ಭಾನುವಾರ, ಮೇ 22, 2022
21 °C

30ರಂದು ಆರೋಗ್ಯ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಭಾರತ ವಿಕಾಸ ಪರಿಷತ್ ಕಣ್ವ ಶಾಖೆ, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಆಡಿಯಲಾಜಿ ಇಂಡಿಯಾ ಸಂಸ್ಥೆ, ಶ್ರೀಲಕ್ಷ್ಮಿ ಆಸ್ಪತ್ರೆ, ಚನ್ನಪಟ್ಟಣ ದಿ.ಪಟೇಲ್ ವೆಂಕಟೇಗೌಡ ಬೈರನಾಯಕನಹಳ್ಳಿ ಅವರ ನೆನಪಿಗಾಗಿ ಡಿ.ಟಿ. ರಾಮು ವೃತ್ತದಲ್ಲಿರುವ ಶ್ರೀ ಲಕ್ಷ್ಮಿ ಆಸ್ಪತ್ರೆಯಲ್ಲಿ ಅ.30ರಂದು ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. 14ವರ್ಷದೊಳಗಿನ ಮಕ್ಕಳು ಶ್ರವಣ ದೋಷ ಇರುವ ಎಲ್ಲಾ ವಯಸ್ಸಿನವರು ಈ ಉಚಿತ ಶಿಬಿರದಲ್ಲಿ ತಪಾಸಣೆಗೊಳಪಡಬಹುದು. ಶ್ರವಣ ದೋಷ ಇರುವವರಿಗೆ ಸ್ಥಳದಲ್ಲೇ ಉಚಿತ ಶ್ರವಣೋಪಕರಣವನ್ನು ವಿತರಿಸಲಾಗುವುದು. ಶಿಬಿರದ ನೇತೃತ್ವವನ್ನು ಇಂದಿರಾಗಾಂದಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಶಿವಾನಂದ್ ಹಾಗೂ ಶ್ರವಣಸಂಸ್ಥೆಯ ಜಯಪ್ರಕಾಶ್ ಅವರು ವಹಿಸಲಿದ್ದಾರೆ.ಆಸಕ್ತಿಯುಳ್ಳವರು ಸಿ.ಟಿ.ಶ್ರೀನಿವಾಸ್(9844008619) ವಸಂತಕುಮಾರ್(9242240124) ಬಿ.ಎನ್. ಕಾಡಯ್ಯ (9964419506) ಟಿ. ಕೃಷ್ಣಯ್ಯ (9036797987) ಇವರಲ್ಲಿ ನೊಂದಾಯಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.