ಸೋಮವಾರ, ಜೂನ್ 21, 2021
29 °C

4 ಜಿಲ್ಲೆಗಳಲ್ಲಿ ಔಷಧ ಉದ್ಯಮಕ್ಕೆ ಉತ್ತೇಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಮೈಸೂರು, ಹಾಸನ, ಬೀದರ್‌, ಯಾದಗಿರಿ ಜಿಲ್ಲೆ ಗಳಲ್ಲಿ ಔಷಧ ಉದ್ಯಮದ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸ ಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತ ಮಹೇಶ್ವರ ರಾವ್‌ ತಿಳಿಸಿದರು.ನಗರದಲ್ಲಿ ಗುರುವಾರ ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯ, ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಕರ್ನಾಟಕ  ಔಷಧ ತಯಾರಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಉದ್ಘಾಟಿಸಿದ  ಅವರು, ಈ ಜಿಲ್ಲೆಗಳಲ್ಲಿ ಭೂಮಿ ಸಹ ಲಭ್ಯವಿರುವು ದರಿಂದ ಉದ್ಯಮಗಳ ಸ್ಥಾಪನೆಗೆ ಅನು ಕೂಲವಾಗಲಿದೆ ಎಂದರು.ಔಷಧ ಉದ್ಯಮದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಈ ಉದ್ಯಮ ದಲ್ಲಿ ಕರ್ನಾಟಕ ಉತ್ತಮ ಪ್ರಗತಿ ತೋರುತ್ತಿದೆ. ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕ ಶೇ 8ರಷ್ಟು ಪಾಲು  ಹೊಂದಿದೆ  ಎಂದು ವಿವರಿಸಿದರು.ಕರ್ನಾಟಕ ಔಷಧ ತಯಾರಕರ ಸಂಘದ ಅಧ್ಯಕ್ಷ ಜಗನ್ನಾಥ ಶೇಟ್‌, ಔಷಧಗಳ ರಫ್ತು ಪ್ರಮಾಣ ಗಣನೀಯ ವಾಗಿ ಏರಿಕೆಯಾಗಿದ್ದರೂ ಭವಿಷ್ಯದಲ್ಲಿ ಉದ್ಯಮದ ಬೆಳವಣಿಗೆಯ ಲಕ್ಷಣ ಗೋಚರಿಸುತ್ತಿಲ್ಲ. ಉತ್ಪಾದನೆ ವೆಚ್ಚ ದುಬಾರಿಯಾಗಿರುವುದು ಸಹ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿದರು.ಉತ್ತಮ ಸಂಶೋಧನೆ ಕೈಗೊಳ್ಳಲು ಔಷಧವಿಜ್ಞಾನ ಮಹಾವಿದ್ಯಾಲಯಗಳು ಮತ್ತು ಉದ್ಯಮಗಳ ನಡುವೆ ಉತ್ತಮ ಸಂಬಂಧ  ಸಾಧಿಸಬೇಕಾಗಿದೆ. ಶಿಕ್ಷಣ ತಜ್ಞರು ಈ ನಿಟ್ಟಿನಲ್ಲಿ ಚಿಂತನೆ ನಡೆಸ ಬೇಕು. ಇಂಗ್ಲೆಂಡ್‌ ಮತ್ತು ಅಮೆರಿಕದಲ್ಲಿ ವಿಶ್ವವಿದ್ಯಾಲಯಗಳು ಮತ್ತು ಉದ್ಯಮ ಜಂಟಿಯಾಗಿ ಸಂಶೋಧನೆ ಕಾರ್ಯ ಕೈಗೊಂಡಿವೆ ಎಂದು ನುಡಿದರು.ರಾಜ್ಯ ಔಷಧ ನಿಯಂತ್ರಕ ರಘು ರಾಮ ಭಂಡಾರಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.