ಭಾನುವಾರ, ಮೇ 16, 2021
24 °C

7 ಅಪ್‌ಗೆ ಅಲ್ಲು ಅರ್ಜುನ್ ಸಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ದಿಲ್ ಬೋಲ್ ಐ ಫೀಲ್ ಅಪ್~ ಎಂದು ತೆಲುಗು ನಟ ಅಲ್ಲು ಅರ್ಜುನ್ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. 7 ಅಪ್ ಪಾನೀಯವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಅಲ್ಲು ಅರ್ಜುನ್ ವಿಭಿನ್ನವಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, 7 ಅಪ್ ಆಯೋಜಿಸಿರುವ `7 ಅಪ್ ಡಾನ್ಸ್ ಫಾರ್ ಮಿ-ಲೆಮನ್~ ಎಂಬ ನೃತ್ಯ ಸ್ಪರ್ಧೆಗೆ ಅಲ್ಲು ಅರ್ಜುನ್ ಸಾಥ್ ನೀಡಲಿದ್ದಾರೆ.ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಪುದುಚೆರಿ ಸೇರಿದಂತೆ 21 ನಗರಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ನೃತ್ಯಾಸಕ್ತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು 7 ಅಪ್ ಅವಕಾಶ ಒದಗಿಸಿದೆ.ಸ್ಪರ್ಧೆಯಲ್ಲಿ ಗೆದ್ದವರಿಗೆ 51 ಲಕ್ಷ ರೂಪಾಯಿ ಬಹುಮಾನ ನಿಗದಿಪಡಿಸಲಾಗಿದೆ. ನೃತ್ಯಾಸಕ್ತರು 7 ಅಪ್ ಅಥವಾ ನಿಂಬೂಸ್‌ನ ಏಳು ಪೆಟ್ ಲೇಬಲ್ ಅಥವಾ ಕ್ರೌನ್‌ಗಳನ್ನು ನೀಡಿ ಆಡಿಷನ್‌ಗೆ ನೋಂದಣಿ ಮಾಡಿಕೊಳ್ಳಬಹುದು.ಏಳು ಮಂದಿಯ ಒಂದು ತಂಡದೊಂದಿಗೆ ಭಾಗವಹಿಸಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈಗಳಲ್ಲಿ ನಡೆಯುವ ಸೆಂಟರ್ ಆಡಿಷನ್ಸ್‌ಗೆ ಅರ್ಹತೆ ಪಡೆಯಬಹುದು. ಡ್ಯಾನ್ಸ್ ವರ್ಕ್‌ಶಾಪ್ ಅವಕಾಶವೂ ಅಂತಿಮ ಸುತ್ತಿಗೆ ಆಯ್ಕೆಯಾದ ಸ್ಪರ್ಧಿಗಳಿಗಿದೆ. ಗ್ರಾಂಡ್ ಫೈನಲ್‌ನಲ್ಲಿ 7 ಅಪ್ ಬ್ರಾಂಡ್ ರಾಯಭಾರಿ ಅಲ್ಲು ಅರ್ಜುನ್ ಮತ್ತು ಸಿಂಬು ತೀರ್ಪುಗಾರರಾಗಿರುತ್ತಾರೆ.  ವಿವರಗಳಿಗೆ:www.7UP.in, http://www.ifeelup.in or http://www.facebook.com/7UP INDIA

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.