ಶುಕ್ರವಾರ, ಮೇ 14, 2021
35 °C

8 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8,000 ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿರುವ ಶಿಕ್ಷಣ ಇಲಾಖೆ ನಿರ್ಧಾರ ಖಂಡನೀಯ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಹೇಳಿದೆ.ರಾಜ್ಯದಾದ್ಯಂತ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆದರೆ, ಸರ್ಕಾರ ಕಳೆದ ಎರಡು ವರ್ಷಗಳಿಂದ ಶಿಕ್ಷಕರ ನೇಮಕಾತಿ ಮಾಡದೇ ಇದೀಗ ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡು ಅತಿಥಿ ಶಿಕ್ಷಕರ ನೇಮಕ ಮಾಡಲು ತೀರ್ಮಾನಿಸಿದೆ. ಮೇಲ್ನೋಟಕ್ಕೆ ಈ ನಿರ್ಧಾರ ಉದ್ಯೋಗ ನೀಡುವ ಕ್ರಮ ಎನಿಸಿದರೂ, ಕಾಯಂ ಉದ್ಯೋಗದ ಪರಿಕಲ್ಪನೆಯನ್ನು ನಾಶ ಮಾಡಿ, ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಹುನ್ನಾರ ಅಡಗಿದೆ ಎಂದು ದೂರಿದೆ.ಪ್ರಸಕ್ತ ಸಂದರ್ಭದಲ್ಲಿ ಸಮಯಾವಕಾಶ ಸಾಲದು. ಆದ್ದರಿಂದ ಹಂಗಾಮಿಯಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬ ಸರ್ಕಾರದ ವಾದ ಪೊಳ್ಳುತನದಿಂದ ಕೂಡಿದೆ. ಒಂದೇ ಶಾಲೆಯಲ್ಲಿ ಕೆಲಸ ನಿರ್ವಹಿಸುವ ಚಿತ್ರಕಲೆ, ದೈಹಿಕ ಶಿಕ್ಷಣ, ಹೊಲಿಗೆ, ತೋಟಗಾರಿಕೆ ತರಬೇತಿ ನೀಡುವ ಶಿಕ್ಷಕರಿಗೆ ಮೂರು ಶಾಲೆಗಳನ್ನು ವಹಿಸಿ, ತಿಂಗಳಿಗೆ 5 ಸಾವಿರ ರೂಪಾಯಿ ವೇತನ ನಿಗದಿ ಪಡಿಸಿರುವ ಕ್ರಮದ ಹಿಂದೆ ಅವರನ್ನು ತೀವ್ರವಾಗಿ ಶೋಷಿಸುವ ಕುತಂತ್ರ ಅಡಗಿದೆ. ಅಲ್ಲದೆ, ಶಾಲಾ ಮುಖ್ಯೋಪಾಧ್ಯಾಯರಿಗೆ ನೇಮಕ ಅಧಿಕಾರ ನೀಡುವುದರಿಂದ ಹಲವು ಅಕ್ರಮ, ಸ್ವಜನ ಪಕ್ಷಪಾತಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಸರ್ಕಾರ ಕೂಡಲೇ ಈ ನಿರ್ಧಾರವನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಠಿ ಆಗ್ರಹಿಸಿದ್ದಾರೆ.ತರಬೇತಿಗೆ ನೇರ ಸಂದರ್ಶನ

 ರುಡ್ ಸೆಟ್ ಸಂಸ್ಥೆ 30 ದಿನಗಳ ಕಾಲ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್ ಸೆಟ್ ದುರಸ್ತಿ ತರಬೇತಿಯನ್ನು ಹಮ್ಮಿಕೊಂಡಿದೆ.ಸೆ.5 ರಿಂದ 10ರವರೆಗೂ ನೇರ ಸಂದರ್ಶನದಲ್ಲಿ ಹಾಜರಾಗಬಹುದಾಗಿದೆ. ಮೋಟಾರ್ ರೀವೈಂಡಿಂಗ್ ಮತ್ತು ಪಂಪ್ ಸೆಟ್ ದುರಸ್ತಿಯಲ್ಲಿ ಪ್ರಾಥಮಿಕ ಜ್ಞಾನವನ್ನು ಹೊಂದಿದವರಿಗೆ ಆದ್ಯತೆ. ಈ ತರಬೇತಿಗೆ ಭಾಗವಹಿಸಲು ಇಚ್ಚಿಸುವ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ 18 ರಿಂದ 45 ವರುಷದ ಒಳಗಿನ ಅರ್ಹ ನಿರುದ್ಯೋಗಿ ಯುವಕರು ನೇರ ಸಂದರ್ಶನದಲ್ಲಿ ಕಚೇರಿಯ ಸಮಯದಲ್ಲಿ ಭಾಗವಹಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಮುಖ್ಯ ರಸ್ತೆ, ಹಿನಕಲ್, ಮೈಸೂರು   570017 ಅಥವಾ ದೂರವಾಣಿ ಸಂಖ್ಯೆ 0821-2519663, ಮೊಬೈಲ್ 9449860466, 8884554510 ಸಂಪರ್ಕಿಸಿ ಪಡೆಯಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.