ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ತಿಂಗಳ ಸಕ್ಕರೆ ಉತ್ಪಾದನೆ ಕುಸಿತ

Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ಕಬ್ಬು ಅರೆಯುವಿಕೆ ಮಂದಗತಿಯಲ್ಲಿ ಆರಂಭ ಗೊಂಡಿದ್ದರಿಂದ 2013–14ನೇ ಸಕ್ಕರೆ ತಯಾರಿಕೆ ವರ್ಷದ(ಅಕ್ಟೋಬರ್್–ಸೆಪ್ಟೆಂಬರ್) ಮೊದಲ ಮೂರು ತಿಂಗಳಲ್ಲಿ ಸಕ್ಕರೆ ಉತ್ಪಾದನೆ ಶೇ 29ರಷ್ಟು (57.39 ಲಕ್ಷ ಟನ್‌ಗೆ) ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿನ ಸಕ್ಕರೆ ಉತ್ಪಾದನೆ 80.32 ಲಕ್ಷ ಟನ್‌ಗಳಷ್ಟಿತ್ತು.

‘ಸದ್ಯ ಸಕ್ಕರೆ ಉತ್ಪಾದನೆ ನಿಧಾನವಾಗಿ ಚುರುಕುಗೊಳ್ಳುತ್ತಿದೆ. ಕೇಂದ್ರ ಸರ್ಕಾರ ರಪ್ತು ಉತ್ತೇಜನ ಕ್ರಮಗಳನ್ನು ತಕ್ಷಣ ಪ್ರಕಟಿಸಿದರೆ ಕಚ್ಚಾ ಸಕ್ಕರೆ ಉತ್ಪಾದನೆ ಯಲ್ಲಿ ಗಣನೀಯ ಏರಿಕೆ ಕಂಡುಬರ ಲಿದೆ‘ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಪ್ರಾತಿನಿಧಿಕ ಸಂಸ್ಥೆ ‘ಐಎಸ್‌ಎಂಎ’ ಹೇಳಿದೆ.

ಕಾರ್ಖಾನೆಗಳು ಈ ಬಾರಿ ಕಬ್ಬು ಅರೆ ಯುವಿಕೆಯನ್ನು  ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ನಡೆಸಿದ್ದವು. ಡಿಸೆಂಬರ್‌ ಮಾಸಾಂತ್ಯದಿಂದ ಚುರುಕುಗೊಳಿಸಿವೆ. ಹಾಗಾಗಿಯೇ ಸಕ್ಕರೆ ಉತ್ಪಾದನೆ ಕುಸಿತ ಕಂಡಿದೆ. ಇದಕ್ಕೆ ಕಬ್ಬು ಬೆಲೆ ನಿಗದಿಯಲ್ಲಿ ಉಂಟಾದ ಸಮಸ್ಯೆಯೇ ಕಾರಣ. ಕಳೆದ ವರ್ಷ ಡಿಸೆಂಬರ್‌ ವೇಳೆ ದೇಶದಾದ್ಯಂತ 499 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿದ್ದವು. ಈ ಬಾರಿ 476 ಸಕ್ಕರೆ ಕಾರ್ಖಾನೆಗಳು ಮಾತ್ರ ಕಬ್ಬು ಅರೆಯು ತ್ತಿವೆ ಎಂದಿದೆ ‘ಐಎಸ್‌ಎಂಎ’.

ದೇಶದಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾ ದಿಸುವ ರಾಜ್ಯವಾದ ಮಹಾರಾಷ್ಟ್ರ ಕಳೆದ ವರ್ಷ 29.07 ಲಕ್ಷ ಟನ್‌ ಉತ್ಪಾದಿಸಿದ್ದರೆ, ಈ ವರ್ಷ  22.14 ಲಕ್ಷ ಟನ್‌ ತಗ್ಗಿದೆ. ಕಳೆದ ವರ್ಷ ಇಲ್ಲಿ 161 ಕಾರ್ಖಾನೆಗಳು ಕಬ್ಬು ಅರೆಯುತ್ತಿದ್ದವು. ಈ ಬಾರಿ 154 ಕಾರ್ಖಾನೆಗಳಷ್ಟೇ ಕಾರ್ಯನಿರತವಾಗಿವೆ.

ಸಕ್ಕರೆ ಉತ್ಪಾದನೆಯಲ್ಲಿ ದೇಶದ ಎರಡನೇ ಅತಿ ದೊಡ್ಡ ರಾಜ್ಯವೆನಿಸಿದ  ಉತ್ತರ ಪ್ರದೇಶದ ಪರಿಸ್ಥಿತಿ ಕೂಡ ಭಿನ್ನ ವಾಗಿಲ್ಲ. ಈ ಬಾರಿ ಇಲ್ಲಿ 11.3 ಲಕ್ಷ ಟನ್ (ಶೇ 42ರಷ್ಟು ಕಡಿಮೆ) ಸಕ್ಕರೆ ಉತ್ಪಾದನೆಯಾಗಿದೆ. ಕಳೆದ ವರ್ಷ 122 ಕಾರ್ಖಾನೆಗಳು ಕಬ್ಬು ಅರೆದಿದ್ದರೆ, ಈ ಬಾರಿ 119 ಕಾರ್ಖಾನೆಗಳು ಮಾತ್ರ ಚಟುವಟಿಕೆಯಿಂದಿವೆ.
ಮಹಾರಾಷ್ಟ್ರ ಮತ್ತು ಉತ್ತರ ಪ್ರದೇ ಶದ ಸಕ್ಕರೆ ಉತ್ಪಾದನೆ ಕ್ರಮವಾಗಿ ಶೇ 10.19 ಮತ್ತು ಶೇ 8.75ರಷ್ಟಿದೆ.

ಕರ್ನಾಟಕ 12ಲಕ್ಷ ಟನ್‌
ಕರ್ನಾಟಕದಲ್ಲಿ ಕೂಡ ಸಕ್ಕರೆ ಉತ್ಪಾ ದನೆ ಕುಸಿತ ಕಂಡಿದೆ. 2013–14ನೇ ಸಕ್ಕರೆ ಉತ್ಪಾದನೆ ವರ್ಷದಲ್ಲಿ ಮೊದಲ ಮೂರು ತಿಂಗಳಲ್ಲಿ ಉತ್ಪಾದನೆಯಾಗಿ ರುವ ಸಕ್ಕರೆ 12 ಲಕ್ಷ ಟನ್‌. ಕಳೆದ ವರ್ಷದ ಇದೇ ಅವಧಿಯಲ್ಲಿ 16 ಲಕ್ಷ ಟನ್‌ಗಳಷ್ಟಿತ್ತು. ಕಬ್ಬು ಬೆಲೆ ನಿಗದಿ ಸಮಸ್ಯೆಯೇ ಉತ್ಪಾದನೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ‘ಐಎಸ್‌ಎಂಎ’ ಬೊಟ್ಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT