ಸೋಮವಾರ, ಜೂನ್ 14, 2021
28 °C

40 ಲಕ್ಷ ಶಸ್ತ್ರಾಸ್ತ್ರ ವಿಲೇವಾರಿಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಐಎಎನ್‌ಎಸ್): 2015ರ ಒಳಗೆ ಎ.ಕೆ.47 ಸೇರಿದಂತೆ 40 ಲಕ್ಷ ಹಳೆಯ ಬಂದೂಕು ಮತ್ತು ರೈಫಲ್‌ಗಳನ್ನು ವಿಲೇವಾರಿ ಮಾಡಲು ರಷ್ಯಾ ರಕ್ಷಣಾ ಸಚಿವಾಲಯ ನಿರ್ಧರಿಸಿದೆ.ರಕ್ಷಣಾ ಮೂಲಗಳ ಪ್ರಕಾರ, ಒಟ್ಟು 1.6 ಕೋಟಿ ಶಸ್ತ್ರಾಸ್ತ್ರಗಳು ಗೋದಾಮಿನ್ಲ್ಲಲಿವೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ 1.70 ಕೋಟಿ ಶಸ್ತ್ರಾಸ್ತ್ರಗಳನ್ನು ರಕ್ಷಣಾ ಸಚಿವಾಲಯ ಖರೀದಿಸಿತ್ತು.

 

ವಿಶ್ಲೇಷಕರ ಪ್ರಕಾರ, ರಷ್ಯಾದ ರಕ್ಷಣಾ ಪಡೆಗಳಲ್ಲಿ ಒಂದು ದಶಲಕ್ಷ  ಯೋಧರು ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಗೋದಾಮುಗಳಲ್ಲಿ ಸೇನೆಗೆ ಅವಶ್ಯವಿರುವುದಕ್ಕಿಂತ ಹೆಚ್ಚು ಶಸ್ತ್ರಾಸ್ತ್ರಗಳು ಸಂಗ್ರಹವಾಗಿರಬಹುದೆಂದು ಅಂದಾಜಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.