ಗುರುವಾರ , ಏಪ್ರಿಲ್ 22, 2021
30 °C

485 ವರ್ಷಗಳಿಂದ ಬೆಳಗುತ್ತಿರುವ ದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೊರಾತ್ (ಅಸ್ಸಾಂ)(ಪಿಟಿಐ): ಇಲ್ಲಿನ ವೈಷ್ಣವ ಪಂಥದ ದೇವಾಲಯದಲ್ಲಿ ಕಳೆದ 485 ವರ್ಷಗಳಿಂದ ಬೆಳಗುತ್ತಿರುವ ಎಣ್ಣೆ ದೀಪ ಏಷ್ಯಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಂಡಿದೆ.ಜೊರಾತ್ ಸಮೀಪದ  ದೇಕಿಯಖೋವಾ ಬೊರ್ ನಂಘಾರ್‌ನ ದೇವಾಲಯದಲ್ಲಿ 485 ವರ್ಷಗಳಿಂದ ಈ ಪವಿತ್ರ ದೀಪ ಬೆಳಗುತ್ತಿದೆ. 1528 ರಲ್ಲಿ  ಈ ಜ್ಯೋತಿಯನ್ನು ಬೆಳಗಿಸಲಾಗಿತ್ತು. ಅಂದಿನಿಂದ ಉರಿಯುತ್ತಿರುವ ಈ ದೀಪ ಎಂದು ಕೂಡ ನಂದಿ ಹೋಗಿಲ್ಲ.  ಸ್ಥಳೀಯರು ಉರಿಯುವಂತೆ ನೋಡಿಕೊಂಡಿದ್ದಾರೆ.ಇತ್ತೀಚೆಗೆ ಜೊರಾತ್‌ನ ಸಂಸದ ಬಿಜೊಯ್ ಕೃಷ್ಣ ಹಂಡಿಕ್ ಅವರಿಗೆ ಈ ದೀಪ ದಾಖಲೆಗೆ ಸೇರ್ಪಡೆಯಾದುದರ ಪತ್ರ ನೀಡಲಾಯಿತು ಎಂದು ದೇವಸ್ಥಾನ ಮಂಡಳಿಯ ಮೂಲಗಳು ತಿಳಿಸಿವೆ.ಅಸ್ಸಾಂನ ಖ್ಯಾತ ಧಾರ್ಮಿಕ ಸಂತ ಮಧ್ವಾದೇವಾ ಮತ್ತು  ಶ್ರಿಮಂಥ ಶಂಕರದೇವಾ ಅವರು ನಂಘಾರ್ ದೇವಾಲಯವನ್ನು 1528 ರಲ್ಲಿ ನಿರ್ಮಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.