ನವದೆಹಲಿ(ಪಿಟಿಐ): ಕರ್ನಾಟಕ, ಪಂಜಾಬ್ ಮತ್ತು ಕೋಲ್ಕತ್ತದಲ್ಲಿ ಮೂರು ‘ಮೆಗಾ ಫುಡ್ಪಾರ್ಕ್’ಗಳನ್ನು (ಬೃಹತ್ ಆಹಾರ ಸಂಸ್ಕರಣಾ ವಲಯ) ಮುಂದಿನ ಆರು ತಿಂಗಳಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕರ್ನಾಟಕದ ಫುಡ್ಪಾರ್ಕ್ ಬೆಂಗ ಳೂರಿನಲ್ಲಿ ನೆಲೆಗೊಳ್ಳಲಿದೆ. ಪ್ರತಿ ಯೊಂದು ಫುಡ್ಪಾರ್ಕ್ನಲ್ಲಿಯೂ ಕನಿಷ್ಠ ₨400 ಕೋಟಿಯಿಂದ ಗರಿಷ್ಠ ₨500 ಕೋಟಿವರೆಗೂ ಬಂಡವಾಳ ಹೂಡಿಕೆಯಾಗಲಿದೆ. ಈ ಮೂರು ಆಹಾರ ಸಂಸ್ಕರಣಾ ವಲಯಗಳಿಂದ ಒಟ್ಟು 90 ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗುವ ಸಾಧ್ಯತೆ ಇದೆ.

ಕೇಂದ್ರದ ಆಹಾರ ಸಂಸ್ಕರಣಾ ಸಚಿ ವಾಲಯ ದೇಶದಾದ್ಯಂತ ಒಟ್ಟು 30 ಬೃಹತ್ ಆಹಾರ ಸಂಸ್ಕರಣಾ ವಲಯ ಗಳನ್ನು ನಿರ್ಮಿಸಲು ಈ ಮೊದಲೇ ಅನು ಮೋದನೆ ನೀಡಿದೆ. ಇದರಲ್ಲಿ ಈಗಾಗಲೇ ಎರಡು ಫುಡ್ಪಾರ್ಕ್ಗಳು ಉತ್ತರಾ ಖಂಡ್ನ ಪತಂಜಲಿ ಮತ್ತು ಆಂಧ್ರಪ್ರದೇ ಶದ ಚಿತ್ತೂರ್ನಲ್ಲಿ ನೆಲೆಗೊಂಡಿವೆ. ಮುಂದಿನ ಆರು ತಿಂಗಳಲ್ಲಿ ಇನ್ನೂ ಮೂರು ಮೆಗಾ ಫುಡ್ಪಾರ್ಕ್ ಆರಂಭ ಗೊಳ್ಳಲಿವೆ ಎಂದು ಕೇಂದ್ರ ಆಹಾರ ಸಂಸ್ಕರಣೆ ಇಲಾಖೆ ಕಾರ್ಯದರ್ಶಿ ಸಿರಾಜ್ ಹುಸೇನ್ ಸುದ್ದಿಗಾರರಿಗೆ ತಿಳಿಸಿ ದರು.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಇಲ್ಲಿ ಮಂಗಳವಾರ ಆಯೋಜಿ ಸಿರುವ ‘ರಾಷ್ಟ್ರೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಶೃಂಗಸಭೆ’ಯ ನಂತರ ಅವರು ಸುದ್ದಿಗಾರರ ಜತೆ ಮಾತ ನಾಡಿದರು.

ದೇಶದ ರೈತರು ಬೆಳೆಯುವ ಆಹಾರ ಪದಾರ್ಥಗಳಿಗೆ ಸೂಕ್ತವಾದ ಧಾರಣೆ ಲಭಿಸುವಂತೆ ಮಾಡುವುದು, ಆಹಾರ ಪದಾರ್ಥ, ಹಣ್ಣು, ತರಕಾರಿ ವ್ಯರ್ಥವಾ ಗುವ ಪ್ರಮಾಣ ತಗ್ಗಿಸುವುದು ಹಾಗೂ ಆಹಾರ ಸಂಸ್ಕರಣೆ ಉದ್ಯಮದ ಸಾಮರ್ಥ್ಯ ಹೆಚ್ಚಿಸುವುದು, ಸಂಸ್ಕರಣಾ ಘಟಕಗಳ ಬೆಳವಣಿಗೆಗೆ ಶಕ್ತಿ ತುಂಬು ವುದು, ಆ ಮೂಲಕ ಸಂಸ್ಕರಿತ ಆಹಾರ ಪದಾರ್ಥಗಳ ವಿತರಣಾ ಜಾಲವನ್ನು ಸಮರ್ಥವಾಗಿಸುವುದು ಈ ಯೋಜನೆ ಹಿಂದಿನ ಉದ್ದೇಶ. ಕೇಂದ್ರ ಸರ್ಕಾರ ಪ್ರತಿ ವಲಯಕ್ಕೂ ತಲಾ ₨50 ಕೋಟಿ ವಿನಿಯೋಜಿಸಲಿದೆ. ಅಲ್ಲದೆ, ಪ್ರತಿ ಯೊಂದು ಆಹಾರ ಸಂಸ್ಕರಣಾ ವಲಯ ದಿಂದಲೂ ತಲಾ 30 ಸಾವಿರ ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ.

