ನಿಪ್ಪಾಣಿ: ನಗರದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಬೆಳಗಾವಿ ಜಿಲ್ಲಾ `ಎಂಟನೇ' ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿಯೇ `ಎಂಟು' ಲೇಖಕರ ಒಟ್ಟು `ಎಂಟು' ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಡಾ. ಸ್ಮೀತಾ ಸುರೇಬಾನಕರ ವಿರಚಿತ `ಬೆಳಗಾವಿ ವಾಸ್ತುಶಿಲ್ಪ ನಿಧಿ' ಹಾಗೂ ಲಿಂ.ಜಿ.ಸಿ. ನಂದಿಮಠ ಅವರ `ಪರಮಾನಂದ ಸುಧೆ' ಕೃತಿಗಳನ್ನು ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಜಯಶೀಲಾ ಬ್ಯಾಕೂಡೆ ಅವರ `ಬಸವ ಪ್ರಭೆ' ಕೃತಿಯನ್ನು ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಗದೀಶ ರಾಠೋಡ ಅವರು ಬರೆದ `ಯುದ್ಧದಲ್ಲಿ ಗೆಲುವು ಇಲ್ಲ' ಪುಸ್ತಕವನ್ನು ಸಮ್ಮೇಳನದ ಅಧ್ಯಕ್ಷ ಸರಜೂ ಕಾಟ್ಕರ್, ಪ್ರಕಾಶ ಗಿರಿಮಲ್ಲನವರ ಬರೆದಿರುವ `ಡಾ.ಸರಜೂ ಕಾಟ್ಕರ್ ಬದುಕು ಬರಹ' ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಆಯುಕ್ತ ಮನು ಬಳಿಗಾರ, ಗೌರಿ ಕರ್ಕಿ ಅವರ `ನಾನು ಯಾರು?' ಪುಸ್ತಕವನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಆರ್.ಅನಂತನ್, ಡಾ.ಗುರುದೇವಿ ಹುಲೆಪ್ಪನವರಮಠ ಅವರು ರಚಿಸಿರುವ `ಚಿತ್ಕಿರಣ' ಕೃತಿಯನ್ನು ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಯ.ರು. ಪಾಟೀಲ ವಿರಚಿತ `ಎಲ್ಲರ ಅಮ್ಮ ಎಲ್ಲಮ್ಮ' ಪುಸ್ತಕವನ್ನು ಸಂಸದ ರಮೇಶ ಕತ್ತಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಆಯುಕ್ತ ಮನು ಬಳಿಗಾರ ಮಾತನಾಡಿ,'ಒಂದನೇ ಶತಮಾನದಿಂದಲೂ ಲಿಖಿತ ಸಾಹಿತ್ಯವನ್ನು ಹೊಂದಿರುವ ಶ್ರೀಮಂತ ಭಾಷೆ ಕನ್ನಡ. 5ನೇ ಶತಮಾನದ ಹೊತ್ತಿಗೆ ಶಾಸನಗಳನ್ನು ರಚಿಸುವಷ್ಟು ಭಾಷೆ ಶಕ್ತಿಯುತವಾಗಿ ಬೆಳೆದಿತ್ತು ಎಂಬುದನ್ನು ಹಲ್ಮಿಡಿ ಶಾಸನ ಸ್ಪಷ್ಟಪಡಿಸುತ್ತದೆ. ಅಂತೆಯೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಪ್ರಾಪ್ತವಾಗಿದೆ. ಹಿರಿತನದಲ್ಲಿ ಕನ್ನಡ ಭಾಷೆ ಇಂಗ್ಲೀಷ್ಗಿಂತಲೂ ಶ್ರೇಷ್ಠವಾಗಿದೆ ಎಂದರು.

ಕನ್ನಡರಿಗರು ಪರಭಾಷೆ ಮತ್ತು ಪರಧರ್ಮವನ್ನು ಸಹಿಸಿಕೊಂಡು ಬರುವ ಮನೋಧರ್ಮದವರಾಗಿದ್ದಾರೆ. ಸರ್ವ ಸಮಾನತೆ ಸಾರಿದ ವಿಶ್ವದ ಮೊದಲ ಭಾಷೆ ಕನ್ನಡ. ಸಂಗೀತದಲ್ಲೂ ಕರ್ನಾಟಕದ ಸಾಧನೆ ದೊಡ್ಡದಿದೆ. ಇಂತಹ ಶ್ರೀಮಂತ ಪರಂಪರೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.