ಮೈಸೂರು: `ಮುದ್ರಣಕ್ಕೆ ಸಿದ್ಧವಾಗಿರುವ 5 ಮತ್ತು 8ನೇ ತರಗತಿ ಪಠ್ಯಪುಸ್ತಕ ಕೇಸರಿಕರ ಣದಿಂದ ಕೂಡಿದೆ. ದಲಿತರು, ಶೂದ್ರರ ವಿರುದ್ಧ ಇರುವ ಈ ಪುಸ್ತಕಗಳನ್ನು ಸುಟ್ಟುಹಾಕಬೇಕು~ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಕರೆ ನೀಡಿದರು.

ನಗರದ ಮಹಾರಾಜ ಕಾಲೇಜು ಶತಮಾ ನೋತ್ಸವ ಭವನದಲ್ಲಿ ಬಹುಜನ ವಿದ್ಯಾರ್ಥಿ ಸಂಘವು ಮಂಗಳವಾರ ಏರ್ಪಡಿಸಿದ್ದ `ಮನುವಾದಿಗೊಳ್ಳುತ್ತಿರುವ 5 ಮತ್ತು 8ನೇ ತರಗತಿ ಪಠ್ಯಪುಸ್ತಕಗಳು~ ವಿಷಯವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

`ಆರ್ಎಸ್ಎಸ್ ಹಿರಿಯ ಕಾರ್ಯಕರ್ತ ಮುಡಬಡಂತಾಯ ಅವರನ್ನು ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಇವರು ಪಠ್ಯವನ್ನು ಸಿದ್ಧ ಮಾಡಿ ಶೃಂಗೇರಿ ಸ್ವಾಮೀಜಿ ಅವರಿಗೆ ಕಳುಹಿಸಿಕೊಟ್ಟರು. ಸ್ವಾಮೀಜಿ ಪಠ್ಯಪುಸ್ತಕವನ್ನು ತಿದ್ದಿದ್ದಾರೆ. ಆದರೆ ದಲಿತರ, ಹಿಂದುಳಿದವರ ವಿರುದ್ಧವಾಗಿ ವೈದಿಕ ಧರ್ಮವನ್ನು ಮಕ್ಕಳ ತಲೆಗೆ ತುಂಬುವ ಅಂಶಗಳು 5 ಮತ್ತು 8ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಅಡಗಿದೆ. ಅದನ್ನು ಯಥಾವತ್ತಾಗಿ ಮುದ್ರಣ ಮಾಡಲು ಸಿದ್ಧತೆ ನಡೆದಿದೆ. ಇದನ್ನು ಯಾರೂ ಒಪ್ಪುವಂತಹದಲ್ಲ~ ಎಂದು ಹೇಳಿದರು.

`ಪಠ್ಯಕ್ಕೆ ಆರ್ಎಸ್ಎಸ್ ನಿಯಮ~
`ಪಠ್ಯ ರಚನಾ ಸಮಿತಿ ಒಪ್ಪಿಗೆ ಸೂಚಿಸ ಬೇಕಾದ ಪಠ್ಯಪುಸ್ತಕವನ್ನು ಮಠಾಧಿಪತಿಗಳ ಆದೇಶದ ಮೇರೆಗೆ ಮುದ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಕ್ಕಳಲ್ಲಿ ವಿಷದ ಬೀಜ ಬಿತ್ತುವಂತಹ ಅಂಶಗಳನ್ನು ಸೇರಿಸಿದ್ದಾರೆ. ಆರ್ಎಸ್ಎಸ್ ನಿಯಮಗಳನ್ನು ಪುಸ್ತಕದಲ್ಲಿ ಬಲವಂತವಾಗಿ ತುರುಕಲಾಗಿದೆ. ಹತ್ತನೇ ತರಗತಿ ಮಕ್ಕಳಿಗೆ ನೀಡಬೇಕಾದ ಪಠ್ಯವನ್ನು 5ನೇ ತರಗತಿ ಮಕ್ಕಳಿಗೆ ನೀಡುತ್ತಿರುವುದು ವಿಷಾದಕರ ಸಂಗತಿ~ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದೇ ತೆರನಾದ ಉದ್ದೇಶವನ್ನು ಹೊಂದಿವೆ. ಪಠ್ಯಪುಸ್ತ ಕಗಳ ಬಗ್ಗೆ ಇಷ್ಟೆಲ್ಲ ವಿರೋಧಗಳು ವ್ಯಕ್ತವಾಗುತ್ತಿದ್ದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ತುಟಿ ಬಿಚ್ಚುತ್ತಿಲ್ಲ. ಜೆಡಿಎಸ್ ಚಕಾರ ಎತ್ತುತ್ತಿಲ್ಲ~ ಎಂದು ಕಿಡಿಕಾರಿದರು.

`ಶೂದ್ರ, ದಲಿತರನ್ನು ಪಠ್ಯದಲ್ಲಿ ಏಕವಚನ ದಲ್ಲಿ ಮತ್ತು ವೈದಿಕರನ್ನು ಬಹುವಚನದಲ್ಲಿ ಸಂಬೋಧಿಸಲಾಗಿದೆ. ದಲಿತರು, ಶೂದ್ರರ ಬಗ್ಗೆ ಓದುವ ಮಕ್ಕಳಿಗೆ ಕೆಟ್ಟ ಭಾವನೆ ಮೂಡುತ್ತದೆ. ಯಾವ ಶಬ್ದಗಳನ್ನು ಬರೆಯಬೇಕು ಎಂಬುದರ ಪ್ರಜ್ಞೆಯೂ ಪಠ್ಯ ರಚಿಸಿದವರಿಗೆ ಇಲ್ಲ. ಇತಿಹಾಸದ ಕಾಲಘಟ್ಟವನ್ನು ಹೇಳುವಾಗ ಪುಸ್ತಕದಲ್ಲಿ ಸುಳ್ಳು ಎದ್ದು ಕಾಣುತ್ತದೆ. ಬೇಡದ ವಿಷಯಗಳನ್ನು ಪಠ್ಯದಲ್ಲಿ ತುರುಕಿ ಸರ್ಕಾರಿ ಶಾಲೆ ಮಕ್ಕಳಿಗೆ ನೀಡುವ ಬದಲು ಸಚಿವರು ತಮ್ಮ ಮಕ್ಕಳಿಗೆ ಈ ಪಠ್ಯವನ್ನು ನೀಡಬೇಕು~ ಎಂದು ಗುಡುಗಿದರು.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮಾನಸ ಗಂಗೋತ್ರಿ ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಸದಾಶಿವ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಬಹುಜನ ವಿದ್ಯಾರ್ಥಿ ಸಂಘದ ಮಹಾರಾಜ ಕಾಲೇಜು ಘಟಕದ ಅಧ್ಯಕ್ಷ ಕಿರಣ್ಕುಮಾರ್ ಉಪಸ್ಥಿತರಿದ್ದರು. ಸಂಘದ ನಿತ್ಯಾನಂದ ಅವರು ಪಠ್ಯ ಕುರಿತು ಪ್ರಬಂಧ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.