ಪ್ರತಿಯೊಂದು ಫುಡ್ಪಾರ್ಕ್ನ ಲ್ಲಿಯೂ 25ರಿಂದ 30 ಆಹಾರ ಸಂಸ್ಕ ರಣಾ ಘಟಕಗಳು ಇರುತ್ತವೆ. ಒಟ್ಟಾರೆ ಯಾಗಿ ₨400 ಕೋಟಿಯಿಂದ ₨500 ಕೋಟಿವರೆಗೂ ಹೂಡಿಕೆ ಆಗುವ ನಿರೀಕ್ಷೆ ಇದೆ ಎಂದು ಹುಸೇನ್ ವಿವರಿಸಿದರು.

ದೇಶದ ಆಹಾರ ಸಂಸ್ಕರಣಾ ಉದ್ಯಮ ವಲಯ ಕಳೆದ ಹತ್ತು ವರ್ಷ ಗಳಿಂದ ಸರಾಸರಿ ಶೇ 8.6ರಷ್ಟು ಪ್ರಗತಿ ದಾಖಲಿಸುತ್ತಿದೆ. ಇದು ಕೃಷಿ ಮತ್ತು ತಯಾರಿಕಾ ಉದ್ಯಮ ವಲಯದ ಪ್ರಗತಿ ಗಿಂತಲೂ ಹೆಚ್ಚಿನ ಪ್ರಮಾಣವಾಗಿದೆ ಎಂದು ಸಿರಾಜ್ ಗಮನ ಸೆಳೆದರು.

ವಾಸ್ತವವಾಗಿ ಈ ಮೂರೂ ಮೆಗಾ ಫುಡ್ಪಾರ್ಕ್ಗಳ ನಿರ್ಮಾಣ ಈಗಾ ಗಲೇ ಪೂರ್ಣಗೊಂಡಿರಬೇಕಿತ್ತು. ಆದರೆ, ಅಗತ್ಯ ಪ್ರಮಾಣದ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದು ಮತ್ತು ಆಯಾ ರಾಜ್ಯ ಸರ್ಕಾರಗಳಿಂದ ಕೆಲವು ಪ್ರಕ್ರಿಯೆ ಗಳಿಗೆ ಅನುಮತಿ ದೊರಕುವುದು ತಡ ವಾಯಿತು. ಹಾಗಾಗಿ ಈ ಮೂರು ಯೋಜನೆಗಳ ಅನುಷ್ಠಾನವೂ ವಿಳಂಬ ವಾಯಿತು ಎಂದು ವಿವರಿಸಿದರು.

ಇದಕ್ಕೂ ಮುನ್ನ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ಇರುವ ನಿಯಂತ್ರಣ ಕ್ರಮಗಳು ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ವಿಚಾರ ವಾಗಿ ಉದ್ಯಮ ಕ್ಷೇತ್ರದಲ್ಲಿ, ವೃತ್ತಿಪರ ರಲ್ಲಿ ಮತ್ತು ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾದುದು ‘ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ’ದ (ಎಫ್ಎಸ್ಎಸ್ಎಐ) ಜವಾಬ್ದಾರಿಯಾಗಿದೆ ಎಂದರು.

ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಗಳು ಸಹ ಆಹಾರ ಸುರಕ್ಷೆ ನಿಯಂತ್ರಣ ಕ್ರಮಗಳಿಗೊಳಪಟ್ಟು ಸಂಬಂಧಿಸಿದ ಪ್ರಾಧಿಕಾರದಿಂದ ಅನು ಮತಿ ಪಡೆದುಕೊಳ್ಳಬೇಕು ಎಂದು ಅವರು ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.