ಗುರುವಾರ , ಏಪ್ರಿಲ್ 15, 2021
26 °C

8.34 ಲಕ್ಷ ಪರಿಹಾರ ನೀಡಲು ಹೆಸ್ಕಾಂಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಪರಿ ವರ್ತಕ) ದುರಸ್ತಿ ಮಾಡುವಾಗ ವಿದ್ಯುತ್ ಅಪಘಾತ ದಿಂದ ಮೃತಪಟ್ಟ ಗ್ಯಾಂಗಮನ್‌ನ ಕುಟುಂಬಕ್ಕೆ 8.34 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾಯಂ ಜನತಾ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.ಹುಕ್ಕೇರಿ ತಾಲ್ಲೂಕಿನ ನಿಡಸೋಸಿ ಗ್ರಾಮದ ಶಿವಾನಂದ (22) ಎಂಬುವನು 2007 ರಲ್ಲಿ ಹೆಸ್ಕಾಂನ ಮಜದೂರ ಗ್ಯಾಂಗ್‌ಮನ್ ಕೆಲಸಕ್ಕೆ ಸೇರಿ ನಿಪ್ಪಾಣಿ ಸಮೀಪದ ಯಮಗರ್ಣಿ ಗ್ರಾಮದ ಮದರಸಾ ಸ್ಕೂಲ್ ಹತ್ತಿರದ ಟ್ರಾನ್ಸ್‌ಫಾರ್ಮರ್ (ಪರಿವರ್ತಕ) ದುರಸ್ತಿ ಮಾಡುವ ಸಂದರ್ಭದಲ್ಲಿ ಮೃತಪಟ್ಟಿದ್ದನು. ಇದಕ್ಕೆ ಹೆಸ್ಕಾಂ ನಿರ್ಲಕ್ಷ್ಯತನವೇ  ಕಾರಣ ಎಂದು ಪರಿಗಣಿಸಿ ಮೃತನ ಯುವಕನ ಪಾಲಕರಿಗೆ ಪರಿಹಾರ ನೀಡಬೇಕೆಂದು ಆದೇಶಿಸಲಾಗಿದೆ.ಕಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಜಿನದತ್ತ ದೇಸಾಯಿ, ಸದಸ್ಯರಾದ ವಿಶ್ವನಾಥ ಸತ್ತಿಗೇರಿ , ವೈಜೂಷಾ ಅಡಕೆ ಅವರನ್ನೊಳಗೊಂಡ ಕಾಯಂ ಜನತಾ ನ್ಯಾಯಾಲಯದ ಪೀಠವು  ಆದೇಶ ನೀಡಿದೆ.ಮೃತ ಶಿವಾನಂದನು 2007ರಲ್ಲಿ ಹೆಸ್ಕಾಂ ಕೆಲಸಕ್ಕೆ ಸೇರಿದ್ದರು. ನಿಪ್ಪಾಣಿಯ ಗ್ರಾಮಾಂತರ ಉಪವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ನಿಪ್ಪಾಣಿಯ ಸಮೀಪದ ಯಮಗರ್ಣಿ ಗ್ರಾಮದ ಮದರಸಾ ಸ್ಕೂಲ್ ಹತ್ತಿರದ ಟ್ರಾನ್ಸ್‌ಫಾರ್ಮರ್ ದುರಸ್ತಿಯನ್ನು 2009 ರ ಅಕ್ಟೋಬರ್ 5 ರಂದು ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.

ಶಿವಾನಂದ ಮತ್ತು ಹಿರಿಯ ಅಧಿಕಾರಿ ದಿನಕರ ಜಾಧವ ಅವರು ಟ್ರಾನ್ಸಫಾರ್ಮರ್ ದುರಸ್ತಿ ನಡೆಸುತ್ತಿದ್ದರು. ವಿದ್ಯುತ್ ಪೂರೈಕೆಯನ್ನು ತಡೆಹಿಡಿಯಬೇಕು ಎಂದು ಶಾಖಾ ಕಚೇರಿಗೆ ಹೇಳಲಾಗಿತ್ತು. ಆದರೆ ಕೆಲಸ ನಡೆದಿದ್ದಾಗಲೇ ವಿದ್ಯುತ್ ಪುಋಯಖೆ ಮಾಡಲಾಗಿತ್ತು. ಇದರಿಂದ ಶಿವಾನಂದ ಮೃತಪಡಬೇಕಾಯಿತು.ಮೃತನ ಪಾಲಕರು 9 ಲಕ್ಷ ರೂಪಾಯಿ ಪರಿಹಾರ ಕೊಡಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶಿವಾನಂದನು ಕೆಲಸ ನಿರ್ವಹಿಸುತ್ತಿದ್ದಾಗ ಕೈ ಕವಚ, ರಬ್ಬರ್ ಚಪ್ಪಲಿ ಧರಿಸದ ಕಾರಣ ಈ ಅಪಘಾತ ಸಂಭವಿಸಿದೆ  ಎಂದು ಹೆಸ್ಕಾಂ ವಾದ ಮಂಡಿಸಿತ್ತು. ಆದರೆ ನ್ಯಾಯಾಲಯವು ಈ ವಾದ ತಳ್ಳಿಹಾಕಿ 8.34 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.ಹೆಸ್ಕಾಂ ತನ್ನ ಸಿಬ್ಬಂದಿಯ ಸುರಕ್ಷತೆಯನ್ನು ಕಡೆಗಣಿಸಿರುವ ಹೆಸ್ಕಾಂ, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಅದೆಷ್ಟು ಕಾಳಜಿ ವಹಿಸುತ್ತದೆ ಎನ್ನುವುದು ತಮಗೆ ಅರ್ಥವಾಗುತ್ತಿಲ್ಲವೆಂದು ನ್ಯಾಯಾಲಯ ಕಳವಳವನ್ನು ವ್ಯಕ್ತಪಡಿಸಿದೆ.ತಪ್ಪಿತಸ್ಥ ಆರು ಜನ ಅಧಿಕಾರಿಗಳ ಮೇಲೆ ನಿಪ್ಪಾಣಿ ಪೊಲೀಸರು ಚಾರ್ಜಶೀಟ ದಾಖಲು ಮಾಡಿರುವುದು ಸೂಕ್ತ ಕ್ರಮ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ ಹೆಸ್ಕಾಂನವರು ಈ ಅಧಿಕಾರಿಗಳ ಮೇಲೆ ಇಲಾಖಾ ಕ್ರಮ ತೆಗೆದುಕೊಂಡಿದೆ ಎನ್ನುವುದನ್ನು ತಮ್ಮ ಗಮನಕ್ಕೆ ತರದಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎಂದು ನ್ಯಾಯಾಲಯ ತಿಳಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.