ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`35 ಎಕರೆ ಜಮೀನಿಗೆ ನೀರಾವರಿ ಸೌಕರ್ಯ'

Last Updated 22 ಡಿಸೆಂಬರ್ 2012, 9:35 IST
ಅಕ್ಷರ ಗಾತ್ರ

ರಾಯಬಾಗ: ತಾಲ್ಲೂಕಿನ ಮೇಖಳಿಯ ದಾಸರಕೋಡಿಯಲ್ಲಿ ಗಿರಿಜನರ ಫಲಾನುಭವಿಗಳಿಗಾಗಿ ಗಂಗಾ ಕಲ್ಯಾಣ ಯೋಜನೆಯಡಿ ರೂ. 25 ಲಕ್ಷ ಅನುದಾನದಲ್ಲಿ ಮೂರು ಕೊಳವೆ ಬಾವಿ ಹಾಗೂ ಒಂದು ತೆರೆದ ಬಾವಿ ಮೂಲಕ 35 ಎಕರೆ ಜಮೀನಿಗೆ ನೀರಾವರಿ ಸೌಕರ್ಯ ಒದಗಿಸಲಾಗುವುದು ಎಂದು ಬಿಜೆಪಿ ಯುವ ಧುರೀಣ ಅರುಣ ದುರ್ಯೋಧನ ಐಹೊಳೆ ಹೇಳಿದರು.

ಶುಕ್ರವಾರ ತಾಲ್ಲೂಕಿನ ಮೇಖಳಿ ಗ್ರಾಮದ ದಾಸರ ಕೋಡಿಯ ಗಿರಿಜನ ಫಲಾನುಭವಿಗಳ 35 ಎಕರೆ ಜಮೀನಿಗೆ ಚಿಕ್ಕ ನೀರಾವರಿ ಇಲಾಖೆಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನೂತನ ಕೊಳವೆ ಬಾವಿಗಳನ್ನು ಕೊರೆಯುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದಾಸರ ಕೋಡಿಗೆ ಈಗಾಗಲೇ ಸರ್ಕಾರದಿಂದ ಕುಡಿಯುವ ನೀರು, ರಸ್ತೆ ಡಾಂಬರೀಕರಣ, ಸಮುದಾಯ ಭವನಗಳನ್ನು ನಿರ್ಮಿಸಿಕೊಡಲಾಗಿದೆ.
ಇನ್ನೂ ಸಮಸ್ಯೆಗಳಿದ್ದರೆ ಅವನ್ನು ಸಹ ಶಾಸಕರಿಂದ ಪರಿಹರಿಸಲಾಗುವುದು ಎಂದರು. ನಂತರ ಅದೇ ರೀತಿ ಕಬ್ಬೂರ ಗ್ರಾಮದ ಗಣೇಶ ತೋಟದ ಬಳಿಯ ಪರಿಶಿಷ್ಟ ಜಾತಿಯ ಎಂಟು ಜನ ಫಲಾನುಭವಿಗಳ 36 ಎಕರೆ ಜಮೀನಿಗೆ ನೀರಾವರಿ ಸೌಲಭ್ಯಕ್ಕಾಗಿ ಚಿಕ್ಕ ನೀರಾವರಿ ಇಲಾಖೆಯಿಂದ ಗಂಗಾ ಕಲ್ಯಾಣ ಯೋಜನೆಯಡಿ ರೂ. 25 ಲಕ್ಷ ಅನುದಾನದಲ್ಲಿ ಎಂಟು ಕೊಳವೆಬಾವಿಗಳನ್ನು ಕೊರೆಯುವ ಕಾಮಗಾರಿಗೆ  ಸಹ ಚಾಲನೆ ನೀಡಿದರು.

ಚಿಕ್ಕನೀರಾವರಿ ಇಲಾಖೆಯ ಐ.ಎಸ್.ಹತ್ತಿ, ಎನ್. ಎಂ. ಸಿಂಧೂರ, ಕೆ.ಎಂ. ಹೂಗಾರ, ಎಂ. ಐ. ಬೂದಿಹಾಳ, ಅಣ್ಣಾಸಾಬ ಖೆಮಲಾಪುರೆ, ದಾಶಿವ ಹಳಿಂಗಳಿ, ಸುರೇಶ ಮಾಳಿ, ವಿವೇಕ ಕಟ್ಟಿಕಾರ, ಪುಂಡಲೀಕ ನಾಯ್ಕ, ಸುಭಾಷ ಈರಾಯಿ, ಅನಿಲ ಒಡೆಯರ, ಪ್ರಕಾಶ ತೇರದಾಳ, ಬಾಬು ಜಾಧವ, ಬಸವರಾಜ ನಾಯ್ಕ, ಮಾರುತಿ ಬನಗೆ, ಪರಶುರಾಮ ರಾಠೋಡ, ಸಿದ್ದು ಕಾಂಬಳೆ, ಸುರೇಶ ಬೆಲ್ಲದ, ಬಸಪ್ಪ ಶಿವಾಯಗೋಳ, ಸುರೇಶ ಗಂಗಾಯಗೋಳ, ಶ್ರೀಕಾಂತ ಬೀರಪ್ಪಗೊಳ, ಮಹಾಂತೇಶ ಹಿರೇಕೋಡಿ, ಕಲ್ಲಪ್ಪ ಕರಗಾವಿ, ಎ.ಬಿ. ಸಾವಕಾರ, ಕೆಂಚಪ್ಪ ಕಾಮಗೌಡ, ರಮೇಶ ಕಾಂಬಳೆ ಮತ್ತಿತರರು ಹಾಗೂ ಫಲಾನುಭವಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT