಭವಿಸುತ್ತಿದೆ.

ಕುಷ್ಟಗಿ ಪಿಕಾರ್ಡ್ ಬ್ಯಾಂಕ್ 7,13,16,457 ರೂಪಾಯಿ, ಗಂಗಾವತಿ- 8,76,60,677 ರೂಪಾಯಿ ಹಾಗೂ ಯಲಬುರ್ಗಾ ಪಿಕಾರ್ಡ್ ಬ್ಯಾಂಕ್ 7,91,07,277 ರೂಪಾಯಿ ಸಂಚಿತ ನಷ್ಟ ಅನುಭವಿಸುತ್ತಿವೆ ಎಂದು ಸಹಕಾರ ಇಲಾಖೆ ಮೂಲಗಳು ಹೇಳುತ್ತವೆ.

ಜಿಲ್ಲೆಯಲ್ಲಿ 30 ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳಿದ್ದು, 13 ಸಂಘಗಳು ಕಾರ್ಯ ಸ್ಥಗಿತಗೊಳಿಸಿವೆ. 5 ಸಂಘಗಳನ್ನು ಸಮಾಪನೆಗೊಳಿಸಲಾಗಿದೆ. ನೀರು ಬಳಕೆದಾರರ ಸಹಕಾರ ಸಂಘಗಳು 95 ಇದ್ದು ಈ ಪೈಕಿ 41 ಸಂಘಗಳು ನಿಷ್ಕ್ರಿಯವಾಗಿವೆ. ಸಮರ್ಪಕ ವ್ಯವಹಾರ, ಲೆಕ್ಕಪತ್ರ ನಿರ್ವಹಣೆ ಮಾಡದೇ ಇರುವ ಹಿನ್ನೆಲೆಯಲ್ಲಿ 3 ಸಂಘಗಳನ್ನು ಸಮಾಪನೆಗೊಳಿಸಲಾಗಿದೆ ಎಂದು ಇವೇ ಮೂಲಗಳು ಹೇಳುತ್ತವೆ.

ಜಿಲ್ಲೆಯ 92 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಈಗ ಲಾಭದತ್ತ ಹೆಜ್ಜೆ ಹಾಕಿವೆ. ವೈದ್ಯನಾಥನ್ ವರದಿಯಲ್ಲಿನ ಶಿಫಾರಸಿನ ಅನ್ವಯ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ನೀಡಿುವುದು ಈ ಸಂಘಗಳು ಲಾಭದತ್ತ ಹೆಜ್ಜೆ ಹಾಕಲು ಕಾರಣವಾಗಿದೆ. ಆದರೆ, ಈ ಶಿಫಾರಸಿನ ಪ್ರಕಾರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಈ ಸಂಘಗಳು ಆರ್ಥಿಕವಾಗಿ ಸದೃಢಗೊಳ್ಳಬೇಕು. 

ಸಹಕಾರ ಸಚಿವ ಲಕ್ಷ್ಮಣ ಸವದಿ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಪಿಕಾರ್ಡ್ ಬ್ಯಾಂಕ್ ಸೇರಿದಂತೆ ನಷ್ಟದಲ್ಲಿರುವ ಜಿಲ್ಲೆಯ ಸಹಕಾರ ಸಂಘಗಳ ಪುನಶ್ವೇತನಕ್ಕೆ ಗಮನ ಹರಿಸುವರೇ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT