28 ವರ್ಷ ಬಳಿಕ ಜಿ-24 ಅಧ್ಯಕ್ಷ ಸ್ಥಾನ ಭಾರತಕ್ಕೆ

ಸೋಮವಾರ, ಮೇ 20, 2019
30 °C

28 ವರ್ಷ ಬಳಿಕ ಜಿ-24 ಅಧ್ಯಕ್ಷ ಸ್ಥಾನ ಭಾರತಕ್ಕೆ

Published:
Updated:

ನ್ಯೂಯಾರ್ಕ್ (ಐಎಎನ್‌ಎಸ್):  ಸುದೀರ್ಘ 28 ವರ್ಷಗಳ ನಂತರ ಜಿ-24 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಭಾರತ ಅಲಂಕರಿಸಿದೆ. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಎರಡನೇ ಬಾರಿಗೆ ಇದರ ಅಧ್ಯಕ್ಷರಾಗಿದ್ದಾರೆ.1983ರಲ್ಲಿ ಇಂದಿರಾ ಗಾಂಧಿ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮುಖರ್ಜಿ ಜಿ-24 ರಾಷ್ಟ್ರಗಳನ್ನು ಮುನ್ನಡೆಸಿದ್ದರು. ಕಾಕತಾಳೀಯ ಎಂಬಂತೆ  ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿಯು ಅದೇ ಹೊಣೆಗಾರಿಕೆ ನಿರ್ವಹಿಸುತ್ತಿದ್ದು, ಜಿ-24 ರಾಷ್ಟ್ರಗಳನ್ನು ಎರಡನೇ ಬಾರಿಗೆ ಮುನ್ನಡೆಸುವ ಅವಕಾಶ ಲಭಿಸಿದೆ.ಭಾನುವಾರ ಇಲ್ಲಿ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪತ್ರಕರ್ತರಿಗೆ ಈ ವಿಷಯವನ್ನು ಸ್ವತಃ ಅವರೇ ತಿಳಿಸಿದರು.`ಸಾಮಾನ್ಯವಾಗಿ ಈ ರೀತಿ ಪುನರಾವರ್ತನೆಯಾಗುವುದಿಲ್ಲ. ಆದರೆ, ಅಕಸ್ಮಾತ್ ಆಗಿ ಇಂತಹದ್ದೊಂದು ಸಂದರ್ಭ ಮರುಕಳಿಸಿದೆ~ ಎಂದು ಅವರು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry