ಮಂಗಳವಾರ, ಏಪ್ರಿಲ್ 20, 2021
32 °C

28 ಗಂಟೆಯಿಂದ ಸೇತುವೆ ಮುಳುಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

28 ಗಂಟೆಯಿಂದ ಸೇತುವೆ ಮುಳುಗ

ಕಡಬ (ಉಪ್ಪಿನಂಗಡಿ): ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಘಟ್ಟದ ಮೇಲಿನಿಂದ ನೀರಿನ ಪ್ರವಾಹ ಒಂದೇ ಸವನೆ ಜಾಸ್ತಿಯಾಗಿರುವುದರಿಂದಾಗಿ ಗುಂಡ್ಯ ಹೊಳೆ ಹರಿಯುವ ಹೊಸ್ಮಠ ಮುಳುಗು ಸೇತುವೆ ಕಳೆದ 28 ಗಂಟೆಯಿಂದ ಮುಳುಗಡೆಯಾಗಿದೆ.ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ ಸೇತುವೆ ಮುಳುಗಡೆ ಆಗಿದ್ದು, ಮಂಗಳವಾರ ರಾತ್ರಿಯವರೆಗೂ ಮುಳುಗಡೆಯಾಗಿಯೇ ಇತ್ತು. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಮಧ್ಯೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಈ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ.ಸೋಮವಾರ ಸಂಜೆ ಸೇತುವೆಯ ಮೇಲೆ ಸುಮಾರು 3 ಅಡಿಯಷ್ಟು ನೀರು ಹರಿಯುತ್ತಿದ್ದುದು, ಸಂಜೆ ತುಸು ಇಳಿಕೆಯಾಗಿತ್ತು. ರಾತ್ರಿಯಾಗುತ್ತಿದ್ದಂತೆ ಸೇತುವೆಯ ಮೇಲೆ ಸುಮಾರು 6 ಅಡಿ ನೀರು ಹರಿಯುತ್ತಿತ್ತು. ಸೇತುವೆಯ ರಕ್ಷಣಾ ಗೇಟು, ಪೊಲೀಸರು ಪಹರೆ ಕಾಯುತ್ತಿದ್ದ ಶೆಡ್‌ವರೆಗೆ ನೀರು ಹರಿದಾಡತೊಡಗಿತ್ತು. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸೇತುವೆಯ ಮೇಲೆ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ರಾತ್ರಿಯಾಗುತ್ತಲೇ ಮತ್ತೆ ಏರಿಕೆಯಾಗಿದೆ.ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಮಧ್ಯೆ ಸೋಮವಾರ ಸಂಜೆಯಿಂದಲೇ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಮಧ್ಯೆ, ಈ ಮಾರ್ಗವಾಗಿ ಸಂಚರಿಸುವ ಬಸ್, ಟೂರಿಸ್ಟ್ ಟೆಂಪೊಗಳಲ್ಲಿ ಕೆಲವು ಪುತ್ತೂರು-ಕಾಣಿಯೂರು ರಸ್ತೆಯಾಗಿ ಸಂಚಾರ ಮುಂದುವರಿಸಿದ್ದವು. ಉಳಿದಂತೆ ಟೂರಿಸ್ಟ್, ಸರ್ವಿಸ್ ವಾಹನಗಳು ಸಂಚಾರ ಸ್ಥಗಿತಗೊಳಿಸಿದವು.ದ್ವೀಪವಾದ ಕಡಬ:
ಕಡಬ-ಉಪ್ಪಿನಂಗಡಿ ಮಧ್ಯೆ ಯಾನ ಮಾಡುವ ಉದ್ಯೋಗಿಗಳು, ಉದ್ಯಮಿಗಳು, ವ್ಯಾಪಾರ, ವ್ಯವಹಾರಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ವಾಹನಗಳ ಸಂಚಾರವಿಲ್ಲದೆ ಸಮಸ್ಯೆ ಎದುರಿಸುವಂತಾಯಿತು.ಹೊಸ್ಮಠ ಸೇತುವೆ ಮುಳುಗಡೆ ಆಗಿರುವುದರಿಂದ ಮತ್ತು ಅತ್ತ ಬಿಳಿನೆಲೆ ಮತ್ತು ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಸೇತುವೆ ಮುಳುಗಡೆ ಆಗಿರುವುದರಿಂದ ಸೋಮವಾರದಿಂದ ಕಡಬ ಜನತೆಯ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದೆ. ಒಂದು ರೀತಿಯಲ್ಲಿ ಕಡಬ ದ್ವೀಪದಂತಾಗಿ ಮಾರ್ಪಾಟು ಹೊಂದಿದಂತಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.